Medicine Price Reduced : ಕೇಂದ್ರ ಸರಕಾರದಿಂದ 37 ಔಷಧಗಳ ಬೆಲೆ ಇಳಿಕೆ

ಹೃದಯ, ಮಧುಮೇಹ ಮುಂತಾದ ರೋಗಗಳ ಔಷಧಿಯ ಸಮಾವೇಶ

ನವದೆಹಲಿ – ಕೇಂದ್ರ ಸರಕಾರದ ನ್ಯಾಷನಲ್ ಫಾರ್ಮಸ್ಯುಟಿಕಲ್ ಪ್ರೈಸಿಂಗ ಅಥಾರಿಟಿ ‘ (ಎನ್‌.ಪಿ.ಪಿ.ಎ.) 37 ಅಗತ್ಯ ಔಷಧಗಳ ಬೆಲೆಯನ್ನು 10 ರಿಂದ 15 ಪ್ರತಿಶತದಷ್ಟು ಕಡಿಮೆ ಮಾಡಿದೆ. ಇವುಗಳಲ್ಲಿ ಹೃದಯ, ಮಧುಮೇಹ ಮತ್ತು ಸೋಂಕುಗಳಿಗೆ ಅಗತ್ಯವಾದ ಅಟೋರ್ವಾಸ್ಟಾಟಿನ್, ಮೆಟ್‌ಫಾರ್ಮಿನ್, ಅಮೋಕ್ಸಿಸಿಲಿನ್, ಎಂಪಾಗ್ಲಿಫ್ಲೋಜಿನ್, ಸಿಟಾಗ್ಲಿಪ್ಟಿನ್,ಪ್ಯಾರಾಸಿಟಮಾಲ್ ನಂತಹ ಔಷಧಗಳು ಸೇರಿವೆ.

ಆಗಸ್ಟ್ 2 ರಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯವು ‘ಔಷಧ ಬೆಲೆ ನಿಯಂತ್ರಣ ಆದೇಶ, 2013’ ರ ಅಡಿಯಲ್ಲಿ ಅಧಿಸೂಚನೆಯನ್ನು ಹೊರಡಿಸಿತು. ಈ ಹೊಸ ದರಗಳು ಪ್ರಮುಖ ಔಷಧ ಕಂಪನಿಗಳಿಂದ ಉತ್ಪಾದಿಸಲ್ಪಟ್ಟ ಮತ್ತು ಮಾರಾಟವಾಗುವ 35 ವಿವಿಧ ‘ಫಾರ್ಮುಲೇಶನ್‌’ಗಳಿಗೆ (ಒಂದಕ್ಕಿಂತ ಹೆಚ್ಚು ಔಷಧೀಯ ಘಟಕಗಳನ್ನು ಸಂಯೋಜಿಸಿ ತಯಾರಿಸಿದ ಔಷಧಗಳು) ಅನ್ವಯಿಸುತ್ತವೆ. ಕಳೆದ ಕೆಲವು ವರ್ಷಗಳಿಂದ ಔಷಧಗಳ ಹೆಚ್ಚಿದ ಬೆಲೆಗಳಿಂದ ರೋಗಿಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರು. ಆದ್ದರಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.