
ಮುಂಬಯಿ – ಜಗತ್ತು ಭಾರತವನ್ನು ಅದರ ಹೆಚ್ಚುತ್ತಿರುವ ಆರ್ಥಿಕತೆಗಾಗಿ ಅಲ್ಲ, ಬದಲಿಗೆ ಅದರ ಆಧ್ಯಾತ್ಮಿಕ ಜ್ಞಾನಕ್ಕಾಗಿ ಗುರುತಿಸುತ್ತದೆ. ಭಾರತವು ಇತರ ದೇಶಗಳಿಗೆ ಸಹಾಯ ಮಾಡುತ್ತದೆ, ಆದ್ದರಿಂದ ನಮ್ಮ ದೇಶ ಶ್ರೇಷ್ಠವಾಗಿದೆ. ಭಾರತವು ಎಲ್ಲರಿಗೂ ಸಂತೋಷವನ್ನು ಹಂಚುತ್ತದೆ. ಎಲ್ಲ ದೇಶಗಳು ಭಾರತದ ಆಧ್ಯಾತ್ಮಿಕ ಜ್ಞಾನದಿಂದಾಗಿ ಅದನ್ನು ವಿಶ್ವಗುರು ಎಂದು ಪರಿಗಣಿಸುತ್ತವೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ.ಪೂ. ಸರಸಂಘಚಾಲಕ ಡಾ. ಮೋಹನಜಿ ಭಾಗವತ ಅವರು ಮಾರ್ಗದರ್ಶನ ನೀಡಿದರು. ಅವರು ಇಲ್ಲಿನ ಶಿವ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದರು.

ಅವರು ಮಾತು ಮುಂದುವರೆಸಿ,
1. ಭಾರತವು ಶೀಘ್ರದಲ್ಲೇ 3 ಲಕ್ಷ ಕೋಟಿ ರೂಪಾಯಿಗಳ ವಹಿವಾಟು ಹೊಂದಿರುವ ಆರ್ಥಿಕತೆಯಾಗಲಿದೆ. ಚೀನಾ ಮತ್ತು ಅಮೆರಿಕ ಈಗಾಗಲೇ ಇದನ್ನು ಸಾಧಿಸಿವೆ.
2. ಅಮೆರಿಕ ಮತ್ತು ಚೀನಾ ಸೇರಿದಂತೆ ಈ ಜಗತ್ತಿನಲ್ಲಿ ಅನೇಕ ಶ್ರೀಮಂತ ದೇಶಗಳಿವೆ; ಆದರೆ ಭಾರತದಂತಹ ಆಧ್ಯಾತ್ಮಿಕ ಜ್ಞಾನ ಯಾವುದೇ ದೇಶದಲ್ಲಿಲ್ಲ. ಭಾರತವು ಕೇವಲ ಆಧ್ಯಾತ್ಮಿಕ ಜ್ಞಾನದ ಕ್ಷೇತ್ರದಿಂದಲೇ ಜಾಗತಿಕ ನಾಯಕನಾಗಲು ಸಾಧ್ಯವಿದೆ.
3. ನಾವು ನಮ್ಮ ಹಬ್ಬಗಳನ್ನು ಸಂತೋಷದಿಂದ ಆಚರಿಸಿದಾಗ ಅಥವಾ ನಮ್ಮ ಸಂಸ್ಕೃತಿಯನ್ನು ಸರಿಯಾಗಿ ಅನುಸರಿಸಿದಾಗ ಆಧ್ಯಾತ್ಮಿಕ ಸಂಬಂಧ ಬೆಳೆಯಬಹುದು.
4. ನಾವು ನಮ್ಮ ಒಳ್ಳೆಯತನವನ್ನು ಇತರರಿಗೂ ಕಲಿಸಬೇಕು. ನಾವು ಭಗವಾನ್ ಶಿವನಂತೆ ತ್ಯಾಗ ಮಾಡಬೇಕು. ಕೆಟ್ಟದ್ದನ್ನು ನಮ್ಮಲ್ಲಿಯೇ ಇಟ್ಟುಕೊಳ್ಳಬೇಕು. ಜಗತ್ತು ಪ್ರಸ್ತುತ ಬದಲಾವಣೆಯ ಕಾಲಘಟ್ಟದಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿ, ವ್ಯಕ್ತಿಯು ಸರಿಯಾದ ಸಮಯದಲ್ಲಿ ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳುವುದು ಅವಶ್ಯಕವಾಗಿದೆ.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ