Malegav Blast : ಕಾಂಗ್ರೆಸ್‌ನ ‘ಹಿಂದೂ ಭಯೋತ್ಪಾದನೆ’ಯ ಸುಳ್ಳು ಆರೋಪ ಬಯಲು! – ಭಾಜಪ

ನವದೆಹಲಿ – ಕಾಂಗ್ರೆಸ್ ರೂಪಿಸಿದ ‘ಹಿಂದೂ ಭಯೋತ್ಪಾದನೆ’ ಪರಿಕಲ್ಪನೆಯ ಪಿತೂರಿ ಈಗ ನಾಶವಾಗಿದೆ. ಯಾವುದೇ ಆರೋಪಿಯ ವಿರುದ್ಧ ಯಾವುದೇ ದೃಢವಾದ ಪುರಾವೆಗಳು ಇರಲಿಲ್ಲ. ಕಾಶ್ಮೀರದಲ್ಲಿ ಭಯೋತ್ಪಾದನೆಯ ವಿರುದ್ಧ ಹೋರಾಡಿದ ಕರ್ನಲ್ ಪುರೋಹಿತ್ ಅವರ ಮೇಲೆ ಆರೋಪ ಹೊರಿಸಲಾಗಿತ್ತು. ಸಾಧ್ವಿ ಪ್ರಜ್ಞಾಸಿಂಗ್ ಠಾಕೂರ್ ಅವರ ಮೋಟಾರ್ ಸೈಕಲ್ ಅನ್ನು ಬಾಂಬ್ ಸ್ಫೋಟಕ್ಕೆ ಬಳಸಲಾಗಿದೆ ಎಂದು ಆರೋಪಿಸಲಾಗಿತ್ತು. ಅವರಿಗೆ ಎಷ್ಟು ಹಿಂಸೆ ನೀಡಲಾಯಿತೆಂದರೆ, ಅವರು ನಡೆಯಲು ಸಹ ಅಸಮರ್ಥರಾದರು. ಇದೆಲ್ಲವೂ ಕಾಂಗ್ರೆಸ್‌ನ ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ ರೂಪಿಸಲಾದ ಪಿತೂರಿಯಾಗಿತ್ತು. ನಾವು ನ್ಯಾಯಾಲಯದ ಈ ನಿರ್ಧಾರವನ್ನು ಸ್ವಾಗತಿಸುತ್ತೇವೆ ಎಂದು ಭಾಜಪ ನಾಯಕ ರವಿಶಂಕರ ಪ್ರಸಾದ್ ಪ್ರತಿಕ್ರಿಯಿಸಿದ್ದಾರೆ.