ಸಾಕಷ್ಟು ಹಣ ತೆಗೆದುಕೊಂಡರೂ ವಕೀಲರು ಸರಿಯಾಗಿ ಮೊಕದ್ದಮೆ ನಡೆಸಲಿಲ್ಲ ಎಂದು ಆರೋಪಿಗೆ ಕೋಪವಿತ್ತು

ಝಾನ್ಸಿ (ಉತ್ತರ ಪ್ರದೇಶ) – ಬಲಾತ್ಕಾರ ಪ್ರಕರಣದ ಆರೋಪಿಯೊಬ್ಬ ಮಾಜಿ ಹೆಚ್ಚುವರಿ ಜಿಲ್ಲಾ ಸರಕಾರಿ ವಕೀಲ ಭಾನ ಪ್ರಕಾಶ ಸಿರವಾರಿಯಾ ಅವರನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಬಲಾತ್ಕಾರಿಯ ಹೆಸರು ಸಚಿನ ಆಗಿದ್ದು, ಸಿರವಾರಿಯಾ ಅವರು ನ್ಯಾಯಾಲಯದಲ್ಲಿ ಅವನ ಪರವಾಗಿ ಮೊಕದ್ದಮೆ ನಡೆಸುತ್ತಿದ್ದರು. ಸೆಪ್ಟೆಂಬರ್ 19 ರಂದು ಸಚಿನಗೆ ಶಿಕ್ಷೆ ವಿಧಿಸುವವರಿದ್ದರು. ಇದರಿಂದ ಕೋಪಗೊಂಡ ಸಚಿನ ಸಿರವಾರಿಯಾ ಅವರನ್ನು ಹತ್ಯೆ ಮಾಡಿದ್ದಾನೆ.
ಪೊಲೀಸರು ಅವನನ್ನು ಬಂಧಿಸಿದ ನಂತರ, ಅವನು ತನ್ನ ತಪ್ಪನ್ನು ಒಪ್ಪಿಕೊಂಡು, “ನಾನು ಯಾರೊಂದಿಗೆ ಜೀವನ ನಡೆಸಲು ಪ್ರತಿಜ್ಞೆ ಮಾಡಿದ್ದೇನೋ, ಯಾರನ್ನು ನಾನು ಮದುವೆಯಾಗಲು ಬಯಸಿದ್ದೇನೋ, ಆಕೆಯ ಮೇಲೆ ಬಲಾತ್ಕಾರ ಮಾಡಿರುವ ಆರೋಪದ ಮೇಲೆ ನನ್ನನ್ನು ತಪ್ಪಿತಸ್ಥ ಎಂದು ಹೇಳಲಾಗಿದೆ. ಸಿರವಾರಿಯಾ ಅವರು ನನ್ನಿಂದ ಸಾಕಷ್ಟು ಹಣವನ್ನು ತೆಗೆದುಕೊಂಡರು; ಆದರೆ ಅವರು ನನ್ನ ಮೊಕದ್ದಮೆಯನ್ನು ಸರಿಯಾಗಿ ನಡೆಸಲಿಲ್ಲ, ಅದಕ್ಕಾಗಿಯೇ ನಾನು ಅವರನ್ನು ಕೊಂದೆ” ಎಂದು ಹೇಳಿದ್ದಾನೆ. ಆಗಸ್ಟ್ 5 ರಂದು ಸಿರವಾರಿಯಾ ಅವರ ಮೃತದೇಹ ಮನೆಯಲ್ಲಿ ಪತ್ತೆಯಾಗಿತ್ತು. ಪೊಲೀಸರು ಈ ಪ್ರಕರಣದ ಬಗ್ಗೆ ತನಿಖೆ ನಡೆಸಿದಾಗ, ಸಚಿನ ವರೆಗೆ ತಲುಪಲು ಸಾಧ್ಯವಾಯಿತು.
ಹಿಂದೂ ವಿವಾಹ ಕಾಯ್ದೆಯಡಿ ವಿವಾಹ ಮಾನ್ಯವಾಗಲು ಕೇವಲ ವಿವಾಹ ಪ್ರಮಾಣಪತ್ರವಿದ್ದರೆ ಸಾಲದು !
ವಾರಾಣಸಿ: ದಾಲ್ಮಂಡಿ ರಸ್ತೆ ಅಗಲೀಕರಣ ಯೋಜನೆಯಡಿ ೫ ಮಸೀದಿಗಳ ಮೇಲೆ ಕ್ರಮ
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!