malegav Blast : ಕಾಂಗ್ರೆಸ್ ಕ್ಷಮೆ ಯಾಚಿಸಬೇಕು! – ದೇವೇಂದ್ರ ಫಡಣವೀಸ್, ಮುಖ್ಯಮಂತ್ರಿ

ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದ ತೀರ್ಪು – ರಾಜಕಾರಣಿಗಳ ಪ್ರತಿಕ್ರಿಯೆಗಳು

ಹಿಂದಿನ ಕಾಂಗ್ರೆಸ್ ಸರಕಾರವು ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಹಿಂದೂಗಳನ್ನು ಸಿಲುಕಿಸಲಾಗಿತ್ತು. ಈಗ ಅವರು ನಿರಪರಾಧೀಗಳೆಂದು ಬಿಡುಗಡೆಯಾಗಿದ್ದಾರೆ. ಈ ಪ್ರಕರಣದಲ್ಲಿ ಕಾಂಗ್ರೆಸ್ ಕ್ಷಮೆ ಯಾಚಿಸಬೇಕು! ಆ ಅವಧಿಯಲ್ಲಿ ಕೇಸರಿ ಭಯೋತ್ಪಾದನೆ ತೋರಿಸುವ ಪ್ರಯತ್ನ ಮಾಡಲಾಗಿತ್ತು; ಆದರೆ ಕಾಂಗ್ರೆಸ್‌ನ ಪ್ರಚಾರ ಸುಳ್ಳು ಎಂದು ಈಗ ನ್ಯಾಯಾಲಯದ ಮೂಲಕ ಬಹಿರಂಗವಾಗಿದೆ. ಕೇಸರಿ ಭಯೋತ್ಪಾದನೆಯ ನಿರೂಪಣೆ (ಕಥನ) ವಿಫಲವಾಗಿದೆ. ಹಿಂದಿನ ಸರಕಾರ ಹೇಳಿದಂತೆ ಪೊಲೀಸರು ವರ್ತಿಸಿದರು. ಹಾಗಾಗಿ ಪೊಲೀಸರನ್ನು ದೂಷಿಸುವುದು ಸರಿಯಲ್ಲ. ಪೊಲೀಸ್ ವ್ಯವಸ್ಥೆಯ ಮೇಲೆ ಒತ್ತಡ ಹೇರಲಾಗಿತ್ತು. ‘ಇಸ್ಲಾಮಿ ಭಯೋತ್ಪಾದನೆಯನ್ನು ಬಹಿರಂಗಪಡಿಸುತ್ತಿರುವಾಗ ಅದಕ್ಕೆ ಉತ್ತರವಾಗಿ ಕೇಸರಿ ಭಯೋತ್ಪಾದನೆಯನ್ನು ತರಬೇಕು’ ಎಂಬುದು ಕಾಂಗ್ರೆಸ್ ನೇತೃತ್ವದ ಸರಕಾರದ ಯೋಜನೆಯಾಗಿತ್ತು. ಮತಬ್ಯಾಂಕ್‌ಗಾಗಿ ಹಿಂದೂ ಭಯೋತ್ಪಾದನೆಯ ರಾಜಕೀಯ ಮಾಡಲಾಯಿತು.

“ಹಿಂದುತ್ವನಿಷ್ಠರನ್ನು ಆರೋಪಿಗಳನ್ನಾಗಿ ಸಿಕ್ಕಿಹಾಕಿಕೊಂಡವರು ಹಿಂದೂ ಸಮಾಜದ ಕ್ಷಮೆ ಯಾಚಿಸಬೇಕು! – ನಿತೇಶ ರಾಣೆ, ಮೀನುಗಾರಿಕೆ ಮತ್ತು ಬಂದರು ಅಭಿವೃದ್ಧಿ ಸಚಿವ, ಭಾಜಪ

‘ಹಿಂದೂ ಭಯೋತ್ಪಾದನೆ’ ಎಂದು ಹೇಳಿದವರ ಮುಖ ಈಗ ಕಪ್ಪಾಗಿದೆ. ಅವರಿಗೆ ಈಗ ಮುಖ ತೋರಿಸಲು ಸ್ಥಳವೇ ಉಳಿದಿಲ್ಲ. ಹಿಂದೂಗಳು ಎಂದಿಗೂ ಮತಾಂತರದ ಮೂಲಕ ಧರ್ಮವನ್ನು ಹೆಚ್ಚಿಸುವುದಿಲ್ಲ ಅಥವಾ ಧಾರ್ಮಿಕ ಸ್ಥಳಗಳನ್ನು ನಾಶಪಡಿಸಿ, ಅವುಗಳ ಮೇಲೆ ಆಕ್ರಮಣ ಮಾಡುವ ಮೂಲಕ ತಮ್ಮದೇ ಧಾರ್ಮಿಕ ಸ್ಥಳಗಳನ್ನು ನಿರ್ಮಿಸುವುದಿಲ್ಲ. ಹಿಂದೂ ಸಮಾಜವನ್ನು ಅಪಖ್ಯಾತಿಗೊಳಿಸಿದವರಿಗೆ ಇದು ತಕ್ಕ ಪಾಠವಾಗಿದೆ. ಇನ್ನು ಮುಂದೆ ಯಾರೂ ಹಿಂದೂ ಧರ್ಮವನ್ನು ಅಪಖ್ಯಾತಿಗೊಳಿಸಲು ಧೈರ್ಯ ಮಾಡಬಾರದು. ಭಯೋತ್ಪಾದನೆ ಅಥವಾ ಜಿಹಾದ್‌ನ ಬಣ್ಣ ಹಸಿರು ಎಂಬುದು ಈಗ ಸ್ಪಷ್ಟವಾಗಿದೆ. ಇಲ್ಲಿಯವರೆಗೆ ಅನೇಕ ಪ್ರಕರಣಗಳಲ್ಲಿ ಹಿಂದೂ ಕಾರ್ಯಕರ್ತರನ್ನು ಸುಳ್ಳು ಪ್ರಕರಣಗಳಲ್ಲಿ ಸಿಕ್ಕಿಹಾಕಿಕೊಳ್ಳಲಾಗಿದೆ. ಈಗ ಹಿಂದುತ್ವನಿಷ್ಠ ಸರಕಾರ ಇರುವಾಗ ಇದು ಸಾಧ್ಯವಿಲ್ಲ. ನಮ್ಮ ಹಿಂದೂ ರಾಷ್ಟ್ರದಲ್ಲಿ ಹಿಂದೂಗಳು ಸುರಕ್ಷಿತವಾಗಿರುತ್ತಾರೆ. ಹಿಂದೂಗಳನ್ನು ಉದ್ದೇಶಪೂರ್ವಕವಾಗಿ ಸಿಕ್ಕಿಹಾಕಿಕೊಂಡವರು ಹಿಂದೂ ಸಮಾಜದ ಕ್ಷಮೆಯನ್ನು ಯಾಚಿಸಬೇಕು!”

ಆಗಿನ ಕಾಂಗ್ರೆಸ್-ರಾಷ್ಟ್ರವಾದಿ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಕೇವಲ ಮತಗಳಿಗಾಗಿ ತುಷ್ಟೀಕರಣದ ರಾಜಕೀಯ ಮಾಡಲಾಗುತ್ತಿತ್ತು! – ಸುಧೀರ ಮುನಗಂಟಿವಾರ, ಭಾಜಪದ ಹಿರಿಯ ನಾಯಕ ಮತ್ತು ಮಾಜಿ ಸಚಿವ

ಅಪರಾಧಿಗಳಿಗೆ ತೊಂದರೆಯಾದರೂ ಪರವಾಗಿಲ್ಲ; ಆದರೆ ನಿರಪರಾಧಿಗಳಿಗೆ ತೊಂದರೆಯಾಗಬಾರದು. ಹಿಂದಿನ ಕಾಂಗ್ರೆಸ್-ರಾಷ್ಟ್ರವಾದಿ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಕೇವಲ ಮತಗಳಿಗಾಗಿ ತುಷ್ಟೀಕರಣದ ರಾಜಕೀಯ ಮಾಡಲಾಗುತ್ತಿತ್ತು. ನಿರ್ದಿಷ್ಟ ಧರ್ಮದ ಮೂಲಕ ಭಯೋತ್ಪಾದಕರು ಮುಂದೆ ಬರುತ್ತಿದ್ದರು. ಈಗ ದೇಶದ ಅಭಿವೃದ್ಧಿಯಾಗುತ್ತಿದೆ. ಹಿಂದೂ ಭಯೋತ್ಪಾದನೆ ಅಥವಾ ಕೇಸರಿ ಭಯೋತ್ಪಾದನೆ ಎಂದು ಆರೋಪ ಮಾಡಲಾಗಿತ್ತು; ಆದರೆ ಕೇಸರಿ ಎಂಬುವುದರ ಅರ್ಥವನ್ನು ತಿಳಿದುಕೊಳ್ಳಿ! ‘ಭ’ ಅಂದರೆ ಭಯರಹಿತ, ‘ಗ’ ಅಂದರೆ ಗರ್ವರಹಿತ ಮತ್ತು ‘ವಾ’ ಅಂದರೆ ವಾಸನಾರಹಿತ! ಹಾಗಾಗಿ ಇಂತಹ ಕೇಸರಿ ಭಯೋತ್ಪಾದನೆ ಇರಲು ಸಾಧ್ಯವಿಲ್ಲ.

ನ್ಯಾಯಾಲಯದ ನಿರ್ಧಾರ ಕಾಂಗ್ರೆಸ್‌ನ ವಿಕೃತ ರಾಜಕೀಯಕ್ಕೆ ಕಪಾಳಮೋಕ್ಷ! – ಕೇಶವ ಉಪಾಧ್ಯೆ, ವಕ್ತಾರರು, ಭಾಜಪ

ಈ ಪ್ರಕರಣದಲ್ಲಿ ಯಾವುದೇ ಸಾಕ್ಷ್ಯವನ್ನು ಹಾಜರುಪಡಿಸಲು ಸಾಧ್ಯವಾಗಿಲ್ಲ. ನ್ಯಾಯಾಲಯದ ನಿರ್ಧಾರವು ಕಾಂಗ್ರೆಸ್‌ನ ವಿಕೃತ ರಾಜಕೀಯಕ್ಕೆ ಕಪಾಳಮೋಕ್ಷವೇ ಸರಿ. ಕೇವಲ ಅಪೂರ್ಣ ಮಾಹಿತಿಯ ಮೇಲೆ ಹಿಂದೂಗಳನ್ನು ಅಪಖ್ಯಾತಿಗೊಳಿಸುವ ಸಂಚು ರೂಪಿಸಲಾಗಿತ್ತು. ಹಿಂದಿನ ಕಾಂಗ್ರೆಸ್ ಸರಕಾರ ಈ ಪ್ರಕರಣದಲ್ಲಿ ಹಿಂದೂಗಳ ಕ್ಷಮೆ ಯಾಚಿಸಬೇಕು.

ಕಿರಿಟ್ ಸೋಮಯ್ಯಾ, ಭಾಜಪ

ಹಿಂದೂಗಳನ್ನು ಉದ್ದೇಶಪೂರ್ವಕವಾಗಿ ಈ ಪ್ರಕರಣದಲ್ಲಿ ಸಿಕ್ಕಿಹಾಕಿಕೊಳ್ಳಲು ಪ್ರಯತ್ನಿಸಲಾಯಿತು. ಇದು ಕೇವಲ ಮತ ರಾಜಕೀಯಕ್ಕಾಗಿ ಮಾಡಲ್ಪಟ್ಟಿತು.

ಹಾಗಾದರೆ ಆರೋಪಿಗಳು ಎಲ್ಲಿ ಹೋದರು? – ಹರ್ಷವರ್ಧನ ಸಪ್ಕಾಳ್, ಕಾಂಗ್ರೆಸ್ ನಾಯಕ

7 ಆರೋಪಿಗಳು ನಿರಪರಾಧಿಗಳೆಂದು ಬಿಡುಗಡೆಯಾದರು; ಆದರೆ ಹಾಗಾದರೆ ಆರೋಪಿಗಳು ಎಲ್ಲಿ ಹೋದರು? ಯಾರು ತಪ್ಪಿತಸ್ಥರೋ ಅವರನ್ನು ಬಂಧಿಸಬೇಕು. ಅವರಿಗೆ ಶಿಕ್ಷೆಯಾಗಬೇಕು. 2008 ರಲ್ಲಿ ಮುಂಬಯಿ ಮೇಲಿನ ಭಯೋತ್ಪಾದಕ ದಾಳಿಯಲ್ಲಿ ಸಾವನ್ನಪ್ಪಿದ ಪೊಲೀಸ್ ಅಧಿಕಾರಿ ಹೇಮಂತ್ ಕರ್ಕರೆ ಅವರು ಮಾಲೆಗಾಂವ್ ಪ್ರಕರಣದ ಅನೇಕ ಸುಳಿವುಗಳನ್ನು ಕಂಡುಕೊಂಡಿದ್ದರು. ಅವುಗಳಿಗೆ ಏನಾಯಿತು? ಈಗ ಆರೋಪಿಗಳನ್ನು ಹುಡುಕುವುದು ಸರಕಾರದ ಜವಾಬ್ದಾರಿಯಾಗಿದೆ.

ಸುಳ್ಳು ಸಾಕ್ಷ್ಯಗಳನ್ನು ಸಲ್ಲಿಸಿದವರ ಮೇಲೆ ನ್ಯಾಯಾಲಯ ಯಾವ ಕ್ರಮ ಕೈಗೊಳ್ಳಲಿದೆ? – ಇಮ್ತಿಯಾಜ್ ಜಲೀಲ್, ಎಂ.ಐ.ಎಂ. ರಾಜ್ಯಾಧ್ಯಕ್ಷ

7 ಆರೋಪಿಗಳು ನಿರಪರಾಧಿಗಳೆಂದು ಬಿಡುಗಡೆಯಾಗಿದ್ದರೆ, ಹಾಗಾದರೆ ಈ ಬಾಂಬ್ ಸ್ಫೋಟವನ್ನು ಯಾರು ನಡೆಸಿದರು? ಈ ಪ್ರಕರಣದಲ್ಲಿ ಸಾಧ್ವಿ ಅಥವಾ ಸೇನಾ ಅಧಿಕಾರಿಯನ್ನು ಸಿಕ್ಕಿಹಾಕಿಕೊಳ್ಳಲಾಗಿತ್ತು. ಅವರನ್ನು ನಿರಪರಾಧಿಗಳೆಂದು ಬಿಡುಗಡೆ ಮಾಡಿದರೆ, ನ್ಯಾಯ ವ್ಯವಸ್ಥೆಯ ಬಗ್ಗೆ ಪ್ರಶ್ನೆ ಮೂಡುತ್ತದೆ. ಈ ಪ್ರಕರಣದಲ್ಲಿ ಸಾಕ್ಷ್ಯಗಳೇ ಇರಲಿಲ್ಲ, ಹಾಗಾದರೆ ಸುಳ್ಳು ಸಾಕ್ಷ್ಯಗಳನ್ನು ಸಲ್ಲಿಸಿದವರ ವಿರುದ್ಧ ನ್ಯಾಯಾಲಯ ಯಾವ ಕ್ರಮ ಕೈಗೊಳ್ಳಲಿದೆ?

ಮಾಲೆಗಾಂವ್ ತೀರ್ಪು ತನಿಖಾ ಸಂಸ್ಥೆಗಳ ವೈಫಲ್ಯ! – ಪೃಥ್ವಿರಾಜ್ ಚವ್ಹಾಣ್, ಕಾಂಗ್ರೆಸ್ ಹಿರಿಯ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ

ಮೊದಲ ಭಯೋತ್ಪಾದಕ ಘಟನೆ ನಥುರಾಮ್ ಗೋಡ್ಸೆ ಪ್ರಕರಣದಲ್ಲಿ ನಡೆಯಿತು. ಭಯೋತ್ಪಾದನೆಗೆ ಯಾವುದೇ ಧರ್ಮ, ಜಾತಿ, ಪಂಥ ಇರುವುದಿಲ್ಲ. ಭಯೋತ್ಪಾದಕ ಕೇವಲ ಅಪರಾಧಿ. ದಯವಿಟ್ಟು ನೀವು ‘ಕೇಸರಿ’ ಭಯೋತ್ಪಾದನೆ ಎಂಬ ಪದವನ್ನು ಬಳಸಬೇಡಿ. ಆ ಪದ ಪವಿತ್ರವಾದುದು. ಮಾಲೆಗಾಂವ್ ತೀರ್ಪು ತನಿಖಾ ಸಂಸ್ಥೆಗಳ ವೈಫಲ್ಯವಾಗಿದೆ. (ಇದು ಕೇವಲ ತನಿಖಾ ಸಂಸ್ಥೆಗಳ ವೈಫಲ್ಯವಲ್ಲ, ಆದರೆ ಅದರ ಮೇಲೆ ಒತ್ತಡ ಹೇರಿದ ಅಂದಿನ ಕಾಂಗ್ರೆಸ್ ಸರಕಾರದ ವೈಫಲ್ಯವೂ ಹೌದು ಎಂಬುದನ್ನು ಚವ್ಹಾಣ್ ಇಲ್ಲಿ ಮರೆಮಾಡುತ್ತಿದ್ದಾರೆ ಎಂಬುದನ್ನು ಗಮನಿಸಿ! – ಸಂಪಾದಕರು)