|

ನವದೆಹಲಿ – ಇತ್ತೀಚಿನ ದಿನಗಳಲ್ಲಿ ಸಂಬಂಧಗಳಲ್ಲಿ ಹೆಚ್ಚುತ್ತಿರುವ ಶುಷ್ಕತೆ, ಜನರ ಮಹತ್ವಾಕಾಂಕ್ಷೆಗಳು, ಪರಸ್ಪರ ನಿರೀಕ್ಷೆಗಳು, ಪಾಶ್ಚಾತ್ಯರ ಕುರುಡು ಅನುಕರಣೆ ಇತ್ಯಾದಿಗಳ ಪ್ರಭಾವದಿಂದ ಭಾರತದಲ್ಲಿ ವಿಚ್ಛೇದನ ಪ್ರಮಾಣ ಹೆಚ್ಚುತ್ತಿದೆ. ಹೀಗಿದ್ದರೂ, ಜಾಗತಿಕ ಮಟ್ಟದಲ್ಲಿ ನೋಡಿದಾಗ ಈ ಪ್ರಮಾಣ ನಗಣ್ಯವಾಗಿದೆ. ಭಾರತದಲ್ಲಿ ಪ್ರತಿ 100 ವಿವಾಹಗಳಿಗೆ 1 ವಿಚ್ಛೇದನವಾಗುತ್ತದೆ. ಇದರರ್ಥ ವಿಚ್ಛೇದನ ಪ್ರಮಾಣ 1 ಪ್ರತಿಶತ ಇದೆ. ಮತ್ತೊಂದೆಡೆ, ಅತಿ ಹೆಚ್ಚು ವಿಚ್ಛೇದನಗಳು ನಡೆಯುವ ದೇಶಗಳಲ್ಲಿ ಪೋರ್ಚುಗಲ್ ಅಗ್ರಸ್ಥಾನದಲ್ಲಿದ್ದು, ಅಲ್ಲಿ ಇದರ ಪ್ರಮಾಣ ಬರೋಬ್ಬರಿ 94 ಪ್ರತಿಶತ ಇದೆ. ಇದರರ್ಥ ಪ್ರತಿ 100 ಪೋಲಿಷ್ ವಿವಾಹಗಳಲ್ಲಿ 94 ದಂಪತಿಗಳು ಕಾಲಾನಂತರದಲ್ಲಿ ಬೇರ್ಪಡುತ್ತಾರೆ. ಈ ಮಾಹಿತಿಯನ್ನು ‘ವರ್ಲ್ಡ್ ಆಫ್ ಸ್ಟ್ಯಾಟಿಸ್ಟಿಕ್ಸ್’ ಸಂಸ್ಥೆಯು ತನ್ನ X ಖಾತೆಯ ಮೂಲಕ ಪ್ರಸಾರ ಮಾಡಿದೆ.
Divorce rate:
🇮🇳India: 1%
🇻🇳Vietnam: 7%
🇹🇯Tajikistan: 10%
🇮🇷Iran: 14%
🇲🇽Mexico: 17%
🇪🇬Egypt: 17%
🇿🇦South Africa: 17%
🇧🇷Brazil: 21%
🇹🇷Turkey: 25%
🇨🇴Colombia: 30%
🇵🇱Poland: 33%
🇯🇵Japan: 35%
🇩🇪Germany: 38%
🇬🇧United Kingdom: 41%
🇳🇿New Zealand: 41%
🇦🇺Australia: 43%
🇨🇳China: 44%…— World of Statistics (@stats_feed) July 31, 2025
1. ಭಾರತದಲ್ಲಿ ವಿಚ್ಛೇದನ ಪ್ರಮಾಣ 1 ಪ್ರತಿಶತ ಇದೆ. ನಂತರ ವಿಯೆಟ್ನಾಂ 7 ಪ್ರತಿಶತ, ತಜಿಕಿಸ್ತಾನ್ 10 ಪ್ರತಿಶತ, ಇರಾನ್ 14 ಪ್ರತಿಶತ, ಮೆಕ್ಸಿಕೋ, ಈಜಿಪ್ಟ್ ಮತ್ತು ದಕ್ಷಿಣ ಆಫ್ರಿಕಾ ಈ 3 ದೇಶಗಳಲ್ಲಿ ತಲಾ 17 ಪ್ರತಿಶತ ವಿಚ್ಛೇದನ ಪ್ರಮಾಣವಿದೆ.
2. ಅಭಿವೃದ್ಧಿ ಹೊಂದಿದ ದೇಶಗಳನ್ನು ಪರಿಗಣಿಸಿದರೆ, ಜಪಾನ್ 35 ಪ್ರತಿಶತ, ಜರ್ಮನಿ 38 ಪ್ರತಿಶತ, ಯುನೈಟೆಡ್ ಕಿಂಗ್‌ಡಮ್ 41 ಪ್ರತಿಶತ, ಆಸ್ಟ್ರೇಲಿಯಾ 43 ಪ್ರತಿಶತ, ಮತ್ತು ಅಮೆರಿಕಾದಲ್ಲಿ ಪ್ರತಿ 100 ವಿವಾಹಿತ ದಂಪತಿಗಳಲ್ಲಿ 45 ದಂಪತಿಗಳು ವಿಚ್ಛೇದನ ಪಡೆಯುತ್ತಾರೆ. ಚೀನಾದಲ್ಲಿಯೂ ಈ ಪ್ರಮಾಣ 44 ಪ್ರತಿಶತ. (ಇದರರ್ಥ ರಾಷ್ಟ್ರವು ಎಷ್ಟು ಅಭಿವೃದ್ಧಿ ಹೊಂದುತ್ತದೆಯೋ, ಅಷ್ಟು ಅತೃಪ್ತಿ ಮತ್ತು ಸ್ವಾರ್ಥ ಹೆಚ್ಚುತ್ತದೆ ಎಂದು ಹೇಳಲು ಅಡ್ಡಿಯಿಲ್ಲ! – ಸಂಪಾದಕರು)
3. ಅತ್ಯಧಿಕ ವಿಚ್ಛೇದನಗಳು ನಡೆಯುವ ದೇಶಗಳಲ್ಲಿ ಉಕ್ರೇನ್ 70 ಪ್ರತಿಶತ, ರಷ್ಯಾ 73 ಪ್ರತಿಶತ, ಲಕ್ಸೆಂಬರ್ಗ್ 79 ಪ್ರತಿಶತ ಮತ್ತು ಸ್ಪೇನ್ 85 ಪ್ರತಿಶತ ವಿಚ್ಛೇದನ ಪ್ರಮಾಣವಿದೆ.
ಸಂಪಾದಕೀಯ ನಿಲುವುಸನಾತನ ಧರ್ಮದ ವ್ಯಾಪಕ ಬೋಧನೆಗಳಿಂದಾಗಿಯೇ ವಿಚ್ಛೇದನ ಪ್ರಕರಣಗಳಲ್ಲಿ ಭಾರತದ ಸ್ಥಿತಿ ಉತ್ತಮವಾಗಿದೆ. ಅಂದರೆ, ಎಲ್ಲರೂ ಸನಾತನ ಧರ್ಮವನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಮತ್ತು ಸಾಧನೆ ಮಾಡಿದರೆ, ವಿಚ್ಛೇದನಕ್ಕೆ ನಾವೇ ಶಾಶ್ವತವಾಗಿ ವಿಚ್ಛೇದನ ನೀಡಬಹುದು! |
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ