ಜೈಸಲ್ಮೇರ್ (ರಾಜಸ್ಥಾನ) ಇಲ್ಲಿ ಪಾಕಿಸ್ತಾನಕ್ಕಾಗಿ ಬೇಹುಗಾರಿಕೆ ನಡೆಸುತ್ತಿದ್ದ ಡಿ.ಆರ್‌.ಡಿ.ಒ. ಅತಿಥಿಗೃಹದ ವ್ಯವಸ್ಥಾಪಕನ ಬಂಧನ

(ಡಿಆರ್‌ಡಿಒ ಅಂದರೆ ಡಿಫೆನ್ಸ್ ರಿಸರ್ಚ್ ಅಂಡ್ ಡೆವಲಪ್‌ಮೆಂಟ್ ಆರ್ಗನೈಸೇಶನ್ – ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ)

ಜೈಸಲ್ಮೇರ್ (ರಾಜಸ್ಥಾನ) – ಇಲ್ಲಿನ ಡಿ.ಆರ್‌.ಡಿ.ಒ. ಅತಿಥಿಗೃಹದ ವ್ಯವಸ್ಥಾಪಕನನ್ನು ಪಾಕಿಸ್ತಾನಕ್ಕಾಗಿ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ. ಇವನ ಹೆಸರು ಮಹೇಂದ್ರ ಪ್ರಸಾದ ಆಗಿದೆ. ಕಳೆದ 7 ವರ್ಷಗಳಿಂದ ಪೋಖರಣ ಫೀಲ್ಡ್ ಫೈರಿಂಗ್ ರೇಂಜ್‌ ನಲ್ಲಿರುವ ಅತಿಥಿಗೃಹದಲ್ಲಿ ನಿಯೋಜಿತನಾಗಿದ್ದನು. ಇವನು ಉತ್ತರಾಖಂಡದ ಅಲ್ಮೋರಾ ಮೂಲದ ನಿವಾಸಿಯಾಗಿದ್ದಾನೆ. ಈ ಅತಿಥಿಗೃಹದಲ್ಲಿ ಭಾರತದ ಉನ್ನತ ರಕ್ಷಣಾ ತಜ್ಞರು ಮತ್ತು ವಿಜ್ಞಾನಿಗಳು ತಂಗುತ್ತಾರೆ.

ಮಹೇಂದ್ರ ಪ್ರಸಾದ್ ತನ್ನ ಮೊಬೈಲ್ ಫೋನ್ ಮೂಲಕ ಪಾಕಿಸ್ತಾನದ ಏಜೆಂಟರಿಗೆ ಗೌಪ್ಯ ಮಾಹಿತಿಯನ್ನು ನೀಡುತ್ತಿದ್ದನು. ಪಾಕಿಸ್ತಾನದಿಂದ ಬರುತ್ತಿದ್ದ ದೂರವಾಣಿ ಕರೆಗಳ ಆಧಾರದ ಮೇಲೆ ಆತನ ಮೇಲೆ ಕಣ್ಗಾವಲು ಇರಿಸಲಾಗಿತ್ತು.

ಸಂಪಾದಕೀಯ ನಿಲುವು

ಇಂತಹ ಸೂಕ್ಷ್ಮ ಪ್ರದೇಶಗಳ ಬಗ್ಗೆ ಮಾಹಿತಿ ನೀಡುವ ದೇಶದ್ರೋಹಿಗಳಿಗೆ ಸಾರ್ವಜನಿಕವಾಗಿ ಗಲ್ಲಿಗೇರಿಸಬೇಕು!