ಶ್ರೀ ಶಿವ ಪ್ರತಿಷ್ಠಾನ ಹಿಂದೂಸ್ಥಾನ ಸಂಸ್ಥೆಯು ಪೊಲೀಸ್ ಇಲಾಖೆಗೆ ಮನವಿಯ ಮೂಲಕ ಬೇಡಿಕೆ!

ಅಹಿಲ್ಯಾನಗರ — ಶ್ರೀ ಕ್ಷೇತ್ರ ಶನಿ ಶಿಂಗಣಾಪುರ ಪ್ರದೇಶದಲ್ಲಿ ಮಸೀದಿಯ ಮೇಲೆ ಅಳವಡಿಸಿದ ಅನಧಿಕೃತ ಭೋಂಗಾಗಳು ಪ್ರತಿದಿನ ಬೆಳಿಗ್ಗೆ, ಸಂಜೆ ಮತ್ತು ಇತರ ಸಮಯಗಳಲ್ಲಿಯೂ ಜೋರಾಗಿ ಕೂಗುತ್ತಿವೆ. ಈ ಭೋಂಗಾಗಳಿಗೆ ಯಾವುದೇ ಸರಕಾರದ ಅನುಮತಿ ಅಥವಾ ಪೊಲೀಸ್ ಅನುಮತಿ ಇಲ್ಲ. ಇದರಿಂದ ಶಾಲಾ ಮಕ್ಕಳಿಗೆ, ವೃದ್ಧರಿಗೆ, ರೋಗಿಗಳಿಗೆ ಮತ್ತು ನಾಗರಿಕರಿಗೆ ಶಬ್ದದಿಂದ ತೊಂದರೆ ಉಂಟಾಗುತ್ತಿದೆ. ನ್ಯಾಯಾಲಯದ ಆದೇಶ ಇದ್ದರೂ, ಸಂಬಂಧಿತ ಮಸೀದಿಗಳಿಂದ ಕಿವಿಗೆ ನೋವುಂಟುಮಾಡುವಷ್ಟು ಜೋರಾಗಿ ಭೋಂಗಾ ನಾದ ಮಾಡಿ ಧ್ವನಿ ಮಾಲಿನ್ಯ ಉಂಟುಮಾಡಲಾಗುತ್ತಿದೆ. ಆದ್ದರಿಂದ ಅನಧಿಕೃತ ಭೋಂಗಾಗಳ ಮೇಲೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಶ್ರೀ ಶಿವ ಪ್ರತಿಷ್ಠಾನ ಹಿಂದೂಸ್ಥಾನ ಪರವಾಗಿ ಸೋನಾಯಿ ಪೊಲೀಸ್ ಇನ್ಸ್‌ಪೆಕ್ಟರ್ ಮೇಢೆ ಮತ್ತು ಸೋನಾಯಿ ಮಹಿಳಾ ಪೊಲೀಸ್ ಹವಾಲ್ದಾರ್ ಅಂಜಲಿ ಶಿಂಡೆ ಅವರಿಗೆ ಮನವಿ ಸಲ್ಲಿಸಲಾಯಿತು. ಕ್ರಮ ಕೈಗೊಳ್ಳದಿದ್ದರೆ, ಶ್ರೀ ಶಿವ ಪ್ರತಿಷ್ಠಾನ ಹಿಂದೂಸ್ಥಾನ ಹಾಗೂ ಗ್ರಾಮದ ಎಲ್ಲಾ ಜನರ ಪರವಾಗಿ ನ್ಯಾಯಾಲಯವನ್ನು ಮೊರೆಹೋಗಲಾಗುತ್ತದೆ ಎಂಬ ಎಚ್ಚರಿಕೆಯನ್ನು ಮನವಿಯಲ್ಲಿ ನೀಡಲಾಗಿದೆ. ಈ ಸಂದರ್ಭದಲ್ಲಿ ಹನುಮಾನವಾಡಿ, ಕಾಂಗೋಣಿ, ಖರವಂಡಿ, ವಡಾಳಾ ಮೊದಲಾದ ವಿವಿಧ ಗ್ರಾಮಗಳಿಂದ ಗೋರಖ ಭರಾಡೆ, ಕೃಷ್ಣ ಖುಳೆ, ಗಣೇಶ್ ಬೆಲೆಕರ್ ಸೇರಿದಂತೆ ಗ್ರಾಮಸ್ಥರು ಮತ್ತು ಕಾರ್ಯಕರ್ತರು ಹಾಜರಿದ್ದರು. (ಭೋಂಗಾಗಳ ಮೇಲೆ ದೃಢವಾದ ಕ್ರಮ ಕೈಗೊಳ್ಳಲು ಮುಂದಾದ ಗ್ರಾಮಸ್ಥರಿಗೆ ಅಭಿನಂದನೆಗಳು! – ಸಂಪಾದಕರು)
ಸಂಪಾದಕೀಯ ನಿಲುವುಮಸೀದಿಗಳ ಮೇಲಿನ ಅನಧಿಕೃತ ಭೋಂಗಾಗಳನ್ನು ತೆಗೆದುಹಾಕುವ ನ್ಯಾಯಾಲಯದ ಆದೇಶವನ್ನು ಪೊಲೀಸ್ ಇಲಾಖೆ ಕಡೆಗಣಿಸಿದಲ್ಲಿ, ಹಿಂದೂತ್ವನಿಷ್ಠರ ಮನವಿಯ ಮೇರೆಗೆ ಆದರೂ ಅವರು ಕ್ರಮ ಕೈಗೊಳ್ಳುವರೇ? ಆದ್ದರಿಂದ, ನ್ಯಾಯಾಲಯದ ಆದೇಶವನ್ನು ಪಾಲಿಸದ ಕೆಲವು ಪೊಲೀಸ್ ಅಧಿಕಾರಿಗಳನ್ನು ವಜಾ ಮಾಡದೆ ಇಂತಹ ಘಟನೆಗಳು ನಿಲ್ಲುವುದಿಲ್ಲ ಅಷ್ಟೇ ನಿಜ! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!