ಭ್ರಷ್ಟಾಚಾರ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ಚಾರ್ಜ್ ಶೀಟ್

ಗುರುಗ್ರಾಮ (ಹರಿಯಾಣ) – ಕಾಂಗ್ರೆಸ್ಸಿನ ಪ್ರಧಾನ ಕಾರ್ಯದರ್ಶಿ ಮತ್ತು ವಯನಾಡ್ ಸಂಸದೆ ಪ್ರಿಯಾಂಕಾ ವಾಡ್ರಾ ಅವರ ಪತಿ ರಾಬರ್ಟ್ ವಾಡ್ರಾ ಅವರಿಗೆ ಗುರುಗ್ರಾಮದಲ್ಲಿ 3.5 ಎಕರೆ ಭೂಮಿಯನ್ನು ಲಂಚದ ರೂಪದಲ್ಲಿ ನೀಡಲಾಗಿದೆ ಎಂದು ಆರೋಪಿಸಲಾಗಿದೆ. ಈ ಭೂಮಿಯನ್ನು ವಾಡ್ರಾ ಅವರು ನಂತರ ‘ಡಿ.ಎಲ್.ಎಫ್.’ ಎಂಬ ರಿಯಲ್ ಎಸ್ಟೇಟ್ ಸಂಸ್ಥೆಗೆ 58 ಕೋಟಿ ರೂಪಾಯಿಗಳಿಗೆ ಮಾರಾಟ ಮಾಡಿದರು. ಜಾರಿ ನಿರ್ದೇಶನಾಲಯ (‘ಇ.ಡಿ.’) ನ್ಯಾಯಾಲಯದಲ್ಲಿ ಸಲ್ಲಿಸಿದ ಚಾರ್ಜ್‌ಶೀಟನಲ್ಲಿ ಈ ಆರೋಪ ಮಾಡಲಾಗಿದೆ. ಗುರುಗ್ರಾಮದ ಸೆಕ್ಟರ್ 83 ರಲ್ಲಿರುವ ಈ ಭೂಮಿಗಾಗಿ ವಾಡ್ರಾ 7 ಕೋಟಿ 5 ಲಕ್ಷ ರೂಪಾಯಿಗಳ ಚೆಕ್ ನೀಡಿದ್ದಾರೆ ಎಂದು ಹೇಳಿಕೊಂಡಿದ್ದರು; ಆದರೆ ಈ ಚೆಕ್ ಎಂದಿಗೂ ನಗದಾಗಿಲ್ಲ. ಚಾರ್ಜ್‌ಶೀಟ್ ಪ್ರಕಾರ, ಸೋನಿಯಾ ಗಾಂಧಿಯವರ ಅಳಿಯ ಎಂಬ ಕಾರಣಕ್ಕೆ ವಾದ್ರಾ ಅವರಿಗೆ ಲಾಭ ದೊರೆತಿದೆ ಮತ್ತು ಆ ಸಮಯದಲ್ಲಿ ಹರಿಯಾಣದಲ್ಲಿ ಕಾಂಗ್ರೆಸ್ ಸರಕಾರವಿತ್ತು.
‘ಇ.ಡಿ.’ ಜುಲೈ 17, 2025 ರಂದು ಈ ಚಾರ್ಜ್‌ಶೀಟ್ ಸಲ್ಲಿಸಿದೆ. ಅದರಲ್ಲಿ, ‘ಓಂಕಾರೇಶ್ವರ ಪ್ರಾಪರ್ಟೀಸ್ ಪ್ರೈವೇಟ್ ಲಿಮಿಟೆಡ್’ ರಾಬರ್ಟ್ ವಾಡ್ರಾ ಅವರಿಗೆ ಲಂಚವಾಗಿ ಈ ಭೂಮಿಯನ್ನು ನೀಡಿದೆ ಎಂದು ಹೇಳಲಾಗಿದೆ. ಇದರ ಮೂಲಕ ‘ಸ್ಕೈಲೈಟ್’ನ ನಿರ್ದೇಶಕರಾದ ರಾಬರ್ಟ್ ವಾಡ್ರಾ ಅವರು ತಮ್ಮ ವೈಯಕ್ತಿಕ ಪರಿಚಯವನ್ನು ಬಳಸಿಕೊಂಡು ಹರಿಯಾಣದ ಆಗಿನ ನಗರ ಮತ್ತು ಗ್ರಾಮ ಯೋಜನೆ ಸಚಿವರಾದ ಭೂಪೇಂದರ ಸಿಂಗ್ ಹೂಡಾ ಅವರಿಂದ ಅದೇ ಗ್ರಾಮದಲ್ಲಿ ‘ಓಂಕಾರೇಶ್ವರ ಪ್ರಾಪರ್ಟೀಸ್’ಗೆ ವಸತಿ ಪರವಾನಗಿ (ಹೌಸಿಂಗ್ ಲೈಸೆನ್ಸ್) ಕೊಡಿಸುತ್ತಾರೆ ಎಂದು ಹೇಳಲಾಗಿದೆ.
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಹಸುವನ್ನು ರಾಷ್ಟ್ರಮಾತೆ ಎಂದು ಘೋಷಿಸಿ! – ಪೂ. ಕಿಶೋರ್ಶಾಸ್ತ್ರಿ ದವೆ : Declare Cow Mother of Nation
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ
‘ತ್ರಿವಳಿ ತಲಾಖ್’ ಮತ್ತು ‘ಬಹುಪತ್ನಿತ್ವ’ದ ವಿಷಯವಾಗಿ ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಗದ್ದಲ