ಇರಾನ್‌ ನಿಂದ ತೈಲ ಖರೀದಿಸಿದಕ್ಕೆ ಭಾರತದ 6 ಕಂಪನಿಗಳ ಮೇಲೆ ಅಮೆರಿಕದಿಂದ ನಿರ್ಬಂಧ – Trump Sanctions Indian Oil Companies

ವಾಷಿಂಗ್ಟನ (ಅಮೆರಿಕ) – ಇರಾನ್‌ ನ ತೈಲ ಮತ್ತು ಪೆಟ್ರೋ ಕೆಮಿಕಲ್ ಉತ್ಪನ್ನಗಳ ಖರೀದಿ-ಮಾರಾಟದಲ್ಲಿ ಭಾರತೀಯ ಕಂಪನಿಗಳು ಮಹತ್ವದ ವಹಿವಾಟು ನಡೆಸಿವೆ, ಇದು ಅಮೆರಿಕದ ನಿರ್ಬಂಧಗಳ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಅಮೆರಿಕವು ಭಾರತದ 6 ಕಂಪನಿಗಳ ಮೇಲೆ ನಿರ್ಬಂಧಗಳನ್ನು ಹೇರಿದೆ. ಇರಾನ್‌ ನೊಂದಿಗೆ ವ್ಯಾಪಾರ ಮಾಡಿದ ಆರೋಪದ ಮೇಲೆ 20 ಜಾಗತಿಕ ಕಂಪನಿಗಳ ವಿರುದ್ಧ ಕೈಗೊಂಡ ಕ್ರಮದ ಒಂದು ಭಾಗವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅಮೆರಿಕದ ವಿದೇಶಾಂಗ ಇಲಾಖೆಯು ಈ ನಿರ್ಬಂಧಗಳನ್ನು ಘೋಷಿಸಿದೆ. ಭಾರತದ ಜೊತೆಗೆ ಟರ್ಕಿ, ಚೀನಾ, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಇಂಡೋನೇಷ್ಯಾ ದೇಶಗಳ ಕೆಲವು ಕಂಪನಿಗಳನ್ನೂ ಗುರಿಯಾಗಿಸಲಾಗಿದೆ.

1. ಆಲ್ಕೆಮಿಕಲ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್, ಗ್ಲೋಬಲ್ ಇಂಡಸ್ಟ್ರಿಯಲ್ ಕೆಮಿಕಲ್ಸ್ ಲಿಮಿಟೆಡ್, ಜುಪಿಟರ್ ಡೈ ಕೆಮ್ ಪ್ರೈವೇಟ್ ಲಿಮಿಟೆಡ್, ರಮಣಿಕ್‌ ಲಾಲ್ ಎಸ್. ಗೋಸಾಲಿಯಾ ಅಂಡ್ ಕಂಪನಿ, ಪರ್ಸಿಸ್ಟೆಂಟ್ ಪೆಟ್ರೋಕೆಮ್ ಪ್ರೈವೇಟ್ ಲಿಮಿಟೆಡ್ ಮತ್ತು ಕಾಂಚನ್ ಪಾಲಿಮರ್ಸ್ – ಇವು ಕಂಪನಿಗಳ ಹೆಸರುಗಳಾಗಿವೆ.

2. ಇರಾನ್ ತನ್ನ ತೈಲ ಮತ್ತು ಪೆಟ್ರೋಕೆಮಿಕಲ್ ಉತ್ಪನ್ನಗಳ ಮಾರಾಟದಿಂದ ಬರುವ ಆದಾಯವನ್ನು ಮಧ್ಯಪ್ರಾಚ್ಯದಲ್ಲಿ ಅಸ್ಥಿರತೆ ಸೃಷ್ಟಿಸಲು ಮತ್ತು ಭಯೋತ್ಪಾದಕ ಸಂಘಟನೆಗಳಿಗೆ ಬೆಂಬಲ ನೀಡಲು ಬಳಸುತ್ತಿದೆ, ಎಂದು ಅಮೆರಿಕಧ ಹೇಳಿಕೆಯಾಗಿದೆ.

ಸಂಪಾದಕೀಯ ನಿಲುವು

ಅಮೆರಿಕದ ಸರ್ವಾಧಿಕಾರಿ!