ವರ್ಷಕ್ಕೆ 117 ಲಕ್ಷ ಕೋಟಿ ರೂಪಾಯಿ ಗಳಿಸುತ್ತಿರುವ ಪಾಕಿಸ್ತಾನದ ಭಿಕ್ಷುಕರು – Pakistan Begging Industry Revenue

ಸುಮಾರು 4 ಕೋಟಿ ಪಾಕಿಸ್ತಾನಿಯರು ಭಿಕ್ಷೆ ಬೇಡುತ್ತಾರೆ

ಇಸ್ಲಾಮಾಬಾದ (ಪಾಕಿಸ್ತಾನ) – ಪಾಕಿಸ್ತಾನದಲ್ಲಿ ಭಿಕ್ಷೆ ಬೇಡುವುದು ಒಂದು ಪ್ರಮುಖ ವೃತ್ತಿಯಾಗಿದೆ. ಪಾಕಿಸ್ತಾನದ ಒಟ್ಟು ಜನಸಂಖ್ಯೆ 23 ಕೋಟಿ ಇದ್ದು, ಅದರಲ್ಲಿ ಅಂದಾಜು 4 ಕೋಟಿ ಜನರು ಭಿಕ್ಷೆ ಬೇಡುತ್ತಿದ್ದಾರೆ. ಇದರರ್ಥ, ಪಾಕಿಸ್ತಾನದಲ್ಲಿ ಪ್ರತಿ ಆರು ಜನರಲ್ಲಿ ಒಬ್ಬರು ಭಿಕ್ಷೆ ಬೇಡುತ್ತಾರೆ. ಈ ಭಿಕ್ಷುಕರು ಪ್ರತಿದಿನ 32 ಬಿಲಿಯನ್ ರೂಪಾಯಿ, ಅಂದರೆ ವಾರ್ಷಿಕ 117 ಲಕ್ಷ ಕೋಟಿ ರೂಪಾಯಿ ಭಿಕ್ಷೆ ಪಡೆಯುತ್ತಾರೆ. ಪಾಕಿಸ್ತಾನದಲ್ಲಿ ಮಾತ್ರವಲ್ಲದೆ, ಪಾಕಿಸ್ತಾನಿಯರು ವಿದೇಶಗಳಲ್ಲೂ ಭಿಕ್ಷೆ ಬೇಡುತ್ತಾರೆ. ಇದರಿಂದ ಪಾಕಿಸ್ತಾನದ ಗೌರವಕ್ಕೆ ಕುಂದುಂಟಾಗಿದೆ. ಸೌದಿ ಅರೇಬಿಯಾದಿಂದ ಇಂತಹವರನ್ನು ಹೊರಹಾಕಲಾಗುತ್ತಿದೆ.

1. ಪಾಕಿಸ್ತಾನ‌ದ ದಿನಪತ್ರಿಕೆ ‘ಡಾನ್’ನ ವರದಿಯ ಪ್ರಕಾರ, ಪಾಕಿಸ್ತಾನದಲ್ಲಿ 3 ಕೋಟಿ 80 ಲಕ್ಷ ಜನರು ವೃತ್ತಿಪರ ಭಿಕ್ಷುಕರಿದ್ದಾರೆ. ಒಬ್ಬ ಭಿಕ್ಷುಕನ ರಾಷ್ಟ್ರೀಯ ಸರಾಸರಿ ದೈನಂದಿನ ಆದಾಯ 850 ಪಾಕಿಸ್ತಾನಿ ರೂಪಾಯಿ ಆಗಿದೆ.

2. ಪಾಕಿಸ್ತಾನದ ‘ಬಿಸಿನೆಸ್ ಅಂಡ್ ಸೊಸೈಟಿ ಸೆಂಟರ್’ನ ವರದಿಯ ಪ್ರಕಾರ, ದೇಶದಲ್ಲಿ ಭಿಕ್ಷೆ ಬೇಡುವ ಪದ್ಧತಿ ಹೆಚ್ಚುತ್ತಿದೆ, ಏಕೆಂದರೆ ಇದು ಇತರ ಕೌಶಲ್ಯರಹಿತ ಕಾರ್ಮಿಕರಿಗಿಂತ ಹೆಚ್ಚು ಗಳಿಕೆಯನ್ನು ನೀಡುತ್ತದೆ.

3. ಏಷ್ಯನ್ ಮಾನವ ಹಕ್ಕುಗಳ ಆಯೋಗದ ಪ್ರಕಾರ, ಪಾಕಿಸ್ತಾನದ ಶೇಕಡಾ 2.5 ರಿಂದ 11 ರಷ್ಟು ಜನಸಂಖ್ಯೆ ಜೀವನೋಪಾಯಕ್ಕಾಗಿ ಭಿಕ್ಷೆ ಬೇಡುತ್ತದೆ.

4. ‘ಎಕ್ಸ್‌ಪ್ರೆಸ್ ಟ್ರಿಬ್ಯೂನ್’ ಪ್ರಕಾರ, ದೇಶದ ಪ್ರಮುಖ ನಗರ ಕೇಂದ್ರಗಳ ರಸ್ತೆಗಳಲ್ಲಿ ಅಂದಾಜು 12 ಲಕ್ಷ ಮಕ್ಕಳು ಅಲೆದಾಡುತ್ತಾರೆ.

5. ಪಾಕಿಸ್ತಾನ ಸರಕಾರವು ರಸ್ತೆಗಳಲ್ಲಿ ಭಿಕ್ಷೆ ಬೇಡಲು ವಿದೇಶಗಳಿಗೆ ಹೋಗುವವರ ಬಗ್ಗೆ ಮಾಹಿತಿ ಸಂಗ್ರಹಿಸಿದೆ. ವಿದೇಶಗಳಲ್ಲಿ ಸಿಕ್ಕಿಬೀಳುವ ಶೇ.90 ಭಿಕ್ಷುಕರು ಪಾಕಿಸ್ತಾನಿ ಮೂಲದವರಾಗಿರುವುದರಿಂದ ಈ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಇರಾಕ್ ಮತ್ತು ಸೌದಿ ಅರೇಬಿಯಾದ ರಾಯಭಾರಿಗಳು ಈ ಕುರಿತು ಪಾಕಿಸ್ತಾನ ಸರಕಾರಕ್ಕೆ ದೂರು ನೀಡಿದ್ದಾರೆ.

6. ಧಾರ್ಮಿಕ ಯಾತ್ರೆಯ ಹೆಸರಿನಲ್ಲಿ ಸೌದಿ ಅರೇಬಿಯಾ, ಇರಾಕ್ ಮತ್ತು ಇರಾನನಂತಹ ಇಸ್ಲಾಮಿಕ್ ದೇಶಗಳಲ್ಲಿ ಭಿಕ್ಷೆ ಬೇಡಲು ಹೋಗುವ ಸಾವಿರಾರು ಜನರ ಪಾಸ್‌ ಪೋರ್ಟ್‌ಗಳನ್ನು ಪಾಕಿಸ್ತಾನ ಸರಕಾರ ರದ್ದುಪಡಿಸಿದೆ.

7. ಕಳೆದ ಎರಡೂವರೆ ವರ್ಷಗಳಲ್ಲಿ, ಸೌದಿ ಅರೇಬಿಯಾ ಮತ್ತು ಇತರ ಗಲ್ಫ್ ದೇಶಗಳಿಂದ 44 ಸಾವಿರಕ್ಕೂ ಹೆಚ್ಚು ಭಿಕ್ಷುಕರನ್ನು ಪಾಕಿಸ್ತಾನಕ್ಕೆ ವಾಪಸ್ ಕಳುಹಿಸಲಾಗಿದೆ.

ಸಂಪಾದಕೀಯ ನಿಲುವು

  • ಯಥಾ ರಾಜಾ ತಥಾ ಪ್ರಜಾ (ರಾಜ ಹೇಗೋ ಪ್ರಜೆಗಳೂ ಹಾಗೆಯೇ?)! ಪಾಕಿಸ್ತಾನ ಸರಕಾರ ಜಗತ್ತಿನಾದ್ಯಂತ ಭಿಕ್ಷಾ ಪಾತ್ರೆ ಹಿಡಿದು ಭಿಕ್ಷೆ ಬೇಡುತ್ತಿರುವುದರಿಂದ, ಅಲ್ಲಿನ ಪ್ರಜೆಗಳು ಅದನ್ನೇ ಅನುಕರಣೆ ಮಾಡಿದರೆ ಅದರಲ್ಲಿ ಆಶ್ಚರ್ಯವೇನಿದೆ?
  • ಇಂತಹ ಭಿಕ್ಷುಕರ ದೇಶ ಮತ್ತು ಭಿಕ್ಷುಕರ ಜನತೆ ಭಾರತದೊಂದಿಗೆ ‘ಗಜ್ವಾ-ಎ-ಹಿಂದ್’ (ಭಾರತವನ್ನು ಇಸ್ಲಾಮೀಕರಣಗೊಳಿಸಲು ಯುದ್ಧ) ಮಾಡುತ್ತಾರಂತೆ ?