ಡೆಹ್ರಾಡೂನ್ ನಲ್ಲಿ ಕಾವಡ ಯಾತ್ರಾರ್ಥಿಗಳಿಗೆ ಭಂಡಾರ ಆಯೋಜನೆ ಮಾಡಿದರು!

ಡೆಹ್ರಾಡೂನ್ (ಉತ್ತರಾಖಂಡ) – ಜಪಾನಿನ 41 ವರ್ಷದ ಹೋಶಿ ತಾಕಾಯುಕಿ ಅವರು ಟೋಕಿಯೋದಲ್ಲಿ 15 ಸೌಂದರ್ಯವರ್ಧಕ ಅಂಗಡಿಗಳನ್ನು ನಡೆಸುತ್ತಿದ್ದ ಯಶಸ್ವಿ ಉದ್ಯಮಿಯಾಗಿದ್ದರು; ಆದರೆ ಈಗ ಅವರು ಕಾವಿ ಬಟ್ಟೆ ತೊಟ್ಟು ಶಿವಭಕ್ತರಾಗಿ ‘ಬಾಲಾ ಕುಂಭ ಗುರುಮುನಿ’ ಎಂಬ ಹೆಸರಿನಿಂದ ಗುರುತಿಸಲ್ಪಡುತ್ತಾರೆ. ಪ್ರಸ್ತುತ ಅವರು ಉತ್ತರಾಖಂಡದಲ್ಲಿ ಯಾತ್ರೆ ಮಾಡುತ್ತಿದ್ದು, ಡೆಹ್ರಾಡೂನ್ ನಲ್ಲಿ ಕಾವಡ ಯಾತ್ರಾರ್ಥಿಗಳಿಗೆ 2 ದಿನಗಳ ಭಂಡಾರವನ್ನು (ಅನ್ನದಾಸೋಹ) ಆಯೋಜಿಸುತ್ತಿದ್ದಾರೆ. ತಾಕಾಯುಕಿ ತಮ್ಮನ್ನು ಹಿಮಾಲಯದಲ್ಲಿ ಜನಿಸಿದವರು ಎಂದು ನಂಬುತ್ತಾರೆ. ಅವರು ಉತ್ತರಾಖಂಡದಲ್ಲಿ ಒಂದು ಆಶ್ರಮ ಮತ್ತು ಪುದುಚೇರಿಯಲ್ಲಿ ಒಂದು ಶಿವ ದೇವಾಲಯವನ್ನು ನಿರ್ಮಿಸಲು ಸಂಕಲ್ಪ ಮಾಡಿದ್ದಾರೆ.
ನಾಡಿ ಪಟ್ಟಿ ಜ್ಯೋತಿಷ್ಯದಿಂದ ಆಧ್ಯಾತ್ಮದತ್ತ ತಿರುಗಿದರು!
ತಾಕಾಯುಕಿ ಅವರ ಆಧ್ಯಾತ್ಮಿಕ ಪ್ರಯಾಣ ಸುಮಾರು ಎರಡು ದಶಕಗಳ ಹಿಂದೆ ತಮಿಳುನಾಡಿನಲ್ಲಿ ಪ್ರಾರಂಭವಾಯಿತು. ಅಲ್ಲಿ ಅವರು ನಾಡಿ ಪಟ್ಟಿ ಜ್ಯೋತಿಷ್ಯವನ್ನು ಅನುಭವಿಸಿದರು. ನಾಡಿ ಪಟ್ಟಿಯ ವಾಚನದಲ್ಲಿ ಅವರಿಗೆ ಅವರ ಪೂರ್ವಜನ್ಮ ಹಿಮಾಲಯದಲ್ಲಿ ಆಗಿತ್ತು ಮತ್ತು ಅವರ ಜೀವನದಲ್ಲಿ ಸನಾತನ ಧರ್ಮವು ಮಹತ್ವದ ಪಾತ್ರವನ್ನು ವಹಿಸುತ್ತದೆ ಎಂದು ಹೇಳಲಾಯಿತು.
ಟೋಕಿಯೋಗೆ ಹಿಂದಿರುಗಿದ ನಂತರ, ತಾಕಾಯುಕಿ ಒಂದು ದೈವಿ ಕನಸನ್ನು ಕಂಡರು. ಕನಸಿನಲ್ಲಿ ಅವರು ಉತ್ತರಾಖಂಡದಲ್ಲಿರುವಂತೆ ಕಂಡರು. ಇದರ ನಂತರ ಅವರ ಜೀವನವು ತಿರುವು ಪಡೆಯಿತು. ಅವರು ತಮ್ಮ ಎಲ್ಲಾ ವ್ಯವಹಾರಗಳನ್ನು ಅಧಿಕಾರಿಗಳಿಗೆ ಹಸ್ತಾಂತರಿಸಿದರು, ತಮ್ಮ ಹೆಸರನ್ನು ಬದಲಾಯಿಸಿಕೊಂಡರು, ಮತ್ತು ಟೋಕಿಯೋದಲ್ಲಿ ತಮ್ಮ ಮನೆಯನ್ನು ಶಿವನ ದೇವಾಲಯವಾಗಿ ಪರಿವರ್ತಿಸಿದರು. ಅಷ್ಟೇ ಅಲ್ಲದೆ, ಅವರು ಅಲ್ಲಿ ಮತ್ತೊಂದು ದೇವಸ್ಥಾನವನ್ನೂ ನಿರ್ಮಿಸಿದರು.
20 ಜಪಾನಿ ಅನುಯಾಯಿಗಳೊಂದಿಗೆ ತಾಕಾಯುಕಿ ಭಂಡಾರ ಆಯೋಜಿಸಿದರು

ಈ ವರ್ಷ ಜುಲೈನಲ್ಲಿ ಭಾರತಕ್ಕೆ ಮರಳಿದಾಗ, ತಾಕಾಯುಕಿ ಕಾವಡ್ ಯಾತ್ರೆಯಲ್ಲಿ ಭಾಗವಹಿಸಿದರು. ಅವರು ಬರಿಗಾಲಿನಲ್ಲಿ ನಡೆದು ಗಂಗಾಜಲವನ್ನು ಹೊತ್ತು ಯಾತ್ರೆ ಮಾಡಿದರು ಮತ್ತು ಡೆಹ್ರಾಡೂನ್ ನಲ್ಲಿ ಯಾತ್ರಾರ್ಥಿಗಳಿಗೆ ಭಂಡಾರವನ್ನು (ಅನ್ನದಾಸೋಹ) ಆಯೋಜಿಸಿದರು. ಅವರೊಂದಿಗೆ 20 ಜಪಾನಿ ಅನುಯಾಯಿಗಳು ಸಹ ಕಾವಿ ಬಟ್ಟೆ ಧರಿಸಿ ಈ ಯಾತ್ರೆಯಲ್ಲಿ ಭಾಗವಹಿಸಿದ್ದರು.
ತಾಕಾಯುಕಿ ಅವರ ಸ್ನೇಹಿತ ರಮೇಶ ಸುಂದ್ರಿಯಾಲ್ ಅವರ ಪ್ರಕಾರ, ತಾಕಾಯುಕಿ ಪುದುಚೇರಿಯಲ್ಲಿ 35 ಎಕರೆ ಭೂಮಿಯನ್ನು ಖರೀದಿಸಿದ್ದಾರೆ. ಅಲ್ಲಿ ಅವರು ಒಂದು ಭವ್ಯವಾದ ಶಿವ ದೇವಾಲಯವನ್ನು ನಿರ್ಮಿಸಲಿದ್ದಾರೆ. ಉತ್ತರಾಖಂಡದಲ್ಲಿಯೂ ಒಂದು ಆಶ್ರಮವನ್ನು ನಿರ್ಮಿಸುವ ಅವರ ಸಂಕಲ್ಪವಿದೆ.
‘ನನಗೆ ದೇವಭೂಮಿ ಉತ್ತರಾಖಂಡದೊಂದಿಗೆ ಆಳವಾದ ಆತ್ಮಿಕ ಸಂಬಂಧವಿದೆ ಎಂದು ಅನಿಸುತ್ತದೆ. ನನ್ನ ಪೂರ್ವಜನ್ಮ ಇಲ್ಲೇ ಆಗಿತ್ತು ಎಂದು ನನಗೆ ಖಚಿತವಾಗಿದೆ. ಇಂದಿಗೂ ನಾನು ಆ ಜನ್ಮದ ನನ್ನ ಆ ಪರ್ವತ ವಾಸಸ್ಥಾನವನ್ನು ಹುಡುಕುತ್ತಿದ್ದೇನೆ.’ – ತಾಕಾಯುಕಿ
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ನ್ಯಾಯಾಧೀಶರ ಕುರ್ಚಿಯ ಮೇಲೆ ಮಾಟಮಂತ್ರ ಮಾಡಿದ ಆರೋಪದಡಿ ಮಹಿಳೆಯ ಬಂಧನ