ಅಯ್ಯರ್ಲ್ಯಾಂಡ್‌ನಲ್ಲಿ ಆರು ವರ್ಷದ ಭಾರತೀಯ ಮೂಲದ ಹುಡುಗಿಯ ಮೇಲೆ ಸ್ಥಳೀಯ ಹುಡುಗರಿಂದ ಹಲ್ಲೆ – Ireland Indian Child Attack

‘ಭಾರತಕ್ಕೆ ಹಿಂದಿರುಗಿ ಹೋಗು’ ಎಂಬ ಬೆದರಿಕೆಯನ್ನೂ ಸಹ ಹಾಕಿದ್ದಾರೆ!

ಡಬ್ಲಿನ್ (ಅಯ್ಯರ್ಲ್ಯಾಂಡ್) – ಅಯ್ಯರ್ಲ್ಯಾಂಡ್‌ನಲ್ಲಿ ಆರು ವರ್ಷದ ಭಾರತೀಯ ಮೂಲದ ಹುಡುಗಿಯ ಮೇಲೆ ಆಕ್ರಮಣ ನಡೆದಿದೆ. ಈ ಹುಡುಗಿ ವಾಟರ್ಫೋರ್ಡ್‌ನಲ್ಲಿರುವ ತನ್ನ ಮನೆಯ ಹೊರಗೆ ಆಟವಾಡುತ್ತಿದ್ದಾಗ, 12 ರಿಂದ 14 ವರ್ಷ ವಯಸ್ಸಿನ ಕೆಲವು ಹುಡುಗರು ಈಕೆಗೆ ಅಮಾನವೀಯವಾಗಿ ಥಳಿಸಿದ್ದಾರೆ. ಈ ಹುಡುಗರು ಹುಡುಗಿಯ ಗುಪ್ತಾಂಗದ ಮೇಲೆ ಸೈಕಲ್ ಚಕ್ರದಿಂದ ಹಲ್ಲೆ ಮಾಡಿದ್ದಾರೆ. ‘ಭಾರತಕ್ಕೆ ಹಿಂದಿರುಗಿ ಹೋಗು’ ಎಂದು ಬೆದರಿಕೆ ಹಾಕಿದ್ದಾರೆ. ಕೆಲವು ದಿನಗಳ ಹಿಂದೆ ಡಬ್ಲಿನ್‌ನಲ್ಲಿ ಭಾರತೀಯ ಕ್ಯಾಬ್ ಚಾಲಕನ ಮೇಲೂ ಸಹ ಅನಾವಶ್ಯಕವಾಗಿ ಆಕ್ರಮಣ ಮಾಡಲಾಗಿತ್ತು.

ಹುಡುಗಿಯ ತಾಯಿ ಎಂಟು ವರ್ಷಗಳಿಂದ ಅಯ್ಯರ್ಲ್ಯಾಂಡ್‌ನಲ್ಲಿ ವಾಸಿಸುತ್ತಿದ್ದಾರೆ ಮತ್ತು ಇತ್ತೀಚೆಗೆ ಅವರು ಅಯ್ಯರ್ಲ್ಯಾಂಡ್‌ನ ಪೌರತ್ವವನ್ನು ಪಡೆದಿದ್ದಾರೆ. 12 ರಿಂದ 14 ವರ್ಷದೊಳಗಿನ ಹುಡುಗರು ತನ್ನ ಮಗಳ ಮೇಲೆ ಆಕ್ರಮಣ ಮಾಡಿದ್ದಾರೆ ಎಂದು ಆಕೆಯ ತಾಯಿ ಹೇಳಿದ್ದಾರೆ.

ಸಂಪಾದಕೀಯ ನಿಲುವು

  • ಕಳೆದ ಕೆಲವು ದಿನಗಳಿಂದ ವಿದೇಶದಲ್ಲಿ ಭಾರತೀಯರ ಮೇಲೆ ಜನಾಂಗೀಯ ದ್ವೇಷದ ಆಕ್ರಮಣದ ಘಟನೆಗಳು ಹೆಚ್ಚಾಗುತ್ತಿವೆ. ಇದನ್ನು ಭಾರತ ಸರಕಾರ ಗಂಭೀರವಾಗಿ ಪರಿಗಣಿಸಿ, ಭಾರತೀಯರ ಸುರಕ್ಷತೆಗಾಗಿ ಗಂಭೀರ ಕ್ರಮಗಳನ್ನು ತೆಗೆದುಕೊಳ್ಳಬೇಕು!
  • ಪಾಶ್ಚಾತ್ಯ ದೇಶಗಳು ಭೌತಿಕವಾಗಿ ಅಭಿವೃದ್ಧಿ ಹೊಂದಿದ್ದರೂ, ಅವುಗಳ ಮನಸ್ಥಿತಿ ಹಿಂದುಳಿದಿದೆ ಮತ್ತು ಕಲುಷಿತವಾಗಿದೆ ಎಂಬುದನ್ನು ಇಂತಹ ಘಟನೆಗಳು ಬಹಿರಂಗಪಡಿಸುತ್ತವೆ!