ತಮ್ಮನ್ನು ‘ಮೇಲ್ವರ್ಗದವರು’ ಎಂದು ತಿಳಿದುಕೊಳ್ಳುವ ಉಚ್ಚ ನ್ಯಾಯಾಲಯದ ನ್ಯಾಯಧೀಶರು, ಜಿಲ್ಲಾ ನ್ಯಾಯಾಧೀಶರನ್ನು ಶೂದ್ರರಂತೆ ನಡೆಸಿಕೊಳ್ಳುತ್ತಾರೆ!

  • ಮಧ್ಯಪ್ರದೇಶ ಉಚ್ಚ ನ್ಯಾಯಾಲಯದಿಂದ ತೀವ್ರ ಟೀಕೆ

  • ವ್ಯಾಪಂ ಹಗರಣದ ಪ್ರಕರಣದಲ್ಲಿ ವಜಾಗೊಂಡ ನ್ಯಾಯಾಧೀಶರನ್ನು ಮರಳಿ ಸೇವೆಗೆ ತೆಗೆದುಕೊಳ್ಳಲಾಗಿದೆ

ಭೋಪಾಲ (ಮಧ್ಯಪ್ರದೇಶ) – ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ, ನ್ಯಾಯಾಧೀಶರು ತಮ್ಮನ್ನು ‘ತಮ್ಮನ್ನು ‘ಮೇಲ್ವರ್ಗದವರು’ ಎಂದು ಪರಿಗಣಿಸುತ್ತಾರೆ ಮತ್ತು ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರನ್ನು ಶೂದ್ರರಂತೆ ನಡೆಸಿಕೊಳ್ಳುತ್ತಾರೆ” ಎಂದು ತೀವ್ರವಾಗಿ ಟೀಕಿಸಿದೆ. ರಾಜ್ಯದ ವ್ಯಾಪಂ ನೇಮಕಾತಿ ಹಗರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ವಜಾಗೊಂಡಿದ್ದ ಜಿಲ್ಲಾ ನ್ಯಾಯಾಧೀಶರನ್ನು ಮತ್ತೆ ಸೇವೆಗೆ ತೆಗೆದುಕೊಳ್ಳುವಾಗ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿತು. ನ್ಯಾಯಾಧೀಶ ಜಗತ ಮೋಹನ ಚತುರ್ವೇದಿ ಅವರ ಸೇವೆಯನ್ನು ಅಕ್ರಮವಾಗಿ ಅಂತ್ಯಗೊಳಿಸಲಾಗಿತ್ತು ಎಂದು ಹೇಳಿ ಉಚ್ಚ ನ್ಯಾಯಾಲಯ ಆ ಆದೇಶವನ್ನು ರದ್ದುಗೊಳಿಸಿತು. ಅಲ್ಲದೆ, ಅವರ ಪಿಂಚಣಿಗೆ ಸಂಬಂಧಿಸಿದ ಎಲ್ಲಾ ಹಕ್ಕುಗಳನ್ನು ಮರುಸ್ಥಾಪಿಸಲು ಆದೇಶಿಸಿತು. “ನ್ಯಾಯಾಧೀಶ ಚತುರ್ವೇದಿ ಅವರಿಗೆ ದೊಡ್ಡ ಅನ್ಯಾಯವಾಗಿದೆ” ಎಂದು ಹೇಳಿ ನ್ಯಾಯಾಂಗದ ಆದೇಶ ನೀಡಿದ್ದರಿಂದ ಅವರಿಗೆ ಮತ್ತು ಅವರ ಕುಟುಂಬಕ್ಕೆ ಉಂಟಾದ ತೊಂದರೆ ಮತ್ತು ಸಾಮಾಜಿಕ ಮಾನಹಾನಿಗಾಗಿ ರಾಜ್ಯ ಸರಕಾರಕ್ಕೆ 5 ಲಕ್ಷ ರೂಪಾಯಿ ದಂಡವನ್ನು ವಿಧಿಸಿತು. 2014ರಲ್ಲಿ ವ್ಯಾಪಂ ಹಗರಣಕ್ಕೆ ಸಂಬಂಧಿಸಿದ ಕೆಲವು ಪ್ರಕರಣಗಳಲ್ಲಿ ವಿವಿಧ ಜಾಮೀನು ಆದೇಶಗಳನ್ನು ನೀಡಿದ್ದಕ್ಕಾಗಿ ಚತುರ್ವೇದಿ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು. ಈ ನಿರ್ಧಾರದ ವಿರುದ್ಧ ಅವರು ಉಚ್ಚ ನ್ಯಾಯಾಲಯದ ಮೊರೆ ಹೋಗಿದ್ದರು.

ಮಧ್ಯಪ್ರದೇಶ ಉಚ್ಚ ನ್ಯಾಯಾಲಯ ಮಂಡಿಸಿದ ಅಭಿಪ್ರಾಯಗಳು

ಭಯ ಮತ್ತು ಕೀಳರಿಕೆ ಆಧಾರಿತ ಸಂಬಂಧಗಳು:

ರಾಜ್ಯದ ಉಚ್ಚ ನ್ಯಾಯಾಲಯ ಮತ್ತು ಜಿಲ್ಲಾ ನ್ಯಾಯಾಂಗದ ನಡುವಿನ ಸಂಬಂಧಗಳು ಪರಸ್ಪರ ಗೌರವದ ಮೇಲೆ ಆಧಾರಿತವಾಗಿಲ್ಲ, ಬದಲಿಗೆ ಭಯ ಮತ್ತು ಕೀಳರಿಕೆ ಮೇಲೆ ಆಧಾರಿತವಾಗಿವೆ. ಸುಪ್ತ ಮಟ್ಟದಲ್ಲಿ ಜಾತಿ ವ್ಯವಸ್ಥೆಯ ಕರಿ ನೆರಳು ಇಲ್ಲಿ ಕಾಣಿಸುತ್ತದೆ, ಅಲ್ಲಿ ಉಚ್ಚ ನ್ಯಾಯಾಲಯದ ಜನರು ‘ತಮ್ಮನ್ನು ‘ಮೇಲ್ವರ್ಗದವರು’ ಮತ್ತು ಜಿಲ್ಲಾ ನ್ಯಾಯಾಂಗದ ಬಡವರು ‘ಶೂದ್ರರು’ ಆಗಿದ್ದಾರೆ.

‘ಜಮೀನುದಾರ ಮತ್ತು ಗುಲಾಮ’ರಂತಹ ಸಂಬಂಧಗಳು

ನ್ಯಾಯಾಲಯದ ನ್ಯಾಯಾಧೀಶರು ಮತ್ತು ಜಿಲ್ಲಾ ನ್ಯಾಯಾಂಗದ ನ್ಯಾಯಾಧೀಶರ ನಡುವಿನ ಸಂಬಂಧಗಳು ‘ಜಮೀನುದಾರ ಮತ್ತು ಗುಲಾಮ’ರಂತಹವಾಗಿವೆ.
ಬೆನ್ನೆಲುಬಿಲ್ಲದ ಜಿಲ್ಲಾ ನ್ಯಾಯಾಧೀಶರು

ಜಿಲ್ಲಾ ನ್ಯಾಯಾಧೀಶರು ಉಚ್ಚ ನ್ಯಾಯಾಲಯದ ನ್ಯಾಯಾಧೀಶರಿಗೆ ನಮಸ್ಕರಿಸುವಾಗ, ಅವರ ದೇಹ ಭಾಷೆ ಅಕ್ಷರಶಃ ದಾಸ್ಯದಿಂದ ಕೂಡಿರುತ್ತದೆ. ಇದು ಅವರನ್ನು ಬೆನ್ನೆಲುಬಿಲ್ಲದ ಸಸ್ತನಿಗಳಂತೆ ಕಾಣುವಂತೆ ಮಾಡುತ್ತದೆ.

ಗುಲಾಮಗಿರಿಯಂತಹ ಪ್ರವೃತ್ತಿ ಇಂದಿಗೂ ನ್ಯಾಯಾಂಗದಲ್ಲಿ ಮುಂದುವರಿದಿದೆ!

ಉಚ್ಚ ನ್ಯಾಯಾಲಯದ ನ್ಯಾಯಾಧೀಶರಿಗೆ ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿ ವೈಯಕ್ತಿಕವಾಗಿ ಕಾಳಜಿ ವಹಿಸುವುದು, ಅವರಿಗೆ ಚಹಾ-ತಿಂಡಿ ನೀಡುವುದು ಮುಂತಾದ ಸಂಗತಿಗಳು ಸಾಮಾನ್ಯ. ಈ ಗುಲಾಮಗಿರಿಯಂತಹ ಪ್ರವೃತ್ತಿ ಇಂದಿಗೂ ನ್ಯಾಯಾಂಗದಲ್ಲಿ ಮುಂದುವರಿದಿದೆ.

ಭಯದಡಿಯಲ್ಲಿ ಕೆಲಸ ಮಾಡುವ ನ್ಯಾಯಾಂಗ ನಿರ್ಭೀತಿಯಿಂದ ‘ನ್ಯಾಯ’ ನೀಡಲು ಸಾಧ್ಯವಿಲ್ಲ!

ಜಿಲ್ಲಾ ನ್ಯಾಯಾಧೀಶರಿಗೂ ಕುಟುಂಬ, ಮಕ್ಕಳ ಶಿಕ್ಷಣ, ಪೋಷಕರ ಕಾಯಿಲೆ ಮತ್ತು ಭವಿಷ್ಯದ ಚಿಂತೆ ಇರುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಹಠಾತ್ತಾಗಿ ಉದ್ಯೋಗ ಕಳೆದುಕೊಂಡರೆ ಅವರು ಬೀದಿಗೆ ಬೀಳುತ್ತಾರೆ ಮತ್ತು ಸಮಾಜ ಅವರ ಸಮಗ್ರತೆಯನ್ನು ಅನುಮಾನಿಸುತ್ತದೆ. ಈ ನಿರಂತರ ಭಯದ ಅಡಿಯಲ್ಲಿ ಕೆಲಸ ಮಾಡುವ ನ್ಯಾಯಾಂಗವು ನಿರ್ಭೀತಿಯಿಂದ ‘ನ್ಯಾಯ’ ನೀಡಲು ಸಾಧ್ಯವಿಲ್ಲ, ಬದಲಿಗೆ ‘ನ್ಯಾಯಕ್ಕೆ ತಿಲಾಂಜಲಿ   ನೀಡುತ್ತದೆ’.

ಭಯದಿಂದಾಗಿ ಜಾಮೀನು ನಿರಾಕರಿಸಲಾಗುತ್ತದೆ ಅಥವಾ ಸಾಕ್ಷ್ಯಾಧಾರಗಳಿಲ್ಲದೆ ಶಿಕ್ಷೆ ವಿಧಿಸಲಾಗುತ್ತದೆ!

ಇದೇ ಭಯದಿಂದಾಗಿ ಅನೇಕ ಬಾರಿ ಸೂಕ್ತ ಪ್ರಕರಣಗಳಲ್ಲಿ ಜಾಮೀನು ನಿರಾಕರಿಸಲಾಗುತ್ತದೆ ಅಥವಾ ಸಾಕ್ಷ್ಯಾಧಾರಗಳಿಲ್ಲದೆ ಶಿಕ್ಷೆ ವಿಧಿಸಲಾಗುತ್ತದೆ. ತಮ್ಮ ಉದ್ಯೋಗವನ್ನು ಉಳಿಸಿಕೊಳ್ಳಲು ಮಾತ್ರ ಇದನ್ನು ಮಾಡಲಾಗುತ್ತದೆ ಮತ್ತು ಈ ಮಾನಸಿಕತೆಯ ಬಲಿಪಶುಗಳಾಗಿದ್ದು ಅರ್ಜಿದಾರರು ಆಗುತ್ತಾರೆ.