ಬಾಂಗ್ಲಾದೇಶ: ಹಿಂದೂ ಯುವಕನ ಕೊಲೆ ಮಾಡಿ ಶವವನ್ನು ಮರಕ್ಕೆ ನೇತು ಹಾಕಲಾಯಿತು !

ಜಮಾತ್-ಎ-ಇಸ್ಲಾಮಿ ಭಯೋತ್ಪಾದಕರ ಕೃತ್ಯ ಎಂದು ಆರೋಪ

ಢಾಕಾ (ಬಾಂಗ್ಲಾದೇಶ) – ಇಲ್ಲಿನ ಮಗ್ರಿ ಜಿಲ್ಲೆಯ ಭಂಗುರಾ ಗ್ರಾಮದಲ್ಲಿ ‘ಜಮಾತ್-ಎ-ಇಸ್ಲಾಮಿ’ ಭಯೋತ್ಪಾದಕರು ಒಬ್ಬ ಹಿಂದೂ ಯುವಕನನ್ನು ಬರ್ಬರವಾಗಿ ಕೊಲೆ ಮಾಡಿ, ಆತನ ಶವವನ್ನು ತೋಟದಲ್ಲಿರುವ ಮರಕ್ಕೆ ನೇತುಹಾಕಿದ್ದಾರೆ. ಈ ಮಾಹಿತಿಯನ್ನು ‘ವಾಯ್ಸ್ ಆಫ್ ಬಾಂಗ್ಲಾದೇಶಿ ಹಿಂದೂಸ್’ ಎಂಬ X ಖಾತೆಯಲ್ಲಿ ನೀಡಲಾಗಿದೆ. “ಇದು ಬಾಂಗ್ಲಾದೇಶದಲ್ಲಿ ಹಿಂದೂಗಳ ಯೋಜಿತ ವಂಶನಾಶವಾಗಿದೆ” ಎಂದು ಪೋಸ್ಟ್‌ನಲ್ಲಿ ಹೇಳಲಾಗಿದೆ. ಈ ಪೋಸ್ಟ್ ಜೊತೆಗೆ, ನೇತುಹಾಕಿದ ಯುವಕನ ಶವವನ್ನು ಕೆಳಗಿಳಿಸುತ್ತಿರುವ ವೀಡಿಯೊ ಕೂಡ ಪ್ರಸಾರವಾಗಿದೆ.

ಸಂಪಾದಕೀಯ ನಿಲುವು

ಭಾರತ ಸರಕಾರವು ಬಾಂಗ್ಲಾದೇಶದ ಹಿಂದೂ ಸಹೋದರರ ರಕ್ಷಣೆಗಾಗಿ ಬಾಂಗ್ಲಾದೇಶ ಸರಕಾರಕ್ಕೆ ಒತ್ತಾಯಿಸಬೇಕು. ಅದಕ್ಕಾಗಿ ಭಾರತದ ಹಿಂದೂಗಳು ಸರಕಾರದ ಮೇಲೆ ಒತ್ತಡ ಹೇರಬೇಕು!