ಉತ್ತರಕಾಶಿಯಲ್ಲಿ ಮೇಘಸ್ಫೋಟದಿಂದ ಉಂಟಾದ ಪ್ರವಾಹದಲ್ಲಿ ಧರಾಲಿ ಗ್ರಾಮ ಮುಚ್ಚಿಹೋದ ಘಟನೆ

ಡೆಹ್ರಾಡೂನ (ಉತ್ತರಾಖಂಡ) – ಉತ್ತರಕಾಶಿ ಜಿಲ್ಲೆಯ ಧರಾಲಿ ಗ್ರಾಮವು ಆಗಸ್ಟ್ 5 ರಂದು ಭಾರಿ ಮಳೆಯಿಂದಾಗಿ ಉಂಟಾದ ಪ್ರವಾಹದಲ್ಲಿ ಬಂದ ಮಣ್ಣಿನಿಂದ ಮುಚ್ಚಿಹೋಗಿದೆ. ಈ ಘಟನೆಯಲ್ಲಿ ಇಲ್ಲಿಯವರೆಗೆ 4 ಜನರು ಸಾವನ್ನಪ್ಪಿದ್ದು, ಹಲವರು ನಾಪತ್ತೆಯಾಗಿದ್ದಾರೆ. ಕಳೆದ 10 ವರ್ಷಗಳಲ್ಲಿ ರಾಜ್ಯದಲ್ಲಿ ಇಂತಹ ಮಳೆ ಘಟನೆಗಳು ಹೆಚ್ಚಾಗಿದ್ದು, ಇದಕ್ಕೆ 3 ಕಾರಣಗಳಿವೆ ಎಂದು ತಜ್ಞರು ಹೇಳಿದ್ದಾರೆ. ಇದರಲ್ಲಿ ಟಿಹರಿ ಅಣೆಕಟ್ಟು, ಮಳೆಗಾಲದ ಅವಧಿ ಕಡಿಮೆ ಆಗಿರುವುದು ಮತ್ತು ಉತ್ತರಾಖಂಡದ ಬಯಲು ಪ್ರದೇಶಗಳಲ್ಲಿ ಕಾಡುಗಳ ಕೊರತೆ ಸೇರಿವೆ.
ವಾಡಿಯಾ ಇನ್‌ಸ್ಟಿಟ್ಯೂಟ್ ನ ಭೂಭೌತಶಾಸ್ತ್ರ ವಿಭಾಗದ ಮಾಜಿ ಮುಖ್ಯಸ್ಥ ಡಾ. ಸುಶೀಲ ಕುಮಾರ ಅವರು,
1. ಕಳೆದ ದಶಕದಲ್ಲಿ ಮೇಘ ಸ್ಫೋಟದ (ಒಂದೇ ಸ್ಥಳದಲ್ಲಿ ಬಹಳ ಹೊತ್ತು ಭಾರಿ ಮಳೆ ಬೀಳುವುದು) ಘಟನೆಗಳು ತೀವ್ರವಾಗಿ ಹೆಚ್ಚಾಗಿದೆ. ಈಗ ‘ಮಲ್ಟಿ ಕ್ಲೌಡ್ ಬರ್ಸ್ಟ್’ ಪರಿಸ್ಥಿತಿ ಉಂಟಾಗಿದೆ. ಅಂದರೆ, ಒಂದೇ ಸ್ಥಳದಲ್ಲಿ ಅನೇಕ ಮೋಡಗಳು ಏಕಕಾಲದಲ್ಲಿ ಸ್ಫೋಟಗೊಳ್ಳುತ್ತವೆ, ಇದರಿಂದ ಭಾರಿ ಹಾನಿಯಾಗುತ್ತದೆ.
2. ಟಿಹರಿ ಅಣೆಕಟ್ಟು ನಿರ್ಮಿಸಿದ ನಂತರ ಇಂತಹ ಘಟನೆಗಳು ಹೆಚ್ಚಾಗಿದೆ. ಟಿಹರಿಯಲ್ಲಿ ಭಾಗೀರಥಿ ನದಿಗೆ ಸುಮಾರು 260.5 ಮೀಟರ್ ಎತ್ತರದ ಅಣೆಕಟ್ಟನ್ನು ನಿರ್ಮಿಸಲಾಗಿದೆ, ಇದರ ಜಲಾಶಯವು ಸುಮಾರು 4 ಘನ ಕಿ.ಮೀ, ಅಂದರೆ 32 ಲಕ್ಷ ಎಕರೆ ಅಡಿ ಪ್ರದೇಶದಲ್ಲಿ ಹರಡಿಕೊಂಡಿದೆ. ಇದರ ಮೇಲ್ಭಾಗದ ಜಲಾನಯನ ಪ್ರದೇಶವು ಸುಮಾರು 52 ಚದರ ಕಿ.ಮೀ. ಇದೆ.
3. ಭಾಗೀರಥಿ ನದಿಯ ಜಲಾನಯನ ಪ್ರದೇಶ, ಇದು ಮೊದಲು ಬಹಳ ಸೀಮಿತವಾಗಿತ್ತು, ಅಣೆಕಟ್ಟು ನಿರ್ಮಾಣದ ನಂತರ ಬಹಳಷ್ಟು ಹೆಚ್ಚಾಗಿದೆ. ಒಂದೇ ಸ್ಥಳದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ನೀರು ಸಂಗ್ರಹಗೊಂಡಿರುವುದರಿಂದ ಮೋಡಗಳು ರೂಪುಗೊಳ್ಳುವ ಪ್ರಕ್ರಿಯೆ ಹೆಚ್ಚಾಗಿದೆ. ಮಳೆಗಾಲದಲ್ಲಿ ಈ ಮೋಡಗಳು ಈ ನೀರನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗದೆ ಸ್ಫೋಟಗೊಳ್ಳುತ್ತವೆ.
4. ಇಡೀ ಉತ್ತರಾಖಂಡದಲ್ಲಿ ಜಲವಿದ್ಯುತ್ ಯೋಜನೆಗಳು ನಡೆಯುತ್ತಿವೆ. ನದಿಯ ನೈಸರ್ಗಿಕ ಹರಿವು ಅಸ್ತವ್ಯಸ್ತಗೊಂಡಿದ್ದು, ಪ್ರಕೃತಿಯ ಸಮತೋಲನ ತಪ್ಪಿದೆ. ಇದರಿಂದಾಗಿ ಮೇಘ ಸ್ಫೋಟದ ಘಟನೆಗಳು ಹೆಚ್ಚಾಗಿದೆ.
ಸಂಪಾದಕೀಯ ನಿಲುವುಟಿಹರಿ ಅಣೆಕಟ್ಟಿನಿಂದ ಉತ್ತರಾಖಂಡ ವಿನಾಶವಾಗುತ್ತದೆ ಎಂದು ತಜ್ಞರು ವರದಿ ನೀಡಿದರೂ, ಅಂದಿನ ಕಾಂಗ್ರೆಸ್ ಸರಕಾರ ಸರ್ವಾಧಿಕಾರಿ ಧೋರಣೆಯಿಂದ ಅಣೆಕಟ್ಟನ್ನು ನಿರ್ಮಿಸಿತು. ಇದು ಟೈಮ್ ಬಾಂಬ್ ಆಗಿದ್ದು, ಭವಿಷ್ಯದಲ್ಲಿ ಉತ್ತರಾಖಂಡ ನಾಶವಾದರೆ ಆಶ್ಚರ್ಯಪಡಬೇಕಾಗಿಲ್ಲ ಎಂದು ತಜ್ಞರು ಹೇಳುತ್ತಾರೆ! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!