
ಶಾಮಲಿ (ಉತ್ತರಪ್ರದೇಶ) – ಜಿಲ್ಲೆಯ ಮಂಟಿ ಹಸನಪುರ ಗ್ರಾಮದಲ್ಲಿ ಶನಿ ದೇವಸ್ಥಾನದಲ್ಲಿ ಬಾಬಾ ಬಂಗಾಲಿ ಉರ್ಫ್ ಬಾಲಕನಾಥ ಎಂಬ ಹೆಸರಿನಲ್ಲಿ ಹಿಂದೂ ಅರ್ಚಕನಾಗಿ ವಾಸಿಸುತ್ತಿದ್ದ 55 ವರ್ಷದ ಇಮಾಮುದ್ದೀನ್ ಅನ್ಸಾರಿ ಎಂಬ ಮುಸ್ಲಿಂ ವ್ಯಕ್ತಿಯನ್ನು ಪೊಲೀಸರು ಇತ್ತೀಚೆಗೆ ಬಂಧಿಸಿದ್ದಾರೆ. ಇಮಾಮುದ್ದೀನ್ ಅನ್ಸಾರಿ ಮೂಲತಃ ಬಂಗಾಳದ ನಿವಾಸಿಯಾಗಿದ್ದು, ಕಳೆದ ಎರಡು ವರ್ಷಗಳಿಂದ ಈ ದೇವಸ್ಥಾನದಲ್ಲಿ ಪೂಜೆ ಅರ್ಚನೆ ಸಲ್ಲಿಸುತ್ತಿದ್ದನು. ಪೊಲೀಸರು ಅವನ ವಿರುದ್ಧ ವಂಚನೆ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಆರೋಪಿಯನ್ನು ಕೈರಾನಾ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ, ಅವನನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಇದು ದೊಡ್ಡ ಪಿತೂರಿಯ ಭಾಗವೇ ಎಂದು ತನಿಖೆ ಮಾಡಲು ಶಾಮಲಿ ಪೊಲೀಸರು ಗುಪ್ತಚರ ಇಲಾಖೆಯನ್ನು ಸಹ ತನಿಖೆಯಲ್ಲಿ ತೊಡಗಿಸಿದ್ದಾರೆ.
1. ಪೊಲೀಸರು ಅನ್ಸಾರಿಯಿಂದ 3 ನಕಲಿ ಆಧಾರ ಕಾರ್ಡ್ ಮತ್ತು 1 ಪ್ಯಾನ ಕಾರ್ಡ್ ವಶಪಡಿಸಿಕೊಂಡಿದ್ದಾರೆ. ಆರೋಪಿಯ ಆಧಾರ ಕಾರ್ಡ್‌ಗಳಲ್ಲಿನ ವಿಳಾಸವನ್ನು ಪರಿಶೀಲಿಸಲು ಮತ್ತು ಅವನ ಬಗ್ಗೆ ಮಾಹಿತಿ ಪಡೆಯಲು ಪೊಲೀಸರ ತಂಡವನ್ನು ಬಂಗಾಳಕ್ಕೆ ಕಳುಹಿಸಲಾಗಿದೆ.
2. ಈ ಘಟನೆಯ ಬಗ್ಗೆ ಹಿಂದೂ ಸಂಘಟನೆಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಕಠಿಣ ಕ್ರಮ ಕೈಗೊಳ್ಳುವಂತೆ ಆಡಳಿತಕ್ಕೆ ಒತ್ತಾಯಿಸಿವೆ.
3. ಮಠ-ಮಂದಿರ ಜಿಲ್ಲಾ ಪ್ರಮುಖ ಭರತ ಭೂಷಣ ಅವರು, ಇಡೀ ಜಿಲ್ಲೆಯಲ್ಲಿ ತಪಾಸಣೆ ಅಭಿಯಾನವನ್ನು ನಡೆಸಲಾಗುವುದು ಎಂದು ಹೇಳಿದ್ದಾರೆ.
4. ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾ ಪದಾಧಿಕಾರಿಗಳು ಸಹ ಗ್ರಾಮೀಣ ಪ್ರದೇಶಗಳಲ್ಲಿ ಸಾಧುಗಳ ವೇಷದಲ್ಲಿ ತಿರುಗಾಡುವ ಮುಸ್ಲಿಮರ ಮೇಲೆ ನಿಗಾ ಇಡುವಂತೆ ಕರೆ ನೀಡಿದ್ದಾರೆ.
5. ಈ ಘಟನೆಯಿಂದ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ನಾಗರಿಕರಿಗೆ ಶಾಂತಿಯುತವಾಗಿರುವಂತೆ ಮನವಿ ಮಾಡಿದ್ದಾರೆ.
6. ಈ ಹಿಂದೆ ಮೀರತ್ ಜಿಲ್ಲೆಯಲ್ಲಿ ಖಾಸಿಂ ಎಂಬ ಮುಸ್ಲಿಂ ವ್ಯಕ್ತಿಯನ್ನು ಶಿವನ ದೇವಸ್ಥಾನದಲ್ಲಿ ‘ಕೃಷ್ಣ ಸಂತಪಾಲ್’ ಎಂಬ ಹೆಸರಿನಲ್ಲಿ ವಾಸಿಸುತ್ತಾ ಪೂಜೆ ಮಾಡುತ್ತಿದ್ದಾಗ ಬಂಧಿಸಲಾಗಿತ್ತು.
ಸಂಪಾದಕೀಯ ನಿಲುವುಮೂರ್ತಿಪೂಜೆಯನ್ನು ನಂಬದ ಮತಾಂಧರಿಗೆ ಹಿಂದೂ ದೇವಸ್ಥಾನಗಳಲ್ಲಿ ಏನು ಕೆಲಸ? ಇತ್ತೀಚೆಗೆ ಮುಸ್ಲಿಮರು ಹಿಂದೂ ಅರ್ಚಕರ ವೇಷ ಧರಿಸಿ ದೇವಸ್ಥಾನಗಳಿಗೆ ನುಸುಳಿರುವ ಅನೇಕ ಘಟನೆಗಳು ಬೆಳಕಿಗೆ ಬರುತ್ತಿವೆ. ಇದರಲ್ಲಿ ಮತಾಂಧರ ಯಾವ ಸಂಚು ಅಡಗಿದೆ ಎಂಬುದನ್ನು ತನಿಖೆ ಮಾಡಿ ಸತ್ಯಾಂಶವನ್ನು ಹೊರಹಾಕುವುದು ಅಗತ್ಯವಾಗಿದೆ! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!