ಇನ್ನೂ ಬಹಳಷ್ಟು ಬಾಕಿ ಇದೆ!

ಭಾರತದ ಮೇಲೆ ಶೇ 50 ರಷ್ಟು ಆಮದು ಸುಂಕ ವಿಧಿಸಿದ ಮೇಲೆ ಟ್ರಂಪ್ ಅವರ ಸೂಚಕ ಹೇಳಿಕೆ

ವಾಷಿಂಗ್ಟನ್ ಡಿಸಿ (ಅಮೇರಿಕಾ) – ಕೇವಲ 8 ಗಂಟೆಗಳಾಗಿವೆ. ನಿಮಗೆ ಇನ್ನೂ ಬಹಳಷ್ಟು ಆಗುತ್ತಿರುವುದನ್ನು ನೋಡಲು ಸಿಗಲಿದೆ. ಇವು ತೀರಾ ದ್ವಿತೀಯ ನಿರ್ಬಂಧಗಳು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ್ದಾರೆ. ‘ಚೀನಾದಂತಹ ಇತರ ದೇಶಗಳು ಕೂಡ ರಷ್ಯಾದಿಂದ ತೈಲ ಖರೀದಿಸುತ್ತಿರುವಾಗ, ಕೇವಲ ಭಾರತದ ಬಗ್ಗೆ ಮಾತ್ರ ಏಕೆ ಕಠಿಣ ನಿಲುವು ತೆಗೆದುಕೊಳ್ಳುತ್ತಿದ್ದೀರಿ?’ ಎಂದು ಟ್ರಂಪ್ ಅವರನ್ನು ಪ್ರಶ್ನಿಸಲಾಯಿತು. ಟ್ರಂಪ್ ಅವರ ಈ ಉತ್ತರದಿಂದ, ಮುಂಬರುವ ದಿನಗಳಲ್ಲಿ ಅಮೆರಿಕವು ಭಾರತ ಸೇರಿದಂತೆ ರಷ್ಯಾದೊಂದಿಗೆ ವ್ಯಾಪಾರ ಸಂಬಂಧಗಳನ್ನು ಇಟ್ಟುಕೊಂಡಿರುವ ದೇಶಗಳ ಮೇಲೆ ‘ಗೌಣ ನಿರ್ಬಂಧಗಳನ್ನು’ ವಿಧಿಸಬಹುದು ಎಂಬುದು ಸ್ಪಷ್ಟವಾಗಿದೆ.