ವಾಯುಸೇನಾ ಮುಖ್ಯಸ್ಥ ಎ.ಪಿ. ಸಿಂಗ್ ಅವರ ಹೇಳಿಕೆ.

ಬೆಂಗಳೂರು – ‘ಆಪರೇಷನ್ ಸಿಂದೂರ’ ಸಮಯದಲ್ಲಿ ಭಾರತವು ಪಾಕಿಸ್ತಾನಕ್ಕೆ ಭಾರಿ ಹಾನಿ ಮಾಡಿದೆ. ನಾವು ಅವರ 5 ಯುದ್ಧ ವಿಮಾನಗಳು ಮತ್ತು ಒಂದು ‘ಅವಾಕ್ಸ್’ (ವಾಯು ಕಣ್ಗಾವಲಿಗಾಗಿ ಇರುವ ದೊಡ್ಡ ವಿಮಾನ) ವಿಮಾನವನ್ನು ಹೊಡೆದುರುಳಿಸಿದ್ದೇವೆ ಎನ್ನುವ ಮಾಹಿತಿಯನ್ನು ವಾಯುಸೇನಾ ಮುಖ್ಯಸ್ಥ (ಏರ್ ಚೀಫ್ ಮಾರ್ಷಲ್) ಎ.ಪಿ. ಸಿಂಗ್ ಅವರು ಎರಡು ತಿಂಗಳ ನಂತರ ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅಧಿಕೃತವಾಗಿ ತಿಳಿಸಿದರು. ಈ ಸಮಯದಲ್ಲಿ ಅವರು ದಾಳಿಯ ಕೆಲವು ಚಿತ್ರಗಳನ್ನೂ ತೋರಿಸಿದರು.
🚨 IAF Chief, A.P. Singh:
In Op Sindoor, 🇮🇳 shot down 5 Pakistani fighter jets & 1 AWACS, destroyed drones/UAVs.S-400 proved decisive ✅
Bahawalpur terror hub wiped out 💥
Tri-force coordination + political will forced 🇵🇰 to retreat in just 80–90 hrs.
No praise is enough for… pic.twitter.com/6E4wKNwYZD
— Sanatan Prabhat (@SanatanPrabhat) August 9, 2025
ಏರ್ ಚೀಫ್ ಮಾರ್ಷಲ್ ಎ.ಪಿ. ಸಿಂಗ್ ಮಾತು ಮುಂದುವರೆಸಿ,
1. ನಮ್ಮ ವಾಯು ರಕ್ಷಣಾ ವ್ಯವಸ್ಥೆಯು ಉತ್ತಮವಾಗಿ ಕಾರ್ಯನಿರ್ವಹಿಸಿದೆ. ನಾವು ಇತ್ತೀಚೆಗೆ ಖರೀದಿಸಿದ ‘ಎಸ್-400’ ವಾಯು ರಕ್ಷಣಾ ವ್ಯವಸ್ಥೆ ನಿರ್ಣಾಯಕ ಪಾತ್ರ ವಹಿಸಿದೆ. ಪಾಕಿಸ್ತಾನದ ಬಳಿ ದೀರ್ಘ-ಶ್ರೇಣಿಯ ಬಾಂಬ್‌ಗಳಿದ್ದವು, ಆದರೆ ಅವರು ಒಂದನ್ನೂ ಬಳಸಲು ಸಾಧ್ಯವಾಗಲಿಲ್ಲ ಏಕೆಂದರೆ ಅವು ವಾಯು ರಕ್ಷಣೆಯನ್ನು ಭೇದಿಸಲು ಸಾಧ್ಯವಾಗಲಿಲ್ಲ.
2. ವಿಮಾನಗಳ ಜೊತೆಗೆ, ನಾವು ದೊಡ್ಡ ಸಂಖ್ಯೆಯಲ್ಲಿ ಯುಎವಿ (ಮಾನವರಹಿತ ವಿಮಾನ) ಮತ್ತು ಡ್ರೋನ್‌ಗಳನ್ನೂ ನಾಶಪಡಿಸಿದ್ದೇವೆ. ಅವರ ಕೆಲವು ಕ್ಷಿಪಣಿಗಳು ನಮ್ಮ ಗಡಿಯಲ್ಲಿ ಬಿದ್ದಿದ್ದವು. ನಾವು ಅದರ ಅವಶೇಷಗಳನ್ನು ಸಂಗ್ರಹಿಸಿದ್ದೇವೆ. ಈ ಅವಶೇಷಗಳ ಅಧ್ಯಯನ ನಡೆಯುತ್ತಿದ್ದು, ಇದರಿಂದ ಅವು ಎಲ್ಲಿಂದ ಉಡಾಯಿಸಲ್ಪಟ್ಟವು, ಯಾವ ಮಾರ್ಗವನ್ನು ಅನುಸರಿಸಿದ್ದವು, ಕ್ಷಿಪಣಿ ಉಡಾವಣೆ ವ್ಯವಸ್ಥೆ ಹೇಗಿದೆ ಮತ್ತು ಅದರ ಸಾಮರ್ಥ್ಯ ಎಷ್ಟು ಎಂಬ ಮಾಹಿತಿ ದೊರೆಯಲಿದೆ.
3. ಪಾಕಿಸ್ತಾನದ ಬಹಾವಲ್‌ಪುರದಲ್ಲಿ ನಡೆದ ದಾಳಿಗೆ ಮೊದಲು ಮತ್ತು ನಂತರದ ಚಿತ್ರಗಳು ಎಲ್ಲರ ಮುಂದೆ ಇವೆ. ಅಲ್ಲಿ ಏನೂ ಉಳಿದಿಲ್ಲ. ಈ ಚಿತ್ರಗಳನ್ನು ಕೇವಲ ಉಪಗ್ರಹದಿಂದ ಮಾತ್ರ ತೆಗೆದಿಲ್ಲ, ಸ್ಥಳೀಯ ಮಾಧ್ಯಮಗಳು ನಾಶವಾದ ಕಟ್ಟಡಗಳ ಒಳಗಿನ ಚಿತ್ರಗಳನ್ನೂ ತೋರಿಸಿವೆ.
4. ಈ ಯಶಸ್ಸಿಗೆ ಒಂದು ಪ್ರಮುಖ ಕಾರಣ ರಾಜಕೀಯ ಇಚ್ಛಾಶಕ್ತಿಯಾಗಿತ್ತು. ನಮಗೆ ಸ್ಪಷ್ಟ ಸೂಚನೆಗಳನ್ನು ನೀಡಲಾಗಿತ್ತು. ನಮಗೆ ಸಂಪೂರ್ಣ ಸ್ವಾತಂತ್ರ್ಯವಿತ್ತು. ನಾವು ಎಷ್ಟು ದೂರ ಹೋಗಬೇಕು ಎಂದು ನಾವು ನಿರ್ಧರಿಸುತ್ತಿದ್ದೆವು. ನಮಗೆ ಯೋಜನೆ ರೂಪಿಸಲು ಮತ್ತು ಕಾರ್ಯರೂಪಕ್ಕೆ ತರಲು ಸಂಪೂರ್ಣ ಸ್ವಾತಂತ್ರ್ಯವಿತ್ತು. ಮೂರೂ ಪಡೆಗಳ ನಡುವೆ ಸಮನ್ವಯವಿತ್ತು. ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (ಸಿಡಿಎಸ್ – ಮೂರೂ ಸೇನಾ ಪಡೆಗಳ ಮುಖ್ಯಸ್ಥ) ಈ ಹುದ್ದೆಯಿಂದ ನಿಜವಾಗಿಯೂ ಪರಿಣಾಮ ಬೀರಿತು. ಅವರು ನಮ್ಮನ್ನು ಒಗ್ಗೂಡಿಸಲು ಇದ್ದರು. ಎಲ್ಲ ವ್ಯವಸ್ಥೆಗಳನ್ನು ಒಗ್ಗೂಡಿಸುವಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರರೂ ಪ್ರಮುಖ ಪಾತ್ರ ವಹಿಸಿದರು.
5. ಇದು ಒಂದು ಉನ್ನತ ತಂತ್ರಜ್ಞಾನದ ಯುದ್ಧವಾಗಿತ್ತು. ಅವರಿಗೆ 80 ರಿಂದ 90 ಗಂಟೆಗಳ ಯುದ್ಧದಲ್ಲಿ ಇದನ್ನು ಮುಂದುವರಿಸಿದರೆ, ಪಾಕಿಸ್ತಾನವು ಅದರ ದೊಡ್ಡ ಬೆಲೆಯನ್ನು ತೆರಬೇಕಾಗುತ್ತದೆ ಎನ್ನುವಷ್ಟು ನಾವು ಹಾನಿ ಮಾಡಿದೆವು. ಅದಕ್ಕಾಗಿಯೇ ಅವರು ಹಿಂದೆ ಸರಿದರು.
ಸಂಪಾದಕೀಯ ನಿಲುವುಭಾರತೀಯ ಸೇನೆಯ ಈ ಸಾಧನೆಯನ್ನು ಎಷ್ಟು ಹೊಗಳಿದರೂ ಕಡಿಮೆಯೇ! ಈಗ ಅವರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿ, ಪಾಕಿಸ್ತಾನವನ್ನು ನಾಶಪಡಿಸಿ, ಭಾರತದಲ್ಲಿನ ಜಿಹಾದಿ ಭಯೋತ್ಪಾದನೆಯನ್ನು ಶಾಶ್ವತವಾಗಿ ನಿರ್ಮೂಲನ ಮಾಡಬೇಕು ಎಂದು ಭಾರತೀಯರು ಬಯಸುತ್ತಾರೆ! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!