ಜಿಹಾದಿ ಪ್ರವೃತ್ತಿಯ ಬೆಂಬಲಿಗರ ಆರ್ಥಿಕ ಬಹಿಷ್ಕಾರಕ್ಕೆ ನಿರ್ಧಾರ

ಮಧ್ಯಪ್ರದೇಶ: ಖಚರೋಡ್‌ನಲ್ಲಿ ‘ಲವ್ ಜಿಹಾದ್’ ವಿರುದ್ಧ ಹಿಂದೂಗಳು ಬೀದಿಗೆ!

ಉಜ್ಜೈನ (ಮಧ್ಯಪ್ರದೇಶ) – ಆಗಸ್ಟ್ 7 ರಂದು ಇಲ್ಲಿನ ಖಚರೋಡ್‌ನಲ್ಲಿ ಹೆಚ್ಚುತ್ತಿರುವ ‘ಲವ್ ಜಿಹಾದ್’ ಘಟನೆಗಳ ವಿರುದ್ಧ ಹಿಂದೂ ಪಂಚಾಯತ್ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ, 5,000 ಕ್ಕೂ ಹೆಚ್ಚು ಜನರು ಉಜ್ಜೈನ ಗೇಟ್‌ನಿಂದ ಮೆರವಣಿಗೆ ನಡೆಸಿದರು. ಇದರಲ್ಲಿ ಸಾಧುಗಳು, ಸಂತರು, ಮಹಿಳೆಯರು, ಯುವಕರು ಮತ್ತು ಸಾಮಾಜಿಕ ಸಂಘಟನೆಗಳು ಭಾಗವಹಿಸಿದ್ದವು. ಈ ಸಂದರ್ಭದಲ್ಲಿ ಖಚರೋಡ್ ಮಾರುಕಟ್ಟೆಯನ್ನು ಸ್ವಯಂಪ್ರೇರಿತವಾಗಿ ಮುಚ್ಚಲಾಗಿತ್ತು. ಜಿಹಾದಿ ಪ್ರವೃತ್ತಿಯ ಬೆಂಬಲಿಗ ಸಮುದಾಯವನ್ನು ಆರ್ಥಿಕವಾಗಿ ಬಹಿಷ್ಕರಿಸಲು ಈ ಪಂಚಾಯತ್‌ನಲ್ಲಿ ಸರ್ವಾನುಮತದಿಂದ ನಿರ್ಧರಿಸಲಾಯಿತು.

1. ಈ ಕಾರ್ಯಕ್ರಮದ ಉದ್ದೇಶ ಹಿಂದೂ ಸಮಾಜವನ್ನು ಜಾಗೃತಗೊಳಿಸುವುದು ಮತ್ತು ಯುವತಿಯರ ಸುರಕ್ಷತೆಯನ್ನು ಖಚಿತಪಡಿಸುವುದು. ಆನಂದ್ ಗಿರಿ ಮಹಾರಾಜ್, ನರೇಂದ್ರ ಗಿರಿ ಮತ್ತು ನೇಪಾಳ ಸಿಂಗ್ ಡೋಡಿಯಾ ಅವರಂತಹ ಭಾಷಣಕಾರರು ಮೆರವಣಿಗೆಯಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದರು. ಈ ಘಟನೆಯು ಈ ಪ್ರದೇಶದಲ್ಲಿ ಲವ್ ಜಿಹಾದ್ ವಿರೋಧಿ ಜಾಗೃತಿಗೆ ಉತ್ತೇಜನ ನೀಡಿದೆ.

2. ಹಿಂದೂ ಜಾಗರಣ ಮಂಚ್‌ನ ಮಾಲ್ವಾ ಪ್ರಾಂತ್ಯದ ಸಂಘಟನಾ ಕಾರ್ಯದರ್ಶಿ ಮೋಹಿತ್ ಸೆಂಗರ್ ಅವರು ಮಾತನಾಡಿ, ಕೆಲವು ಜನರು ಸುಳ್ಳು ಪ್ರೀತಿಯ ಜಾಲದಲ್ಲಿ ¯ಹಿಂದೂ ಹೆಣ್ಣುಮಕ್ಕಳನ್ನು ಸಿಲುಕಿಸಿ ಜನಸಂಖ್ಯೆಯ ಅಸಮತೋಲನ ಸೃಷ್ಟಿಸಲು ಯತ್ನಿಸುತ್ತಿದ್ದಾರೆ ಎಂದರು.

ಸಂಪಾದಕೀಯ ನಿಲುವು

ಹಿಂದೂಗಳು ಎಲ್ಲೆಡೆ ಸ್ವಯಂಪ್ರೇರಿತರಾಗಿ ಇದೇ ರೀತಿ ಮಾಡಿದರೆ, ದೇಶದಲ್ಲಿ ಎಲ್ಲಾ ರೀತಿಯ ಜಿಹಾದ್ ಶೀಘ್ರದಲ್ಲೇ ಕೊನೆಗೊಳ್ಳುವುದು!