
ನವದೆಹಲಿ – ಆರು ತಿಂಗಳಿಂದ ಪಡಿತರ ಅಂಗಡಿಗಳಿಂದ ಪಡಿತರ ತೆಗೆದುಕೊಳ್ಳದ ನಾಗರಿಕರ ಪಡಿತರ ಚೀಟಿ ರದ್ದಾಗಲಿದೆ. ಇದರ ನಂತರ ಮೂರು ತಿಂಗಳೊಳಗೆ ಮನೆ-ಮನೆ ಪರಿಶೀಲನೆ ಮತ್ತು ಇ-ಕೆವೈಸಿ ಮೂಲಕ ಮತ್ತೆ ಅರ್ಹತೆಯನ್ನು ನಿರ್ಧರಿಸಲಾಗುವುದು ಎಂದು ಕೇಂದ್ರ ಸರಕಾರ ಆದೇಶಿಸಿದೆ. ಸರಕಾರವು ‘ಗುರಿಯಿಟ್ಟ ಸಾರ್ವಜನಿಕ ವಿತರಣಾ ವ್ಯವಸ್ಥೆ (ನಿಯಂತ್ರಣ) ತಿದ್ದುಪಡಿ ಆದೇಶ, ೨೦೨೫’ ಅಡಿಯಲ್ಲಿ ಈ ಆದೇಶವನ್ನು ಅಧಿಸೂಚಿಸಿದೆ. ‘ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ’ ಅಡಿಯಲ್ಲಿ ಉಚಿತ ಪಡಿತರ ತೆಗೆದುಕೊಳ್ಳದವರೂ ಇದರ ವ್ಯಾಪ್ತಿಗೆ ಬರುತ್ತಾರೆ.
ದೇಶದಲ್ಲಿ ೨೩ ಕೋಟಿ ಸಕ್ರಿಯ ಪಡಿತರ ಚೀಟಿಗಳಿವೆ. ಈ ಪ್ರಕ್ರಿಯೆಯಲ್ಲಿ ಎಷ್ಟು ಕಾರ್ಡ್‌ಗಳನ್ನು ರದ್ದುಗೊಳಿಸಲಾಗುವುದು ಎಂಬುದು ವಿಚಾರಣೆಯ ನಂತರ ಸ್ಪಷ್ಟವಾಗಲಿದೆ. ೨೫ ಲಕ್ಷಕ್ಕೂ ಹೆಚ್ಚು ಕಾರ್ಡ್‌ಗಳು ನಕಲಿ ಎಂದು ಅಂದಾಜಿಸಲಾಗಿದೆ. ಈ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಕೇಂದ್ರವು ರಾಜ್ಯಗಳಿಗೆ ತಿಳಿಸಿದೆ. ಅರ್ಹರಲ್ಲದ ಜನರನ್ನು ಹೊರಗಿಡುವುದು ಈ ಕ್ರಮದ ಉದ್ದೇಶವಾಗಿದೆ.
ಪಡಿತರ ಚೀಟಿಯ ಅರ್ಹತಾ ಪಟ್ಟಿಯನ್ನು ಪ್ರತಿ ಐದು ವರ್ಷಗಳಿಗೊಮ್ಮೆ ಪರಿಶೀಲಿಸಲಾಗುತ್ತದೆ
ಗ್ರಾಹಕ ವ್ಯವಹಾರಗಳು ಮತ್ತು ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯದ ಅಧಿಕಾರಿಗಳ ಪ್ರಕಾರ, ಪಡಿತರ ಚೀಟಿಯ ಅರ್ಹತಾ ಪಟ್ಟಿಯನ್ನು ಪ್ರತಿ ಐದು ವರ್ಷಗಳಿಗೊಮ್ಮೆ ಪರಿಶೀಲಿಸಲಾಗುತ್ತದೆ. ಕಾರ್ಡ್‌ನಲ್ಲಿ ನೋಂದಾಯಿಸಲಾದ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗಾಗಿ ಆಧಾರ್ ಸಂಖ್ಯೆಯನ್ನು ಬಳಸಲಾಗುತ್ತದೆ.
ಐದು ವರ್ಷಗಳು ಪೂರ್ಣಗೊಂಡ ನಂತರ ಕೆವೈಸಿ (ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ) ಕಡ್ಡಾಯವಾಗಿರುತ್ತದೆ. ಎರಡು ಬಾರಿ ನೋಂದಣಿಯಾದವರ ಕಾರ್ಡ್‌ಗಳನ್ನು ಮೂರು ತಿಂಗಳ ಕಾಲ ಅಮಾನತುಗೊಳಿಸಲಾಗುವುದು ಮತ್ತು ನಂತರ ಕೆವೈಸಿ ಮಾಡಲಾಗುವುದು. ಹೊಸ ಪಡಿತರ ಚೀಟಿಗಳನ್ನು ‘ಮೊದಲು ಬಂದವರಿಗೆ ಮೊದಲು ಆದ್ಯತೆ’ ಎಂಬ ತತ್ವದ ಮೇಲೆ ಮಾಡಲಾಗುತ್ತದೆ. ಕಾಯುವ ಪಟ್ಟಿಯನ್ನು ರಾಜ್ಯದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!