ದೆಹಲಿ ಉಚ್ಚ ನ್ಯಾಯಾಲಯದ ತೀರ್ಪು

ನವ ದೆಹಲಿ – ಕೋವಿಡ್ ಸಾಂಕ್ರಾಮಿಕದ ಮೊದಲ ಅಲೆಯ ಸಮಯದಲ್ಲಿ, ತಬ್ಲೀಘಿ ಜಮಾತ್ ನ ಪ್ರಧಾನ ಕಚೇರಿಯ ಶಿಬಿರದಲ್ಲಿ ಭಾಗವಹಿಸಿದ್ದ ವಿದೇಶಿ ಪ್ರಜೆಗಳಿಗೆ ತಮ್ಮ ಮನೆಗಳಲ್ಲಿ ಆಶ್ರಯ ನೀಡಿದ ಭಾರತೀಯ ನಾಗರಿಕರ ವಿರುದ್ಧ ದಾಖಲಿಸಲಾದ ಪ್ರಕರಣಗಳ ಬಗ್ಗೆ ದೆಹಲಿ ಉಚ್ಚ ನ್ಯಾಯಾಲಯ ತೀರ್ಪು ನೀಡಿದೆ. ನ್ಯಾಯಾಲಯವು 70 ಭಾರತೀಯ ನಾಗರಿಕರ ಮೇಲಿನ 16 ಪ್ರಕರಣಗಳನ್ನು ರದ್ದುಗೊಳಿಸಲು ಆದೇಶಿಸಿದೆ. ಪ್ರಸ್ತುತ ಪರಿಸ್ಥಿತಿ ಮತ್ತು ಲಭ್ಯವಿರುವ ಪುರಾವೆಗಳನ್ನು ಗಮನಿಸಿದರೆ, ಈ ಪ್ರಕರಣವನ್ನು ಮುಂದುವರಿಸುವುದು ನ್ಯಾಯದ ಹಿತಾಸಕ್ತಿಯಲ್ಲಿರುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಯಾವ ಆರೋಪ?
ಈ ಪ್ರಕರಣದಲ್ಲಿ 70 ಭಾರತೀಯ ನಾಗರಿಕರು ಸುಮಾರು 190 ವಿದೇಶಿ ನಾಗರಿಕರಿಗೆ ತಮ್ಮ ಮನೆಗಳಲ್ಲಿ ಆಶ್ರಯ ನೀಡಿದ್ದರು ಎಂಬ ಆರೋಪವಿತ್ತು. ಈ ನಾಗರಿಕರು ಮಾರ್ಚ್ 2020 ರಲ್ಲಿ ದೆಹಲಿಯ ನಿಜಾಮುದ್ದೀನ್ ನಲ್ಲಿರುವ ತಬ್ಲೀಘಿ ಜಮಾತ್ ನ ಪ್ರಧಾನ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ದೆಹಲಿ ಪೊಲೀಸರು ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ, ಸಾಂಕ್ರಾಮಿಕ ರೋಗ ಕಾಯಿದೆ, ವಿಪತ್ತು ನಿರ್ವಹಣಾ ಕಾಯಿದೆ ಮತ್ತು ವಿದೇಶಿ ನಾಗರಿಕ ಕಾಯಿದೆಯ ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿದ್ದರು. ಲಾಕ್‌ಡೌನ್ ಸಮಯದಲ್ಲಿ ಸರಕಾರದ ಆದೇಶಗಳನ್ನು ಉಲ್ಲಂಘಿಸಿ ಈ ಆರೋಪಿಗಳು ವಿದೇಶಿ ನಾಗರಿಕರನ್ನು ತಮ್ಮ ಮನೆಗಳಲ್ಲಿ ಇರಿಸಿಕೊಳ್ಳುವುದು ನಿಯಮಗಳ ಉಲ್ಲಂಘನೆಯಾಗಿದೆ ಎಂದು ಪೊಲೀಸರು ಹೇಳಿದ್ದರು.
ಆರೋಪಿಗಳ ನ್ಯಾಯವಾದಿಗಳು, ಆರೋಪಿಗಳಿಗೆ ಯಾವುದೇ ಅಪರಾಧದ ಉದ್ದೇಶವಿರಲಿಲ್ಲ ಮತ್ತು ಅವರನ್ನು ದೋಷಿಗಳೆಂದು ಸಾಬೀತುಪಡಿಸಲು ಯಾವುದೇ ದೃಢವಾದ ಪುರಾವೆಗಳು ಲಭ್ಯವಿಲ್ಲ ಎಂದು ವಾದಿಸಿದರು.
ತಬ್ಲೀಘಿ ಜಮಾತ್ ಎಂದರೇನು?ತಬ್ಲೀಘಿ ಜಮಾತ್ ಒಂದು ಧಾರ್ಮಿಕ ಸಮೂಹವಾಗಿದ್ದು, ಇಸ್ಲಾಂ ಧರ್ಮವನ್ನು ಪ್ರಚಾರ ಮಾಡುವುದು ಇದರ ಮುಖ್ಯ ಉದ್ದೇಶವಾಗಿದೆ. ಭಾರತ ಸೇರಿದಂತೆ ವಿಶ್ವದಾದ್ಯಂತ ಈ ಜಮಾತ್ ಸಕ್ರಿಯವಾಗಿದೆ. ಅವರ ಸದಸ್ಯರ ಸಣ್ಣ ಗುಂಪುಗಳು ದೇಶ-ವಿದೇಶಗಳಲ್ಲಿ ಪ್ರಯಾಣಿಸುವುದು ಅವರ ಕಾರ್ಯವಿಧಾನದ ಭಾಗವಾಗಿದೆ. ವಿಶೇಷವೆಂದರೆ, ಮುಸ್ಲಿಂ ಆಕ್ರಮಣಕಾರರು ಭಾರತದಲ್ಲಿ ಹಿಂದೂಗಳನ್ನು ಬಲವಂತವಾಗಿ ಮತಾಂತರ ಮಾಡಿದ ನಂತರ ಅವರಿಗೆ ಇಸ್ಲಾಂನ ಸಂಪ್ರದಾಯಗಳನ್ನು ಕಲಿಸಲು ಈ ಗುಂಪನ್ನು ಸ್ಥಾಪಿಸಲಾಯಿತು ಎಂದು ಹೇಳಲಾಗುತ್ತದೆ. |
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”