|

ನವದೆಹಲಿ – ನರೇಂದ್ರ ಮೋದಿ ಅವರು ಭಾರತದ ಎರಡನೇ ಅತಿ ಹೆಚ್ಚು ಕಾಲ ಪ್ರಧಾನಿಯಾಗಿ ಸೇವೆ ಸಲ್ಲಿಸಿದವರಾಗಿದ್ದಾರೆ. ಅವರು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಲಾಲ್ ಬಹದ್ದೂರ್ ಶಾಸ್ತ್ರಿಯವರ ಸಂದೇಹಾಸ್ಪದ ಸಾವಿನ ನಂತರ ಇಂದಿರಾ ಗಾಂಧಿಯವರು ಜನವರಿ ೨೪, ೧೯೬೬ ರಿಂದ ಮಾರ್ಚ್ ೨೪, ೧೯೭೭ ರವರೆಗೆ ಒಟ್ಟು ೪,೦೭೭ ದಿನಗಳ ಕಾಲ (೧೧ ವರ್ಷ, ೨ ತಿಂಗಳು) ಪ್ರಧಾನಿಯಾಗಿದ್ದರು. ಮೇ ೨೬, ೨೦೧೪ ರಂದು ಪ್ರಧಾನಿ ಮೋದಿ ಅಧಿಕಾರ ವಹಿಸಿಕೊಂಡ ನಂತರ, ಜುಲೈ ೨೫, ೨೦೨೪ ರಂದು ಅವರ ೪,೦೭೮ನೇ ದಿನವಾಗಿತ್ತು.
ಅತಿ ಹೆಚ್ಚು ಕಾಲ ಸತತವಾಗಿ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ದಾಖಲೆಯು ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಹೆಸರಿನಲ್ಲಿದೆ. ಅವರು ಆಗಸ್ಟ್ ೧೫, ೧೯೪೭ ರಿಂದ ಮೇ ೨೭, ೧೯೬೪ ರವರೆಗೆ ಅಂದರೆ, ಒಟ್ಟು ೧೬ ವರ್ಷ, ೧೦ ತಿಂಗಳುಗಳ ಕಾಲ (೬,೧೨೬ ದಿನಗಳು) ಪ್ರಧಾನಿಯಾಗಿದ್ದರು. ಪ್ರಧಾನಿ ಮೋದಿ ಅವರು ಈಗ ನೆಹರು ಅವರ ದಾಖಲೆಗಿಂತ ೨,೦೪೮ ದಿನಗಳು, ಅಂದರೆ, ಇನ್ನೂ ಕನಿಷ್ಠ ಐದೂವರೆ ವರ್ಷಗಳಷ್ಟು ಹಿಂದಿದ್ದಾರೆ. ಅವರು ಮಾರ್ಚ್ ೫, ೨೦೩೧ ರವರೆಗೆ ಪ್ರಧಾನಿ ಹುದ್ದೆಯಲ್ಲಿದ್ದರೆ, ದಿನಗಳ ಸಂಖ್ಯೆಯಲ್ಲಿ ನೆಹರು ಅವರನ್ನು ಹಿಂದಿಕ್ಕುತ್ತಾರೆ.
🇮🇳 Narendra Modi creates history!
🕰️ Becomes the second longest-serving Indian PM in uninterrupted tenure, surpassing Indira Gandhi!
📢 If PM Modi rises to fulfill Hindu aspirations by constitutionally declaring India a Hindu Rashtra, his legacy will be unmatched!
VC:… pic.twitter.com/gzZjo4vhVE
— Sanatan Prabhat (@SanatanPrabhat) July 25, 2025
ಸತತ ೩ ಲೋಕಸಭಾ ಚುನಾವಣೆಗಳನ್ನು ಗೆದ್ದು ಪ್ರಧಾನಿಯಾದ ನೆಹರು ನಂತರದ ದಾಖಲೆ ಬರೆದ ಮೋದಿ !

ಹೀಗಿದ್ದರೂ, ಸತತ ೩ ಲೋಕಸಭಾ ಚುನಾವಣೆಗಳನ್ನು ಗೆಲ್ಲುವ ವಿಷಯದಲ್ಲಿ ಮೋದಿ ಅವರು ಈಗಾಗಲೇ ನೆಹರು ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಒಂದು ವೇಳೆ ಮೋದಿ ಅವರು ೨೦೨೯ ರ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಪ್ರಧಾನಿಯಾದರೆ, ಸತತವಾಗಿ ಪ್ರಧಾನಿಯಾಗಿರುವ ದಾಖಲೆಯನ್ನು ಮುರಿಯುತ್ತಾರೆ.
ಅತಿ ಹೆಚ್ಚು ಕಾಲ ಚುನಾಯಿತ ನಾಯಕರು ಮೋದಿ!
ಮೋದಿ ಅವರು ೨೦೦೧ ರಿಂದ ೨೦೧೪ ರವರೆಗೆ ೧೩ ವರ್ಷಗಳ ಕಾಲ ಸತತವಾಗಿ ೪ ಬಾರಿ ಗುಜರಾತ್ ಮುಖ್ಯಮಂತ್ರಿಯಾಗಿದ್ದರು. ನಂತರ, ಮೇ ೨೬, ೨೦೧೪ ರಿಂದ ದೇಶದ ಪ್ರಧಾನ ಮಂತ್ರಿಯಾಗಿದ್ದಾರೆ. ಹೀಗಾಗಿ, ಅವರು ರಾಜ್ಯ ಮತ್ತು ಕೇಂದ್ರದಲ್ಲಿ ೨೪ ವರ್ಷಗಳಿಗೂ ಹೆಚ್ಚು ಕಾಲ ಚುನಾಯಿತ ಸರಕಾರದ ಮುಖ್ಯಸ್ಥರಾಗಿ ಜವಾಬ್ದಾರಿ ನಿರ್ವಹಿಸಿದ ಮೊದಲ ಭಾರತೀಯ ನಾಯಕರಾಗಿದ್ದಾರೆ. ಅಲ್ಲದೆ, ಸ್ವಾತಂತ್ರ್ಯಾನಂತರ ಜನಿಸಿದ ಮೊದಲ ಪ್ರಧಾನಿ ಮತ್ತು ೨ ಅವಧಿಯನ್ನು ಪೂರ್ಣಗೊಳಿಸಿದ ಕಾಂಗ್ರೆಸ್ಸೇತರ ಪ್ರಧಾನಿ ಇವರಾಗಿದ್ದಾರೆ.
ಸಂಪಾದಕೀಯ ನಿಲುವುಪ್ರಧಾನಿ ಮೋದಿ ಅವರು ಹಿಂದೂಗಳ ಆಶಯ ಮತ್ತು ಆಕಾಂಕ್ಷೆಗಳನ್ನು ಗೌರವಿಸಿ, ತಮ್ಮ ಅಧಿಕಾರಾವಧಿಯಲ್ಲಿ ಈ ದೇಶವನ್ನು ಸಾಂವಿಧಾನಿಕವಾಗಿ ಹಿಂದೂ ರಾಷ್ಟ್ರವೆಂದು ಘೋಷಿಸಿದರೆ, ಹಿಂದೂಗಳು ಅದನ್ನು ಇನ್ನಷ್ಟು ಇಷ್ಟಪಡುತ್ತಾರೆ! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!