
ಮುಂಬಯಿ – 2006 ರ ಮುಂಬಯಿ ಸರಣಿ ಬಾಂಬ್ ಸ್ಫೋಟಗಳಲ್ಲಿ 12 ಆರೋಪಿಗಳನ್ನು ಖುಲಾಸೆ ಮಾಡಿದ ಮುಂಬಯಿ ಉಚ್ಚ ನ್ಯಾಯಾಲಯದ ಬಹುಚರ್ಚಿತ ತೀರ್ಪಿಗೆ ಸರ್ವೋಚ್ಚ ನ್ಯಾಯಾಲಯ ತಡೆ ನೀಡಿದೆ. ಮುಂಬಯಿ ಉಚ್ಚ ನ್ಯಾಯಾಲಯದ ತೀರ್ಪನ್ನು ರಾಜ್ಯ ಸರಕಾರವು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿತ್ತು. ಅದರ ವಿಚಾರಣೆ ಜುಲೈ 24 ರಂದು ನಡೆದು, ಸರ್ವೋಚ್ಚ ನ್ಯಾಯಾಲಯ ಈ ನಿರ್ಧಾರವನ್ನು ನೀಡಿದೆ.
ಈ ನಿರ್ಧಾರವನ್ನು ನೀಡುವಾಗ, ನಿರಪರಾಧಿಗಳೆಂದು ಕಾರಾಗೃಹದಿಂದ ಮುಕ್ತಗೊಳಿಸಲಾದ ಆರೋಪಿಗಳು ಮತ್ತೆ ಕಾರಾಗೃಹಕ್ಕೆ ಹೋಗುವ ಅಗತ್ಯವಿಲ್ಲ ಎಂದು ನ್ಯಾಯಾಲಯ ತಿಳಿಸಿದೆ. ನ್ಯಾಯಮೂರ್ತಿ ಎಂ.ಎಂ. ಸುಂದರೇಶ್ ಮತ್ತು ನ್ಯಾಯಮೂರ್ತಿ ಎನ್.ಕೆ. ಸಿಂಗ್ ಅವರ ವಿಭಾಗೀಯ ಪೀಠದ ಮುಂದೆ ಈ ವಿಚಾರಣೆ ನಡೆಯಿತು. ಮಹಾಧಿವಕ್ತ ತುಷಾರ್ ಮೆಹ್ತಾ ಅವರು ಮಹಾರಾಷ್ಟ್ರ ಸರಕಾರದ ಪರ ವಾದ ಮಂಡಿಸುವಾಗ, “ದೋಷಿಗಳನ್ನು ನಿರ್ದೋಷಿಗಳೆಂದು ಘೋಷಿಸಿ ಕಾರಾಗೃಹದಿಂದ ಹೊರಗೆ ಬಿಟ್ಟಿದ್ದರೂ, ಅವರನ್ನು ಮತ್ತೆ ಕಾರಾಗೃಹಕ್ಕೆ ತರುವ ಪ್ರಶ್ನೆ ಇಲ್ಲ; ಆದರೆ ಈ ನಿರ್ಧಾರವು ಇತರ ‘ಮಕೋಕಾ’ ಪ್ರಕರಣಗಳ ಮೇಲೆ ಪರಿಣಾಮ ಬೀರಬಹುದು. ಈ ನಿರ್ಧಾರವನ್ನು ಇತರ ಪ್ರಕರಣಗಳಲ್ಲಿ ಬಳಸಲಾಗುವುದು ಮತ್ತು ಇದು ಪೊಲೀಸ್, ತನಿಖಾ ಮತ್ತು ಇತರ ಏಜೆನ್ಸಿಗಳಿಗೆ ತೊಂದರೆಯುಂಟು ಮಾಡಬಹುದು” ಎಂದು ತಿಳಿಸಿದರು.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!