|

ರಾಯಸೇನ್ (ಮಧ್ಯಪ್ರದೇಶ) – ಏಪ್ರಿಲ್ 2025 ರಲ್ಲಿ, ಇಲ್ಲಿನ ಫೂಲಾಬಾಯಿ ಎಂಬ ಅಸಹಾಯಕ ವೃದ್ಧ ಆದಿವಾಸಿ ಮಹಿಳೆಯ ಪತಿಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಮರದ ವ್ಯಾಪಾರ ಮಾಡುವ ಮುಸ್ಲಿಂ ಗುತ್ತಿಗೆದಾರರು ಈ ಹತ್ಯೆ ಮಾಡಿದ್ದರು. ಫೂಲಾಬಾಯಿ ಅವರ ಕುಟುಂಬ ಮರಗಳನ್ನು ತಮ್ಮ ಕುಟುಂಬದ ಭಾಗವೆಂದು ಪರಿಗಣಿಸುವುದರಿಂದ ಗುತ್ತಿಗೆದಾರರು ಅವರ ಪತಿಯನ್ನು ಹತ್ಯೆ ಮಾಡಿದ್ದರು. ಈ ಬಗ್ಗೆ ಸರಕಾರ ಫೂಲಾಬಾಯಿ ಅವರಿಗೆ ಆರ್ಥಿಕ ನೆರವನ್ನು ಘೋಷಿಸಿತ್ತು; ಆದರೆ ಅವರ ನಿರಕ್ಷರತೆಯ ಲಾಭ ಪಡೆದ ಸ್ಥಳೀಯರು ಆ ಹಣವನ್ನು ಕಬಳಿಸಿದರು. ಇದರಿಂದ ನ್ಯಾಯಾಲಯದ ಹೋರಾಟಕ್ಕೆ ಫೂಲಾಬಾಯಿ ಅವರ ಬಳಿ ಹಣ ಉಳಿದಿರಲಿಲ್ಲ. ಈ ಕಾರಣದಿಂದ, ‘ಸೇವಾ ನ್ಯಾಯ ಉತ್ಥಾನ್ ಫೌಂಡೇಶನ್’ ಎಂಬ ಹಿಂದೂ ಸ್ವಯಂಸೇವಾ ಸಾಮಾಜಿಕ ಸಂಸ್ಥೆಯ ಸ್ವಾತಿ ಗೋಯಲ್ ಶರ್ಮಾ ಅವರ ಸಹಕಾರದೊಂದಿಗೆ ಫೂಲಾಬಾಯಿ ಅವರು ‘ಹಿಂದೂ ಕಿರಾಣಿ ಅಂಗಡಿ’ಯನ್ನು ಪ್ರಾರಂಭಿಸಿದರು. ಈಗ ಈ ಅಂಗಡಿಯಿಂದ ಬರುವ ಲಾಭದಿಂದ ಫೂಲಾಬಾಯಿ ತಮ್ಮ ನ್ಯಾಯಾಲಯದ ಹೋರಾಟವನ್ನು ಮುಂದುವರಿಸಲು ಸಾಧ್ಯವಾಗುತ್ತದೆ. ‘ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ’ದ ಸದಸ್ಯ ಶ್ರೀ. ಪ್ರಿಯಾಂಕ್ ಕಾನೂನ್‌ಗೋ ಅವರು ‘ಸನಾತನ ಪ್ರಭಾತ್’ಗೆ ಈ ಮಾಹಿತಿ ನೀಡಿದ್ದಾರೆ.

ಹಿಂದೂ ಕಿರಾಣಿ ಅಂಗಡಿಯ ಉದದ್ಘಾಟನೆಯಲ್ಲಿ ಆರ್‌ಎಸ್‌ಎಸ್‌ನ ಸ್ಥಳೀಯ ಕಾರ್ಯವಾಹ ರಾಜೇಂದ್ರಸಿಂಗ್ ಮತ್ತು ಸ್ಥಳೀಯ ಯುವ ಕಾರ್ಯಕರ್ತರು ಉಪಸ್ಥಿತರಿದ್ದರು. ಮಧ್ಯಪ್ರದೇಶದ ಹಿಂದುತ್ವನಿಷ್ಠ ಮಾಧ್ಯಮ ‘ಆಯುಧ ಮೀಡಿಯಾ’ದ ಆಶುತೋಷ್ ಮತ್ತು ಇತರರ ವಿಶೇಷ ಕೊಡುಗೆ ಇದಕ್ಕೆ ದೊರೆತಿದೆ.
ಸಂಪಾದಕೀಯ ನಿಲುವುಈ ರೀತಿ ಅಸಹಾಯಕ ಹಿಂದೂಗಳಿಗೆ ನೆರವು ನೀಡುವ ಮೂಲಕ ನಿಜ ಅರ್ಥದಲ್ಲಿ ಹಿಂದೂಗಳ ಹಿತಾಸಕ್ತಿಗಳನ್ನು ಕಾಪಾಡಬಹುದು. ಈ ಕಾರ್ಯಕ್ಕಾಗಿ ‘ಸೇವಾ ನ್ಯಾಯ ಉತ್ಥಾನ್ ಫೌಂಡೇಶನ್’ಗೆ ಅಭಿನಂದನೆಗಳು! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!