ಭಾರತ, ಚೀನಾ ಮತ್ತು ಸಿಂಗಾಪುರದ ವೈದ್ಯರಿಗೆ ಧನ್ಯವಾದಗಳನ್ನು ಅರ್ಪಿಸಿದ ಮೊಹಮ್ಮದ್ ಯೂನುಸ್ : Bangladesh Thanks India

ಬಾಂಗ್ಲಾದೇಶ ವಿಮಾನ ಅಪಘಾತದಲ್ಲಿ ಗಾಯಗೊಂಡವರಿಗೆ ಚಿಕಿತ್ಸೆ ನೀಡಿದ ಪ್ರಕರಣ

ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ (ಎಡ)

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದ ಮಧ್ಯಂತರ ಸರಕಾರದ ಮುಖ್ಯ ಸಲಹೆಗಾರ ಮೊಹಮ್ಮದ್ ಯೂನುಸ್ ಅವರು ಭಾರತ, ಚೀನಾ ಮತ್ತು ಸಿಂಗಾಪುರದಿಂದ ಬಂದ ವೈದ್ಯರ ತಂಡಗಳನ್ನು ಭೇಟಿಯಾದರು. ಈ ತಂಡದ ವೈದ್ಯರು ಢಾಕಾದಲ್ಲಿ ನಡೆದ ವಿಮಾನ ಅಪಘಾತದಲ್ಲಿ ಗಾಯಗೊಂಡವರಿಗೆ ಸಹಾಯ ಮಾಡಿದ್ದಕ್ಕಾಗಿ ಯೂನುಸ್ ಅವರು ಧನ್ಯವಾದಗಳನ್ನು ಸಲ್ಲಿಸಿದರು. ಈ ವೈದ್ಯರು ಕೇವಲ ತಮ್ಮ ಕೌಶಲ್ಯವನ್ನು ಮಾತ್ರವಲ್ಲದೆ, ಹೃದಯವನ್ನೂ ತಂದಿದ್ದಾರೆ ಎಂದು ಯೂನುಸ್ ಹೇಳಿದರು.

ಈ ಭೇಟಿಯ ಸಮಯದಲ್ಲಿ 21 ವೈದ್ಯರು ಮತ್ತು ದಾದಿಯರು ಉಪಸ್ಥಿತರಿದ್ದರು. ಈ ತಂಡವು ಢಾಕಾದ ಶಾಲೆಯ ಮೇಲೆ ವಿಮಾನ ಅಪ್ಪಳಿಸಿದ್ದರಿಂದ ಗಾಯಗೊಂಡವರಿಗೆ ಚಿಕಿತ್ಸೆ ನೀಡುತ್ತಿದೆ. ಗಾಯಗೊಂಡವರಲ್ಲಿ ಹೆಚ್ಚಿನವರು ಶಾಲಾ ಮಕ್ಕಳಿದ್ದಾರೆ. ಸಂತ್ರಸ್ತರಿಗೆ ಸಹಾಯ ಮಾಡಲು ಭಾರತವು ವೈದ್ಯಕೀಯ ಉಪಕರಣಗಳು ಮತ್ತು ವೈದ್ಯರು ಹಾಗೂ ದಾದಿಯರನ್ನು ಕಳುಹಿಸಿದೆ. ಈ ಅಪಘಾತದಲ್ಲಿ 31 ಜನರು ಮೃತಪಟ್ಟಿದ್ದರು.

ಸಂಪಾದಕೀಯ ನಿಲುವು

ಭಾರತದ ಗಾಂಧಿಗಿರಿ! ಭಾರತ ಈ ರೀತಿ ಗಾಂಧಿಗಿರಿ ತೋರಿಸಿದರೂ, ಸ್ವಾತಂತ್ರ್ಯವೀರ ಸಾವರಕರ್ ಅವರಂತೆ ಯುದ್ಧನೀತಿಯನ್ನೂ ಅಳವಡಿಸಿಕೊಳ್ಳುವುದು ಅವಶ್ಯಕ!