ಅನೇಕ ಮಹಿಳೆಯರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದರಿಂದ ಕ್ರಮ

ಬೀಜಿಂಗ್ (ಚೀನಾ) – ಚೀನಾದ ಪ್ರಸಿದ್ಧ ಶಾಓಲಿನ್ ಮಂದಿರದ ಮುಖ್ಯ ಅರ್ಚಕ ಶಿ ಯೋಂಗ್‌ಝಿನ್ ಅವರನ್ನು ಮಂದಿರದ ಆಸ್ತಿ ಮತ್ತು ನಿಧಿಯ ದುರುಪಯೋಗ, ಅನೇಕ ಮಹಿಳೆಯರೊಂದಿಗೆ ಅನೈತಿಕ ಸಂಬಂಧ ಹೊಂದುವುದು ಮತ್ತು ಅನೇಕ ಅನೈತಿಕ ಮಕ್ಕಳನ್ನು ಹುಟ್ಟುಹಾಕುವುದು ಮುಂತಾದ ಗಂಭೀರ ಆರೋಪಗಳ ಕಾರಣದಿಂದ ಹುದ್ದೆಯಿಂದ ತೆಗೆದುಹಾಕಲಾಗಿದೆ. ಅನೇಕ ಸರಕಾರಿ ಸಂಸ್ಥೆಗಳು ಜಂಟಿಯಾಗಿ ಈ ಆರೋಪಗಳ ಬಗ್ಗೆ ತನಿಖೆ ನಡೆಸುತ್ತಿವೆ.
ಚೀನಾದ ಬೌದ್ಧ ಸಂಘವು ಅವರ ಪ್ರಮಾಣಪತ್ರವನ್ನು ರದ್ದುಪಡಿಸಿದೆ. ಶಿ ಯೋಂಗ್‌ಝಿನ್ ಅವರ ಕೃತ್ಯಗಳಿಂದ ಬೌದ್ಧ ಸಮುದಾಯ ಮತ್ತು ಭಿಕ್ಕುಗಳ ಘನತೆಗೆ ಗಂಭೀರ ಹಾನಿಯನ್ನುಂಟುಮಾಡಿವೆ ಎಂದು ಸಂಘವು ಹೇಳಿದೆ.
ಶಾಓಲಿನ್ ಮಂದಿರದ ಇತಿಹಾಸ
ಶಾಓಲಿನ್ ಮಂದಿರವು ಮಧ್ಯ ಚೀನಾದ ಹೆನಾನ್ ಪ್ರಾಂತ್ಯದ ಬೆಟ್ಟಗಳಲ್ಲಿ ನೆಲೆಗೊಂಡಿದೆ. ಇದು ೧ ಸಾವಿರದ ೫೦೦ ವರ್ಷಗಳಷ್ಟು ಹಳೆಯದಾದ ಮಂದಿರವಾಗಿದ್ದು, ಧಾರ್ಮಿಕ ಕಾರಣಗಳಿಗಾಗಿ ಮಾತ್ರವಲ್ಲದೆ, ಅದರ ಮಾರ್ಷಲ್ ಆರ್ಟ್ಸ್ ಸಂಪ್ರದಾಯಕ್ಕಾಗಿ, ವಿಶೇಷವಾಗಿ ‘ಕುಂಗ್ ಫೂ’ಗಾಗಿ ಪ್ರಸಿದ್ಧವಾಗಿದೆ. ಪ್ರತಿ ವರ್ಷ ಭಾರತ ಮತ್ತು ವಿದೇಶಗಳಿಂದ ಲಕ್ಷಾಂತರ ಜನರು ಈ ಮಂದಿರವನ್ನು ನೋಡಲು ಬರುತ್ತಾರೆ.
ಸಂಪಾದಕೀಯ ನಿಲುವುಹಿಂದೂ ಸಂತರ ಮಾನಹಾನಿ ಮಾಡಲಾಗುತ್ತಿರುವಾಗ, ಬೌದ್ಧ ಧಾರ್ಮಿಕ ಮುಖ್ಯಸ್ಥರ ಬಗ್ಗೆ ಇಂತಹ ಚಿತ್ರಣವನ್ನು ಚಲನಚಿತ್ರಗಳಲ್ಲಿ ಎಂದಾದರೂ ತೋರಿಸಲಾಗುವುದೇ? |
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಚೀನಾದ ಸೇನೆಯೊಂದಿಗೆ ಪ್ರತಿ ವರ್ಷ ೧ ಸಾವಿರದ, ೧೦೦ ಬಾರಿ ಮುಖಾಮುಖಿ ಮಾತುಕತೆ!
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara