
ತಿರುಪತಿ (ಆಂಧ್ರಪ್ರದೇಶ) – ಮೇ ೧೭ ರಿಂದ ೧೯, ೨೦೨೫ರ ಅವಧಿಯಲ್ಲಿ ಗೋವಾದ ಫರ್ಮಾಗುಡಿಯಲ್ಲಿ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ ನಡೆಯಿತು. ಈ ಮಹೋತ್ಸವವು ಸುಗಮವಾಗಿ ನಡೆಯಲಿ ಎಂದು ಮೇ ತಿಂಗಳಿನಲ್ಲಿ ಸನಾತನ ಸಂಸ್ಥೆಯ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ಪರವಾಗಿ ಅವರ ಆಧ್ಯಾತ್ಮಿಕ ಉತ್ತರಾಧಿಕಾರಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಅವರು ತಿರುಪತಿಯ ಶ್ರೀ ಬಾಲಾಜಿಯ ಚರಣಗಳಲ್ಲಿ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಅರ್ಪಿಸಿ, ಮಹೋತ್ಸವದಲ್ಲಿ ಉಪಸ್ಥಿತರಿರುವಂತೆ ಹಾಗೂ ಯಾವುದೇ ಅಡೆತಡೆಗಳು ಬಾರದಿರುವಂತೆ ಪ್ರಾರ್ಥಿಸಿದ್ದರು. ಶ್ರೀ ಬಾಲಾಜಿಯ ಕೃಪೆಯಿಂದಲೇ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ವು ಅಡೆತಡೆಗಳಿಲ್ಲದೆ ಮತ್ತು ಭಾವಪೂರ್ಣ ವಾತಾವರಣದಲ್ಲಿ ನೆರವೇರಿತು. ಇದಕ್ಕೆ ಕೃತಜ್ಞತೆ ಸಲ್ಲಿಸಲು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಅವರು ಆಗಸ್ಟ್ ೧ ರಂದು ಶ್ರೀ ಬಾಲಾಜಿಯ ಚರಣಗಳಲ್ಲಿ ಭಾವಪೂರ್ಣ ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಅವರು, ‘ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರಿಗೆ ಉತ್ತಮ ಆರೋಗ್ಯ ದೊರೆಯಲಿ, ಮುಂಬರುವ ಆಪತ್ಕಾಲದಲ್ಲಿ ಸಾಧಕರ ರಕ್ಷಣೆಯಾಗಲಿ ಮತ್ತು ಶೀಘ್ರವಾಗಿ ಹಿಂದೂ ರಾಷ್ಟ್ರ ಸ್ಥಾಪನೆಯಾಗಲಿ’ ಎಂದು ಶ್ರೀ ಬಾಲಾಜಿಯ ಚರಣಗಳಲ್ಲಿ ಪ್ರಾರ್ಥಿಸಿದರು.
ಶ್ರೀ ಬಾಲಾಜಿಯ ಚರಣಗಳಲ್ಲಿ ಆಮಂತ್ರಣ ಪತ್ರಿಕೆ ಅರ್ಪಿಸುವಾಗ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಅವರಿಗೆ ಬಂದ ಅನುಭೂತಿ![]() ಮೇ ತಿಂಗಳಿನಲ್ಲಿ ನಾನು ಶ್ರೀ ಬಾಲಾಜಿಯ ಚರಣಗಳಲ್ಲಿ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದ ಆಮಂತ್ರಣ ಪತ್ರಿಕೆ ಇಡಲು ಹೋಗಿದ್ದೆ. ಆಗ ಮಹೋತ್ಸವದ ಆಮಂತ್ರಣ ಪತ್ರಿಕೆಯ ಮೇಲೆ ಶ್ರೀ ಬಾಲಾಜಿಯ ದೃಷ್ಟಿ ಬೀಳುವಂತೆ ಮೂರ್ತಿಯ ಮುಂದೆ ಹಿಡಿದಿದ್ದೆ. ಆಗ ನನಗೆ, ‘ಕ್ಷಣಕಾಲ ಶ್ರೀ ಬಾಲಾಜಿಯ ಕಣ್ಣುಗಳು ಮಿಟುಕಿಸಿದಂತೆ ಅನ್ನಿಸಿತು ಮತ್ತು ಮೂರ್ತಿಯಲ್ಲಿ ಜೀವಂತಿಕೆ ಅನುಭವವಾಯಿತು, ಹಾಗು ದೇವರು ನನ್ನ ಪ್ರಾರ್ಥನೆಯನ್ನು ಆಲಿಸಿದರು’ ಎಂದು ಅನಿಸಿತು. ತಿರುಪತಿ ದೇವಾಲಯದ ಆವರಣದಲ್ಲಿ ಶ್ರೀ ಬಾಲಾಜಿಯ ತಾಯಿ ಶ್ರೀ ಬಕುಳಾದೇವಿಯ ದೇವಸ್ಥಾನವೂ ಇದೆ. ನಾನು ಅಲ್ಲಿಯೂ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಚರಣಗಳಲ್ಲಿ ಇಟ್ಟೆ. ಆಗ ನನಗೆ, ಯಾವುದೇ ಮಗ ತಾಯಿಯ ಮಾತನ್ನು ಕೇಳುತ್ತಾನೆ ಎಂದು ಅರಿವಾಯಿತು. ಈ ಭಾವದಿಂದ ನಾನು ಕಣ್ಣುಮುಚ್ಚಿ ಶ್ರೀ ಬಕುಳಾದೇವಿಗೆ ಪ್ರಾರ್ಥಿಸಿದೆ, ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ ನಿರ್ವಿಘ್ನವಾಗಿ ನೆರವೇರಲಿ ಮತ್ತು ತಾಯಿ, ನೀನು ಹಾಗೂ ಶ್ರೀ ಬಾಲಾಜಿ ಇಬ್ಬರೂ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿರಬೇಕು.’ ಈ ಪ್ರಾರ್ಥನೆ ಮಾಡುವಾಗ ಕಣ್ಣುಮುಚ್ಚಿದ್ದಾಗ, ‘ದೇವಿಯ ಹಸಿರು ಸೀರೆಯ ಸೆರಗು ಆಮಂತ್ರಣ ಪತ್ರಿಕೆಯ ಮೇಲೆ ಮುಚ್ಚಿದಂತೆ, ಅವಳು ನಮಗೆ ಆಶೀರ್ವಾದದ ಪ್ರೀತಿಯನ್ನು ನೀಡಿದಂತೆ’ ಅನಿಸಿತು. ನಾನು ಕಣ್ಣು ತೆರೆದಾಗ, ದೇವಿ ಹಸಿರು ಸೀರೆಯುಟ್ಟಿದ್ದಳು ಎಂಬುದು ಕಂಡಿತು. ಇದರಿಂದ ದೇವಿ ಮಹೋತ್ಸವ ನಿರ್ವಿಘ್ನವಾಗಿ ನಡೆಯಲು ಮತ್ತು ಉಪಸ್ಥಿತರಿರಲು ಆಶೀರ್ವಾದ ನೀಡಿದಳು ಎಂದು ಅನಿಸಿತು. |

ರಾಜಸ್ಥಾನದ ಜೈಲಿನಲ್ಲಿ ಜುಲೈ ೨೨ ರಂದು ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ವಿವಾಹವಾಗಲಿದೆ ! : Rajasthan Jail Marriage
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!