ಸಿದ್ಧಾರ್ಥನಗರ (ಉತ್ತರಪ್ರದೇಶ): ಉದ್ಯೋಗದ ಆಮಿಷವೊಡ್ಡಿ ಮತಾಂತರ ಮಾಡುತ್ತಿದ್ದ ಕಾಲೇಜಿನ ವ್ಯವಸ್ಥಾಪಕ ಅಹ್ಮದ್ ನ ಬಂಧನ!

ಸಿದ್ಧಾರ್ಥನಗರ (ಉತ್ತರಪ್ರದೇಶ) – ಜಿಲ್ಲೆಯ ಇಟಾವಾ ತಾಲೂಕಿನ ‘ಅಲ್ ಫಾರೂಕ್ ಇಂಟರ್ ಕಾಲೇಜ್’ನಲ್ಲಿ ಉದ್ಯೋಗದ ಆಮಿಷವೊಡ್ಡಿ ಮತಾಂತರ ನಡೆಸುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಕಾಲೇಜಿನ ವ್ಯವಸ್ಥಾಪಕ ಮಹಮ್ಮದ್ ಶಬ್ಬೀರ್ ಅಹ್ಮದ್ ನನ್ನು ಪೊಲೀಸರು ಬಂಧಿಸಿದ್ದಾರೆ. (ಕಾಲೇಜಿನ ವ್ಯವಸ್ಥಾಪಕನಾಗಿರುವ ಮಹಮ್ಮದ್ ಶಬ್ಬೀರ್ ಅಹ್ಮದ್ ಹಿಂದೂಗಳ ಮತಾಂತರದ ಪಿತೂರಿಯಲ್ಲಿ ಭಾಗಿಯಾಗಿದ್ದಾನೆಂದರೆ, ಯಾವುದೇ ಉನ್ನತ ಹುದ್ದೆಯಲ್ಲಿರುವ ಮುಸಲ್ಮಾನರು ಮೊದಲು ಮುಸಲ್ಮಾನರಾಗಿರುತ್ತಾರೆ ಮತ್ತು ನಂತರ ವ್ಯವಸ್ಥಾಪಕ ಅಥವಾ ಶಿಕ್ಷಕರಾಗಿರುತ್ತಾರೆ ಎಂಬುದನ್ನು ಇದರಿಂದ ಸ್ಪಷ್ಟವಾಗುತ್ತದೆ! – ಸಂಪಾದಕರು)

1. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ಧಾರ್ಥನಗರ ಜಿಲ್ಲೆಯ ನಿವಾಸಿ ಅಖಂಡ ಪ್ರತಾಪ ಸಿಂಗ್ ಅವರು ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ.

2. ಅಖಂಡ ಪ್ರತಾಪ ಸಿಂಗ್ ಅವರಿಗೆ ಶಬ್ಬೀರ್ ಅಹ್ಮದ್ ಉದ್ಯೋಗ ನೀಡುವ ಭರವಸೆ ನೀಡಿದ್ದನು. ಕೆಲವು ದಿನಗಳ ನಂತರ ಶಬ್ಬೀರ್ ಪ್ರತಾಪ ಸಿಂಗ್ ಅವರನ್ನು ತನ್ನ ಕಚೇರಿಗೆ ಕರೆಯಿಸಿಕೊಂಡು, ಅಲ್ಲಿ ಅವರನ್ನು ಮತಾಂತರಕ್ಕಾಗಿ ಒತ್ತಾಯಿಸಲು ಪ್ರಾರಂಭಿಸಿದನು.

3. ಅಖಂಡ ಪ್ರತಾಪ ಸಿಂಗ್ ಮತಾಂತರಕ್ಕೆ ನಿರಾಕರಿಸಿದಾಗ, ವಿದೇಶದಲ್ಲಿರುವ ಓರ್ವ ಮೌಲ್ವಿಯೊಂದಿಗೆ ಮಾತನಾಡುವಂತೆ ಶಬ್ಬೀರ್ ಹೇಳಿದನು ಮತ್ತು ಇಸ್ಲಾಂ ಧರ್ಮವನ್ನು ಸ್ವೀಕರಿಸಿದರೆ 20 ಲಕ್ಷ ರೂಪಾಯಿ ನೀಡುವುದಾಗಿ ಆಮಿಷವೊಡ್ಡಿದನು.

4. ಶಬ್ಬೀರ್ ಕೋಟ್ಯಾಧಿಪತಿ ಮತ್ತು ಪ್ರಭಾವಿ ವ್ಯಕ್ತಿಯಾಗಿದ್ದರಿಂದ ಅಖಂಡ ಪ್ರತಾಪ ಸಿಂಗ್ ಸ್ವಲ್ಪ ಸಮಯ ಸುಮ್ಮನಿದ್ದರು; ಆದರೆ ಹಿಂದೂಗಳನ್ನು ಮತಾಂತರ ಮಾಡುವ ತಂಡದ ಮುಖ್ಯಸ್ಥ ಛಂಗುರ್ ಪೀರ್‌ ನ ಬಂಧನದ ನಂತರ ಸಿಂಗ್ ಅವರ ಆತ್ಮವಿಶ್ವಾಸ ಹೆಚ್ಚಾಯಿತು ಮತ್ತು ಅವರು ಮಾಧ್ಯಮಗಳ ಮುಂದೆ ಬಂದು ಸತ್ಯವನ್ನು ಹೊರಹಾಕಿದರು.

5. ಇಟಾವಾ ಪೊಲೀಸರು ಶಬ್ಬೀರ್ ಅಹ್ಮದ್ ನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಪೊಲೀಸ್ ಅಧಿಕಾರಿ ಅನಿಲ್ ಓಜಾ ಅವರು, ಶಬ್ಬೀರ್ ಮತ್ತು ಛಂಗುರ್ ಪೀರ್ ನಡುವಿನ ಸಂಬಂಧದ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಸಂಪಾದಕೀಯ ನಿಲುವು

ಉತ್ತರಪ್ರದೇಶದಲ್ಲಿ ಮತಾಂತರ ವಿರೋಧಿ ಕಾನೂನು ಇದ್ದರೂ, ಅಲ್ಲಿನ ಮತಾಂಧ ಮುಸಲ್ಮಾನರು ಹಿಂದೂಗಳನ್ನು ಮತಾಂತರಿಸುವ ಧೈರ್ಯ ಮಾಡುತ್ತಾರೆ ಎಂದರೆ, ಅವರು ಎಷ್ಟೊಂದು ಕಿಡಿಗೇಡಿಗಳಾಗಿದ್ದಾರೆ ಎಂಬುದು ಇದರಿಂದ ತಿಳಿದುಬರುತ್ತದೆ. ಇದನ್ನು ತಡೆಯಲು ಇಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದೆ.