
ವಾಷಿಂಗ್ಟನ್ (ಅಮೇರಿಕಾ) – ಅಮೇರಿಕಾ ಭಾರತದ ಮೇಲೆ ಶೇಕಡ 50% ರಷ್ಟು ಆಮದು ಶುಲ್ಕ ವಿಧಿಸಲಿದೆ ಎಂದು ಘೋಷಿಸಿದ ನಂತರ ‘ ವಾಲ್ಮಾರ್ಟ್,’ ಅಮೆಜಾನ್, ಟಾರ್ಗೆಟ್ ಇವುಗಳಂತಹ ಪ್ರಮುಖ ಅಮೇರಿಕನ್ ಕಂಪನಿಗಳು ಭಾರತೀಯ ವಸ್ತುಗಳ ಬೇಡಿಕೆ (ಆರ್ಡರ್) ತಡೆ ಹಿಡಿದಿವೆ. ಭಾರತೀಯರ ರಫ್ತುದಾರರಿಗೆ ಅಮೆರಿಕಾದ ಖರೀದಿದಾರರಿಂದ ಮುಂದಿನ ಸೂಚನೆ ಬರುವವರೆಗೂ ಬಟ್ಟೆಯ ರಫ್ತು ನಿಲ್ಲಿಸುವಂತೆ ಬರೆದ ವಿನಂತಿ ಪತ್ರಗಳು ಮತ್ತು ಇ-ಮೇಲ್ ಗಳು ದೊರೆತಿವೆ.
ಹೆಚ್ಚಿರುವ ಆಮದು ಶುಲ್ಕದಿಂದ ಅಮೇರಿಕಾ ಕಂಪನಿಗಳು ಭಾರತೀಯರ ರಫ್ತುದಾರರು ಖರ್ಚಿನ ಭಾರ ಹೊರಬೇಕು ಎಂದು ಅನಿಸುತ್ತದೆ. ಆಮದು ಶುಲ್ಕದಿಂದ ಅಮೇರಿಕಾದಲ್ಲಿ ಮಾರಾಟ ಮಾಡಲಾಗುವ ಭಾರತೀಯ ವಸ್ತುಗಳ ಬೆಲೆ ಶೇಖಡ 30% ರಿಂದ 35% ರಷ್ಟು ಹೆಚ್ಚುವ ಸಾಧ್ಯತೆ ಇದೆ. ವೆಲ್ಸ ಪನ್ ಲಿವಿಂಗ್ , ಗೋಕುಲ ದಾಸ್ ಎಕ್ಸ್ಪೋರ್ಟ್ಸ , ಇಂಡೋ ಕೌಂಟ್ ಮತ್ತು ಟ್ರೈಡೆಂಟ್ ಇಂತಹ ಭಾರತದಲ್ಲಿನ ಪ್ರಮುಖ ರಫ್ತುದಾರರು ತಮ್ಮ ವಸ್ತುಗಳನ್ನು ಶೇಖಡ 40% ರಿಂದ 70% ರಷ್ಟು ಬೆಲೆಗೆ ಅಮೇರಿಕಾದಲ್ಲಿ ಮಾರುತ್ತಾರೆ. ಅಮೇರಿಕಾಗೆ ಹೋಗುವ ಸರಕು ನಿಲ್ಲಿಸಿರುವುದರಿಂದ ವ್ಯಾಪಾರದಲ್ಲಿ ಶೇಕಡ 40% ರಿಂದ 50% ರಷ್ಟು ಇಳಿಕೆ ಆಗುವ ಸಾಧ್ಯತೆ ಇದೆ. ಭಾರತದಿಂದ ಹೆಚ್ಚಾಗಿ ಅಮೇರಿಕಾಗೆ ಬಟ್ಟೆಗಳನ್ನು ರಫ್ತು ಮಾಡಲಾಗುತ್ತದೆ; ಆದರೆ ಈಗ ಬಾಂಗ್ಲಾದೇಶ ಮತ್ತು ವಿಯೆತ್ನನಾಮ್ ಗೆ ಅಮೇರಿಕಾದ ಬಟ್ಟೆಗಳ ಬೇಡಿಕೆ ಹೋಗುವ ಸಾಧ್ಯತೆ ಇದೆ.
ಸಂಪಾದಕೀಯ ನಿಲುವು146 ಕೋಟಿ ಭಾರತೀಯರು ಇಂತಹ ಸಂಸ್ಥೆಗಳನ್ನು ಬಹಿಷ್ಕರಿಸಿದರೆ ಮಾತ್ರ ಅವುಗಳಿಗೆ ತಕ್ಕ ಪಾಠ ಕಲಿಸಬಹುದು! |
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation