|

ಲಕ್ಷಣಪುರಿ (ಉತ್ತರ ಪ್ರದೇಶ) – ದೇಶಾದ್ಯಂತ ವೇಗವಾಗಿ ಬೆಳೆಯುತ್ತಿರುವ ಆನ್ ಲೈನ್ ಜೂಜಾಟದಿಂದ (‘ರಿಯಲ್ ಮನಿ ಗೇಮಿಂಗ್’ನಿಂದ) ಲಕ್ಷಾಂತರ ಕುಟುಂಬಗಳು ನಾಶವಾಗುತ್ತಿದ್ದು, ಸಾವಿರಾರು ಕೋಟಿ ರೂಪಾಯಿಗಳ ಲೂಟಿಯಾಗುತ್ತಿದೆ. ಇದನ್ನು ಕೇವಲ ರಾಜ್ಯ ಮಟ್ಟದಲ್ಲಿ ಕಾನೂನು ಮಾಡಿ ನಿಯಂತ್ರಿಸುವುದು ಸಾಕಾಗುವುದಿಲ್ಲ, ಬದಲಾಗಿ ರಾಷ್ಟ್ರೀಯ ಮಟ್ಟದಲ್ಲಿ ಕಠಿಣ ಮತ್ತು ಪರಿಣಾಮಕಾರಿ ಕಾನೂನು ಮಾಡುವುದು ಅತ್ಯಂತ ಅವಶ್ಯಕವಾಗಿದೆ. ಇದಕ್ಕಾಗಿ ಹಿಂದೂ ಜನಜಾಗೃತಿ ಸಮಿತಿಯ ‘ಸುರಾಜ್ಯ ಅಭಿಯಾನ’ವು ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಬ್ರಿಜೇಶ ಪಾಠಕ ಅವರನ್ನು ಖುದ್ದಾಗಿ ಭೇಟಿ ಮಾಡಿ, ಭಾರತೀಯ ಸಂವಿಧಾನದ ಕಲಂ 252ರ ಅಡಿಯಲ್ಲಿ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಮನವಿ ಮಾಡಿತು. ಇದಕ್ಕೆ ಉಪ ಮುಖ್ಯಮಂತ್ರಿ ಬ್ರಿಜೇಶ ಪಾಠಕ ಅವರು ಸಕಾರಾತ್ಮಕವಾಗಿ ಸ್ಪಂದಿಸಿ, ಶೀಘ್ರದಲ್ಲೇ ಕೇಂದ್ರ ಸರಕಾರಕ್ಕೆ ಇಂತಹ ಪ್ರಸ್ತಾವನೆಯನ್ನು ಕಳುಹಿಸುವುದಾಗಿ ಭರವಸೆ ನೀಡಿದರು.
🎰 Online Gambling Ruining Lives! 🚨
UP Dy CM Brajesh Pathak
(@brajeshpathakup) assures action after meeting with @SurajyaCampaign a wing of @HinduJagrutiOrg 🙏📝 Will send proposal to Centre under Article 252 to ban online gambling nationwide!
🧨 Families broken, ₹1000s of… pic.twitter.com/IwoTGaoS6T
— Sanatan Prabhat (@SanatanPrabhat) August 6, 2025
ಈ ಸಂದರ್ಭದಲ್ಲಿ ‘ಸುರಾಜ್ಯ ಅಭಿಯಾನ’ದ ಉತ್ತರ ಪ್ರದೇಶ ಸಂಯೋಜಕ ಶ್ರೀ. ವಿಶ್ವನಾಥ ಕುಲಕರ್ಣಿ, ಉತ್ತರ ಪ್ರದೇಶ ಸರಕಾರದ ಜಂಟಿ ಕಾರ್ಯದರ್ಶಿ ಶಶಿಕಾಂತ ಶುಕ್ಲಾ, ಸಚಿವಾಲಯ ಸಂಘದ ಮಾಜಿ ಅಧ್ಯಕ್ಷ ಹರಿಶರಣ ಮಿಶ್ರಾ, ಉತ್ತರ ಪ್ರದೇಶ ಸ್ಥಳೀಯ ಸ್ವಯಂ ಆಡಳಿತ ಕೇಂದ್ರೀಯ ಕಂದಾಯ ಸೇವಾ ನೌಕರರ ಸಂಘದ ಅಧ್ಯಕ್ಷ ಪ್ರಶಾಂತ ಮಿಶ್ರಾ ಮತ್ತು ದಿಲೀಪ ಗುಪ್ತಾ ಉಪಸ್ಥಿತರಿದ್ದರು.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!