ಝಾರ್ಖಂಡ್‌ನಲ್ಲಿ ಆದಿವಾಸಿ ಹಿಂದೂ ಮಹಿಳೆಯ ಮೇಲೆ ಅತ್ಯಾಚಾರ – Jharkhand Tribal Women Rape

  • ಮತಾಂತರಕ್ಕಾಗಿ ಒತ್ತಡ ಕೂಡ ಹೇರಲಾಯಿತು!

  • ಸಾಹಿಬ್‌ಗಂಜ್‌ನಲ್ಲಿ ಪ್ರತಿದಿನ ಇಂತಹ ಘಟನೆಗಳು ನಡೆಯುತ್ತಿವೆ!

ರಾಂಚಿ (ಝಾರ್ಖಂಡ್) – ರಾಜ್ಯದ ಸಾಹಿಬ್‌ಗಂಜ್ ಜಿಲ್ಲೆಯಲ್ಲಿ, ಆಫ್ತಾಬ್ ಅನ್ಸಾರಿ ಎಂಬ ವ್ಯಕ್ತಿ ಒಬ್ಬ ವಿವಾಹಿತ ಹಿಂದೂ ಆದಿವಾಸಿ ಮಹಿಳೆಗೆ ನೌಕರಿ ನೀಡುವುದಾಗಿ ಆಮಿಷ ತೋರಿಸಿ, ಆಕೆಯನ್ನು ವಂಚಿಸಿ ಅತ್ಯಾಚಾರ ಮಾಡಿದ್ದಾನೆ. ಆಕೆಯ ವೀಡಿಯೋ ಮಾಡಿ ಬ್ಲಾಕ್‌ಮೇಲ್ ಮಾಡಲು ಆರಂಭಿಸಿ, ಮತಾಂತರಗೊಳ್ಳಲು ಒತ್ತಡ ಹೇರಿದ್ದಾನೆ. ಮಹಿಳೆ ನಿರಾಕರಿಸಿದಾಗ, ಅನ್ಸಾರಿ ಆಕೆಯ ಕುಟುಂಬವನ್ನು ಕೊಲ್ಲುವ ಬೆದರಿಕೆ ಹಾಕಿದ್ದಾನೆ.

ಈ ಪ್ರಕರಣದ ಕುರಿತು ಪತ್ರಕರ್ತೆ ಶುಭಿ ವಿಶ್ವಕರ್ಮ ಅವರು ಸ್ಥಳಕ್ಕೆ ಭೇಟಿ ನೀಡಿದಾಗ, ಸಾಹಿಬ್‌ಗಂಜ್ ಪ್ರದೇಶದಲ್ಲಿ ಮತಾಂಧ ಮುಸ್ಲಿಮರು ಆದಿವಾಸಿ ಮಹಿಳೆಯರನ್ನು ಬಲೆಗೆ ಬೀಳಿಸುವುದು ಸಾಮಾನ್ಯವಾಗಿದೆ ಎಂದು ತಿಳಿದುಬಂದಿದೆ. ಹೆಚ್ಚಿನ ಸಂದರ್ಭಗಳಲ್ಲಿ, ಈ ಮಹಿಳೆಯರು ವಿವಾಹಿತರಾಗಿದ್ದರೂ ಸಹ, ಅವರನ್ನು ಮತಾಂತರಗೊಳಿಸಿ ಮದುವೆ ಮಾಡಲಾಗುತ್ತದೆ, ನಂತರ ಮುಸ್ಲಿಮರು ಹಿಂದೂ ವಸಾಹತುಗಳ ಹೊರಗೆ ನೆಲೆಸುತ್ತಾರೆ.

ಪಂಚಾಯತ್ ಅಧ್ಯಕ್ಷೆ ಮೋನಿಕಾ ಕಿಸ್ಕೆ ಅವರ ಭಯಾನಕ ಪ್ರಕರಣ!

ಶುಭಿ ಅವರು ಆದಿವಾಸಿ ಮಹಿಳಾ ಪಂಚಾಯತ್ ಅಧ್ಯಕ್ಷೆ ಮೋನಿಕಾ ಕಿಸ್ಕೂ ಅವರ ಉಲ್ಲೇಖ ಮಾಡಿದ್ದಾರೆ. ಇವರನ್ನು ಉಮೇದ್ ಎಂಬ ವ್ಯಕ್ತಿ ವಂಚಿಸಿದ್ದ. ಉಮೇದ್‌ನ ಮರಣದ ನಂತರ, ಆತನ ಸಹೋದರ ಅಲಿ ಆಕೆಯನ್ನು ಮದುವೆಯಾಗಿದ್ದಾನೆ. ಅಲಿ ಸ್ಥಳೀಯ ಝಾರ್ಖಂಡ್ ಮುಕ್ತಿ ಮೋರ್ಚಾದ ನಾಯಕನಾಗಿದ್ದಾನೆ. ವಿಶೇಷವೆಂದರೆ, ಮೋನಿಕಾ ತನ್ನ ಹೆಸರನ್ನು ಬದಲಾಯಿಸಿಲ್ಲ. ಆದಿವಾಸಿ ಗುರುತನ್ನು ಹಾಗೆಯೇ ಇಟ್ಟುಕೊಂಡಿರುವುದರಿಂದ ಅದರಿಂದ ಅಲಿಗೆ ಮೀಸಲಾತಿ, ಸೌಲಭ್ಯಗಳು ಮತ್ತು ರಾಜಕೀಯ ಅಭ್ಯರ್ಥಿ ಸ್ಥಾನ ದೊರೆಯಬಹುದು. ‘ಝಾರ್ಖಂಡ್ ಮುಕ್ತಿ ಮೋರ್ಚಾ’ದ ಹೆಸರಿನಲ್ಲಿ ‘ಇದೆಲ್ಲವೂ ರಹಸ್ಯವಾಗಿ, ಪ್ರತಿದಿನ ನಡೆಯುತ್ತಿದೆ’ ಎಂದು ಶುಭಿ ಹೇಳಿದ್ದಾರೆ. ರಾಜ್ಯದಲ್ಲಿ ಇಂತಹ ಅನೇಕ ಘಟನೆಗಳು ನಡೆಯುತ್ತಿವೆ.

ಸಂಪಾದಕೀಯ ನಿಲುವು

ಝಾರ್ಖಂಡ್‌ ಮುಕ್ತಿ ಮೋರ್ಚಾ ಸರ್ಕಾರವು ಮುಸ್ಲಿಮರ ಪರ ಇರುವುದರಿಂದ ಇಂತಹ ಘಟನೆಗಳು ನಡೆಯುವುದರಲ್ಲಿ ಆಶ್ಚರ್ಯವಿಲ್ಲ; ಆದರೆ ರಾಜ್ಯದ ಹಿಂದೂ ಮತದಾರರು ಪದೇ ಪದೇ ಝಾರ್ಖಂಡ್‌ ಮುಕ್ತಿ ಮೋರ್ಚಾವನ್ನೇ ಆಯ್ಕೆ ಮಾಡುವುದು ಹೆಚ್ಚು ದುರದೃಷ್ಟಕರ ವಿಷಯವಾಗಿದೆ!