ಉತ್ತರ ಪ್ರದೇಶದ ಲಖಿಂಪುರ ಖೇರಿಯ ಘಟನೆ

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ರಾಜ್ಯದ ಲಖಿಂಪುರ ಖೇರಿ ಜಿಲ್ಲೆಯ ಸೈಧರಿ ಗ್ರಾಮದ ನಿತಿನ್ ಎಂಬ ಯುವಕ ಮುಸ್ಲಿಂ ಯುವತಿಯೊಂದಿಗೆ ಪ್ರೇಮ ಸಂಬಂಧ ಹೊಂದಿದ್ದನು. ಇದರಿಂದ ಕೋಪಗೊಂಡ ವಸೀಮ್, ಕಲೀಮ್, ಅಜೀಜ್, ಅಸ್ಲಂ ಮತ್ತು ಪಪ್ಪು ಆತನನ್ನು ಭೇಟಿಯಾಗಿ ಅಮಾನವೀಯವಾಗಿ ಥಳಿಸಿದ್ದಾರೆ. ನಂತರ ಇದನ್ನು ಗಮನಿಸಿದ ಆತನ ಸಹೋದರ ಇದನ್ನು ವಿರೋಧಿಸಿದ್ದರಿಂದ ಆತನನ್ನು ಕೊಲೆ ಮಾಡಲಾಯಿತು. ಈ ಪ್ರಕರಣದಲ್ಲಿ ಪೊಲೀಸರು ಕೆಲವು ಹಂತಕರನ್ನು ಬಂಧಿಸಿದ್ದು, ಕೆಲವರು ತಲೆಮರೆಸಿಕೊಂಡಿದ್ದಾರೆ.
೧. ಆಗಸ್ಟ್ ೨ರಂದು ಬೆಳಗ್ಗೆ ನಿತಿನ್ ತನ್ನ ಗೆಳತಿಯನ್ನು ಭೇಟಿಯಾಗಲು ಮೆಹವಾಗಂಜ್‌ನ ಸೇತುವೆಯ ಬಳಿ ಹೋಗಿದ್ದನು. ಅಲ್ಲಿ ವಸೀಮ್, ಕಲೀಮ್, ಅಜೀಜ್, ಅಸ್ಲಂ ಮತ್ತು ಪಪ್ಪು ಎಂಬ ಐವರು ಲಾಠಿ, ದೊಣ್ಣೆಗಳು ಮತ್ತು ಮಾರಕಾಸ್ತ್ರಗಳೊಂದಿಗೆ ಬಂದು ನೇರವಾಗಿ ಆತನ ಮೇಲೆ ಹಲ್ಲೆ ನಡೆಸಿ ಥಳಿಸಿದರು. ಒಬ್ಬಾತ ನಿತಿನ್ ಕುತ್ತಿಗೆಗೆ ಮಾರಕಾಸ್ತ್ರದಿಂದ ಹಲ್ಲೆ ಮಾಡಿದನು. ಆತ ಸತ್ತಿದ್ದಾನೆಂದು ಭಾವಿಸಿ ನದಿಗೆ ಎಸೆದರು.
೨. ಆತನ ಸಂಬಂಧಿಕರಿಗೆ ಮಾಹಿತಿ ಸಿಕ್ಕಿದ ಕೂಡಲೇ ಆತನನ್ನು ನದಿಯಿಂದ ಹೊರಕ್ಕೆ ತೆಗೆದು ಆಸ್ಪತ್ರೆಗೆ ಕರೆದೊಯ್ದರು. ಆತನ ಸ್ಥಿತಿ ಗಂಭೀರವಾಗಿದೆ.
೩. ನದಿ ತೀರದಲ್ಲಿ ಜಮಾಯಿಸಿದ ಮುಸ್ಲಿಮರು ಮತ್ತು ನಿತಿನ್ ಕುಟುಂಬದವರ ನಡುವೆ ಜಗಳವಾಗಿದೆ. ಇದರಲ್ಲಿ ನಿತಿನ್ ಅಣ್ಣ ಅಮಿತನನ್ನು ಹಂತಕರು ಸುತ್ತುವರಿದು ಥಳಿಸಿದ್ದಾರೆ. ಆತನ ಮೇಲೆ ಬರ್ಬರವಾಗಿ ಹಲ್ಲೆ ಮಾಡಿದ್ದರಿಂದ ಆತ ಸಾವನ್ನಪ್ಪಿದನು.
ಸಂಪಾದಕೀಯ ನಿಲುವುಕೇವಲ ಲವ್ ಜಿಹಾದ್ ವಿರೋಧಿ ಕಾನೂನು ಸಾಕಾಗುವುದಿಲ್ಲ, ಇಂತಹ ಘಟನೆಗಳಲ್ಲಿ ಹಿಂದೂ ಯುವಕರನ್ನು ರಕ್ಷಿಸಲು ಸಹ ಕಠಿಣ ಕಾನೂನು ಜಾರಿಯಾಗಬೇಕು, ಇಲ್ಲದಿದ್ದರೆ ಹಿಂದೂ ಯುವಕರು ಕೂಡ ಪ್ರಾಣ ಕಳೆದುಕೊಳ್ಳುತ್ತಲೇ ಇರುತ್ತಾರೆ! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!