ಭಾರತೀಯ ತೈಲ ಸಂಸ್ಥೆಗಳು ರಷ್ಯಾದಿಂದ ತೈಲವನ್ನು ಖರೀದಿಸಬೇಕೇ ಅಥವಾ ಬೇಡವೇ ಎಂಬುದರ ಕುರಿತು ವಿಚಾರ ಮಾಡುವರು ! – ಅಮೆರಿಕಾದ ಸುದ್ದಿ ಜಾಲತಾಣ ‘ಬ್ಲೂಮ್‌ಬರ್ಗ್’ ವರದಿ

ವಾಷಿಂಗ್ಟನ್ (ಅಮೆರಿಕಾ) – ಭಾರತದ ತೈಲ ಆಮದಿನಲ್ಲಿ ರಷ್ಯಾದ ತೈಲದ ಪಾಲು ಅತಿ ದೊಡ್ಡದಾಗಿದೆ. ಭಾರತ ತನ್ನ ಆಮದಿನ ಶೇಕಡಾ 36ರಷ್ಟು ತೈಲವನ್ನು ಕೇವಲ ರಷ್ಯಾದಿಂದಲೇ ಆಮದು ಮಾಡಿಕೊಳ್ಳುತ್ತದೆ. ಅಮೆರಿಕಾ ಭಾರತದ ಆಮದಿನ ಮೇಲೆ ಶೇಕಡಾ 50ರಷ್ಟು ತೆರಿಗೆ ವಿಧಿಸಿರುವ ಕಾರಣ, ಭಾರತೀಯ ತೈಲ ಕಂಪನಿಗಳು ಮುಂದಿನ ಖರೀದಿ ಅವಧಿಯಲ್ಲಿ ರಷ್ಯಾದಿಂದ ತೈಲವನ್ನು ಖರೀದಿಸಬೇಕೇ ಅಥವಾ ಬೇಡವೇ ಎಂದು ವಿಚಾರ ಮಾಡುತ್ತಿವೆ. ಇದಕ್ಕಾಗಿ ಅವರು ಸರಕಾರದ ನೀತಿಗಳತ್ತ ಗಮನ ಹರಿಸುತ್ತಿದ್ದಾರೆ. ‘ಬ್ಲೂಮ್‌ಬರ್ಗ್’ ಎಂಬ ಅಮೆರಿಕಾದ ಸುದ್ದಿ ಜಾಲತಾಣವು ಭಾರತೀಯ ತೈಲ ಕಂಪನಿಗಳ ಖರೀದಿ ಯೋಜನೆಗಳಲ್ಲಿ ನೇರವಾಗಿ ತೊಡಗಿರುವ ಕೆಲವು ವ್ಯಕ್ತಿಗಳನ್ನು ಉಲ್ಲೇಖಿಸಿ ಈ ವರದಿಯನ್ನು ಪ್ರಕಟಿಸಿದೆ. ಈ ವರದಿಯಲ್ಲಿ ‘ಇಂಡಿಯನ್ ಆಯಿಲ್ ಕಾರ್ಪೊರೇಷನ್’, ‘ಭಾರತ್ ಪೆಟ್ರೋಲಿಯಂ’ ಮತ್ತು ‘ಹಿಂದೂಸ್ತಾನ್ ಪೆಟ್ರೋಲಿಯಂ’ ಸಂಸ್ಥೆಗಳ ಹೆಸರುಗಳನ್ನು ಉಲ್ಲೇಖಿಸಲಾಗಿದೆ.

ಮತ್ತೊಂದೆಡೆ, ಭಾರತೀಯ ಅಧಿಕಾರಿಗಳು ಅಮೆರಿಕಾಗೆ ಯಾವ ಕ್ಷೇತ್ರಗಳಲ್ಲಿ ವ್ಯಾಪಾರ ವಿನಾಯಿತಿಗಳನ್ನು ನೀಡಬಹುದು ಎಂಬುದರ ಕುರಿತು ಆಯ್ಕೆಗಳನ್ನು ಹುಡುಕುತ್ತಿದ್ದಾರೆ. ಮುಂದಿನ ನಿರ್ಣಯವನ್ನು ತೆಗೆದುಕೊಳ್ಳುವ ಭಾರತ ಅಮೆರಿಕಾದೊಂದಿಗೆ ವ್ಯಾಪಾರ ಒಪ್ಪಂದದ ಸಾಧ್ಯತೆಯನ್ನು ಪರಿಶೀಲಿಸುತ್ತಿದೆ. ಇದೇ ಸಂದರ್ಭದಲ್ಲಿ, ಸ್ಥಳೀಯ ರೈತರಿಗೆ ಹಾನಿಯಾಗದಂತೆ ಸೀಮಿತ ವ್ಯಾಪಾರ ವಿನಾಯಿತಿಗಳನ್ನು ನೀಡಲು ಸಾಧ್ಯವೇ ಎಂಬುದನ್ನು ಪ್ರಧನ್ಯವಾಗಿ ವಿಚಾರ ಮಾಡಲಾಗುತ್ತಿದೆ.

ಭವಿಷ್ಯದಲ್ಲಿ ತೈಲ ಬಳಕೆಯಲ್ಲಿ ಭಾರತ ಎರಡನೇ ಸ್ಥಾನಕ್ಕೇರಲಿದೆ!

ವೇಗವಾಗಿ ಬೆಳೆಯುತ್ತಿರುವ ಭಾರತೀಯ ಆರ್ಥಿಕತೆ ಮತ್ತು ಜನಸಂಖ್ಯೆಯನ್ನು ಪೋಷಿಸಲು, ಭಾರತವು ರಷ್ಯಾದ ಕಚ್ಚಾ ತೈಲದ ಮೇಲೆ ಬಹಳಷ್ಟು ಅವಲಂಬಿತವಾಗಿದೆ. ಭಾರತವು ಈಗಾಗಲೇ ವಿಶ್ವದ ಮೂರನೇ ಅತಿದೊಡ್ಡ ತೈಲ ಗ್ರಾಹಕ ದೇಶವಾಗಿದೆ. ಮುಂದಿನ ಐದು ವರ್ಷಗಳಲ್ಲಿ ಭಾರತವು ತೈಲ ಬಳಕೆಯಲ್ಲಿ ಚೀನಾವನ್ನು ಹಿಂದಿಕ್ಕುವ ನಿರೀಕ್ಷೆಯಿದೆ ಎಂದು ‘ರಾಯಿಟರ್ಸ್’ ಸುದ್ದಿ ಸಂಸ್ಥೆಯು ವರದಿ ಮಾಡಿದೆ.

ಸಂಪಾದಕೀಯ ನಿಲುವು

ಉದ್ದೇಶಪೂರ್ವಕವಾಗಿ ಇಂತಹ ಸುದ್ದಿಗಳನ್ನು ಪ್ರಸಾರ ಮಾಡುವ ಮೂಲಕ ಜಗತ್ತನ್ನು ದಾರಿತಪ್ಪಿಸಿ ಭಾರತದ ಮೇಲೆ ಒತ್ತಡ ಹೇರಲು ಪ್ರಯತ್ನಿಸಲಾಗುತ್ತಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ!