
ಚೆನ್ನೈ (ತಮಿಳುನಾಡು) – ‘ಆಪರೇಷನ್ ಸಿಂದೂರ’ ಚದುರಂಗ ಆಟದಂತ್ತಿತ್ತು ಏಕೆಂದರೆ, ಶತ್ರುಗಳು ಹೇಗೆ ಪ್ರತಿಕ್ರಿಯಿಸುತ್ತಾರೆ ಮತ್ತು ನಾವು ಏನು ಮಾಡಬೇಕು ಎಂದು ನಮಗೆ ಯಾವುದೇ ಅಂದಾಜು ಇರಲಿಲ್ಲ. ಇದು ‘ಗ್ರೇ ಝೋನ್’ ಆಗಿತ್ತು (ಅನಿಶ್ಚಿತತೆಯ ಪರಿಸ್ಥಿತಿ). ‘ಗ್ರೇ ಝೋನ್’ ಅಂದರೆ, ಇದು ಸಾಂಪ್ರದಾಯಿಕ ಯುದ್ಧವಲ್ಲ, ಆದರೆ ಇದು ಸಂಪೂರ್ಣವಾಗಿ ವಿಭಿನ್ನವಾದ ವಿಷಯವಾಗಿತ್ತು. ಸೇನೆಯು ಸಾಂಪ್ರದಾಯಿಕ ಕಾರ್ಯಾಚರಣೆಗಳಿಗಿಂತ ಭಿನ್ನವಾದ ಪಾತ್ರವನ್ನು ವಹಿಸಿತ್ತು. ಇದಕ್ಕಾಗಿ ಸರಕಾರವು ನಮಗೆ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಿತ್ತು. ನಾವು ಅವರಿಗೆ ‘ಚೆಕ್‌ಮೇಟ್’ ಮಾಡಲು ಪ್ರಯತ್ನಿಸುತ್ತಿದ್ದೆವು ಮತ್ತು ನಮ್ಮ ಪ್ರಾಣವನ್ನು ಪಣಕ್ಕಿಟ್ಟು ಶತ್ರುಗಳಿಗೆ ಗರಿಷ್ಠ ಹಾನಿಯನ್ನುಂಟುಮಾಡಲು ಪ್ರಯತ್ನಿಸುತ್ತಿದ್ದೆವು. ಇದೇ ಜೀವನ ಎಂದು ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರು ‘ಆಪರೇಷನ್ ಸಿಂದೂರ್’ ಬಗ್ಗೆ ಅಧಿಕೃತ ಮಾಹಿತಿ ನೀಡಿದ್ದಾರೆ. ಐಐಟಿ ಮದ್ರಾಸ್‌ನಲ್ಲಿ ‘ಅಗ್ನಿಶೋಧ-ಭಾರತೀಯ ಸೇನಾ ಸಂಶೋಧನಾ ಘಟಕ’ದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. ‘ಆಪರೇಷನ್ ಸಿಂದೂರ್ ಭಯೋತ್ಪಾದನೆ ವಿರುದ್ಧದ ಭಾರತದ ಹೋರಾಟದಲ್ಲಿ ಒಂದು ಹೊಸ ಅಧ್ಯಾಯ’ ಎಂಬ ವಿಷಯದ ಕುರಿತು ಅವರು ಭಾಷಣ ಮಾಡಿದರು. ‘ಆಪರೇಷನ್ ಸಿಂದೂರ್’ ಅನ್ನು ಸುನಿಯೋಜಿತ, ಗುಪ್ತಚರ ಆಧಾರಿತ ಕಾರ್ಯಾಚರಣೆ ಎಂದು ಅವರು ವಿವರಿಸಿದರು, ಇದು ಸೈದ್ಧಾಂತಿಕ ಬದಲಾವಣೆಯನ್ನು ಪ್ರತಿಬಿಂಬಿಸುತ್ತದೆ.
ಪಾಕಿಸ್ತಾನಕ್ಕೆ ಪಾಠ ಕಲಿಸಬೇಕೆಂದು ರಕ್ಷಣಾ ಸಚಿವ ದೃಢ ನಿರ್ಧಾರ ಮಾಡಿದ್ದರು!

ಜನರಲ್ ದ್ವಿವೇದಿ ಅವರು, ‘ಆಪರೇಷನ್ ಸಿಂದೂರ್ ಗೆ ಏಪ್ರಿಲ್ 23 ರಿಂದ ಸಿದ್ಧತೆಗಳು ಪ್ರಾರಂಭವಾದವು ಎಂದು ಹೇಳಿದರು. ಆ ಸಮಯದಲ್ಲಿ, ಮೂರು ಸೇನಾಪಡೆಗಳ ಮುಖ್ಯಸ್ಥರು ಮತ್ತು ರಕ್ಷಣಾ ಮಂತ್ರಿ ರಾಜನಾಥ ಸಿಂಗ್ ಅವರು ನಿರ್ಣಾಯಕ ಕ್ರಮ ತೆಗೆದುಕೊಳ್ಳುವುದು ಮತ್ತು ಪಾಕಿಸ್ತಾನಕ್ಕೆ ಪಾಠ ಕಲಿಸುವುದು ಅವಶ್ಯಕ ಎಂದು ದೃಢವಾಗಿ ನಿರ್ಧರಿಸಿದ್ದರು. ರಕ್ಷಣಾ ಸಚಿವರು, “ಇನ್ನು ಸಾಕು, ಈಗ ಕ್ರಮ ಅಗತ್ಯವಿದೆ” ಎಂದು ಹೇಳಿದ್ದರು. ಆ ಸಮಯದಲ್ಲಿ, ಮೂರು ಸೇನಾಪಡೆಗಳ ಮುಖ್ಯಸ್ಥರ ಮನಸ್ಸಿನಲ್ಲಿಯೂ ಇದೇ ಯೋಚನೆ ಇತ್ತು. “ನೀವು ಏನು ಮಾಡಬೇಕೆಂದು ನಿರ್ಧರಿಸಿ” ಎಂದು ರಾಜನಾಥ ಸಿಂಗ್ ಅವರು ನಮಗೆ ಹೇಳಿದರು. ಈ ನಂಬಿಕೆ ನಮ್ಮ ಪಾಲಿಗೆ ಅತ್ಯಂತ ದೊಡ್ಡದು ಮತ್ತು ಮುಖ್ಯವಾದದ್ದು, ನಾವು ಇದನ್ನು ಮೊದಲ ಬಾರಿಗೆ ಅನುಭವಿಸಿದೆವು. ಇದರಿಂದ ಸೈನಿಕರ ನೈತಿಕ ಸ್ಥೈರ್ಯ ಹೆಚ್ಚಾಗುತ್ತದೆ. ನಾವು ಯೋಜನೆ ರೂಪಿಸಿ ಭಯೋತ್ಪಾದಕರ ಅಡಗುತಾಣಗಳನ್ನು ನಾಶ ಮಾಡಿದೆವು. ಇದರಲ್ಲಿ ಹೆಚ್ಚಿನ ಸಂಖ್ಯೆಯ ಭಯೋತ್ಪಾದಕರು ಹತರಾದರು.
ಉರಿ ಮತ್ತು ಬಾಲಾಕೋಟ್‌ಗಿಂತ ಭಿನ್ನವಾಗಿತ್ತು ‘ಆಪರೇಷನ್ ಸಿಂದೂರ್’!
‘ಆಪರೇಷನ್ ಸಿಂದೂರ್’ ಉರಿ ಮತ್ತು ಬಾಲಾಕೋಟ್ ಕಾರ್ಯಾಚರಣೆಗಳಿಗಿಂತ ಭಿನ್ನವಾಗಿತ್ತು.
‘ಆಪರೇಷನ್ ಉರಿ’ ಸ್ಪಷ್ಟ ಸಂದೇಶ ನೀಡಲು ಜಾರಿಗೊಳಿಸಲಾಗಿತ್ತು. ಅದರಲ್ಲಿ ಭಯೋತ್ಪಾದಕರ ‘ಲಾಂಚ್ ಪ್ಯಾಡ್’ಗಳನ್ನು ನಾಶ ಮಾಡಲಾಯಿತು. 2019ರ ಬಾಲಾಕೋಟ್ ದಾಳಿ ಪ್ರತೀಕಾರವಾಗಿತ್ತು. ಪಾಕಿಸ್ತಾನದಲ್ಲಿರುವ ಭಯೋತ್ಪಾದಕ ತರಬೇತಿ ಕೇಂದ್ರಗಳನ್ನು ಗುರಿಯಾಗಿಸಿ ದಾಳಿ ಮಾಡಲಾಗಿತ್ತು. ಆದರೆ, ‘ಆಪರೇಷನ್ ಸಿಂದೂರ್’ ಅದಕ್ಕಿಂತ ಹೆಚ್ಚು ವಿಸ್ತಾರವಾಗಿತ್ತು. ಶತ್ರುಗಳ ಮನೆಗೆ ನುಗ್ಗಿ ಅವರ ಭಯೋತ್ಪಾದಕ ಅಡಗುತಾಣಗಳನ್ನು ನಾಶ ಮಾಡಲಾಯಿತು. ‘ಆಪರೇಷನ್ ಸಿಂದೂರ್’ ಎಂಬ ಈ ಚಿಕ್ಕ ಹೆಸರು ಇಡೀ ದೇಶವನ್ನು ಹೇಗೆ ಜೋಡಿಸುತ್ತದೆ ಎಂಬುದು ಮುಖ್ಯ. ಇದು ಇಡೀ ದೇಶಕ್ಕೆ ಪ್ರೇರಣೆ ನೀಡುವ ವಿಷಯ. ಅದಕ್ಕಾಗಿಯೇ ಇಡೀ ದೇಶ “ನೀವು ಇದನ್ನು ಏಕೆ ನಿಲ್ಲಿಸಿದ್ದೀರಿ?” ಎಂದು ಕೇಳುತ್ತಿತ್ತು. ಮತ್ತು ಅದಕ್ಕೆ ಸಂಪೂರ್ಣ ಉತ್ತರ ನೀಡಲಾಗಿದೆ. ಪಾಕಿಸ್ತಾನಿ ನಾಗರಿಕರನ್ನು, “ನೀವು ಗೆದ್ದಿದ್ದೀರಾ ಅಥವಾ ಸೋತಿದ್ದೀರಾ?” ಎಂದು ಕೇಳಿದರೆ, ಅವರು “ನಮ್ಮ ಸೇನಾ ಮುಖ್ಯಸ್ಥರು ‘ಫೀಲ್ಡ್ ಮಾರ್ಷಲ್’ ಆದರು” ಎಂದು ಹೇಳುತ್ತಾರೆ.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ