|
(‘ಸರ್ ತನ್ ಸೆ ಜುದಾ’ ಎಂದರೆ ತಲೆಯನ್ನು ದೇಹದಿಂದ ಬೇರ್ಪಡಿಸುವುದು)

ಅಮರಾವತಿ – ಮಾಜಿ ಸಂಸದೆ ಸವ. ನವನೀತ ರಾಣಾ ಅವರಿಗೆ ಕೊಲೆ ಬೆದರಿಕೆ ಹಾಕಿದ ಪ್ರಕರಣದಲ್ಲಿ 8 ರಿಂದ 10 ಮುಸ್ಲಿಂ ಯುವಕರು ಭಾಗಿಯಾಗಿದ್ದಾರೆ ಮತ್ತು ಕೊಲೆಗೆ ಸಂಚು ರೂಪಿಸಲಾಗಿದೆ, ಅದಕ್ಕಾಗಿ ಸಭೆಗಳೂ ನಡೆದಿವೆ ಎಂದು ಸ್ವತಂತ್ರ ಶಾಸಕ ರವಿ ರಾಣಾ ಗಂಭೀರವಾಗಿ ಆರೋಪಿಸಿದ್ದಾರೆ. ಪೊಲೀಸರು ಮುಖ್ಯ ಆರೋಪಿ ‘ಇಸಾ’ ಎಂಬ ಮುಸ್ಲಿಂ ಯುವಕನನ್ನು ಮಧ್ಯಪ್ರದೇಶದಿಂದ ಬಂಧಿಸಿದ್ದಾರೆ. ‘ನಾನು ಇಂದು ಕಾನೂನಿನ ಭಾಷೆಯಲ್ಲಿ ಮಾತನಾಡುತ್ತಿದ್ದೇನೆ, ಆದರೆ ಮುಂದಿನ ಬಾರಿ ಮನೆಗೆ ನುಗ್ಗಿ ಹೊಡೆಯುತ್ತೇನೆ’ ಎಂದು ಶಾಸಕ ರಾಣಾ ಎಚ್ಚರಿಕೆ ನೀಡಿದ್ದಾರೆ.

ಅವರು ಮಾತು ಮುಂದುವರೆಸಿ,
1. ಆರೋಪಿಗಳು ನವನೀತ ರಾಣಾ ಅವರಿಗೆ ಅಶ್ಲೀಲ ಭಾಷೆಯಲ್ಲಿ ನಿಂದಿಸಿ ಬೆದರಿಕೆ ಹಾಕಿದ್ದರು. ‘ಸರ್ ತನ್ ಸೆ ಜುದಾ’ ಎಂದು ಸಹ ಹೇಳಿದ್ದರು.
2. ಈ ಘಟನೆಯಲ್ಲಿ ಮುಸ್ಲಿಂ ಯುವಕರು ಭಾಗಿಯಾಗಿರುವುದರಿಂದ, ಇಡೀ ಮುಸ್ಲಿಂ ಸಮುದಾಯವನ್ನು ನಾನು ದೂಷಿಸುವುದಿಲ್ಲ; ಆದರೆ ಸಮುದಾಯವು ಇಂತಹ ಪ್ರವೃತ್ತಿಗಳನ್ನು ನಿಯಂತ್ರಿಸಬೇಕು, ಇಲ್ಲದಿದ್ದರೆ ಮುಂದಿನ ಬಾರಿ ಕಾನೂನು-ಸುವ್ಯವಸ್ಥೆಯನ್ನು ಪಕ್ಕಕ್ಕಿಡಬೇಕಾಗಬಹುದು.
3. ಯಾವುದೇ ಮಹಿಳೆಯ ಬಗ್ಗೆ ಅಶ್ಲೀಲ ಭಾಷೆ ಬಳಸುವವರಿಗೆ ‘ಏಟಿಗೆ ಎದಿರೇಟು’ ನೀಡಲಾಗುವುದು. ಯುವ ಸ್ವಾಭಿಮಾನ ಪಕ್ಷದ ಕಾರ್ಯಕರ್ತರು ಇಂತಹ ವಿಕೃತಿಯನ್ನು ಸಹಿಸುವುದಿಲ್ಲ.
ಸಂಪಾದಕೀಯ ನಿಲುವುಜನಪ್ರತಿನಿಧಿಗಳಿಗೆ ಕೊಲೆ ಬೆದರಿಕೆಗಳು ಬರುತ್ತಿದ್ದರೆ, ಸಾಮಾನ್ಯ ಜನರ ಸುರಕ್ಷತೆಯ ಸ್ಥಿತಿ ಏನಾಗಿರಬಹುದು? |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!