|

ಬ್ಯಾಂಕಾಕ್ (ಥಾಯ್ಲೆಂಡ್) – ಥಾಯ್ಲೆಂಡ್ ಮತ್ತು ಕಾಂಬೋಡಿಯಾ ನಡುವಿನ ಸೇನೆಗಳ ಮಧ್ಯೆ ಗಡಿಯಲ್ಲಿರುವ ಹಳೆಯ ದೇವಾಲಯದ ಭೂಮಿಗಾಗಿ ನಡೆದ ಗುಂಡಿನ ಚಕಮಕಿಯಲ್ಲಿ ಥಾಯ್ಲೆಂಡ್‌ನ ೧೧ ನಾಗರಿಕರು ಮೃತಪಟ್ಟಿದ್ದು, ೧೪ ಮಂದಿ ಗಾಯಗೊಂಡಿದ್ದಾರೆ. ಇದರ ನಂತರ, ಥಾಯ್ಲೆಂಡ್ ಕಾಂಬೋಡಿಯಾದ ಸೇನಾ ನೆಲೆಗಳ ಮೇಲೆ ಯುದ್ಧ ವಿಮಾನಗಳಿಂದ ವೈಮಾನಿಕ ದಾಳಿ ನಡೆಸಿತು. ಥಾಯ್ಲೆಂಡ್‌ನ ಸುರಿನ್ ಪ್ರಾಂತ್ಯದ ಬಳಿ ಮತ್ತು ಕಾಂಬೋಡಿಯಾದ ಪ್ರಾಚೀನ ‘ಪ್ರಸಾತ ತಾ ಮುಯೆನ್ ಥೋಮ್ ದೇವಾಲಯ’ದ ಬಳಿ ಈ ಗುಂಡಿನ ಚಕಮಕಿ ನಡೆಯಿತು. ಇದು ಭಗವಾನ್ ಶಿವನ ದೇವಾಲಯವಾಗಿದೆ.
ಪರಸ್ಪರ ಆರೋಪ-ಪ್ರತ್ಯಾರೋಪ
ಕಾಂಬೋಡಿಯಾದ ವಿದೇಶಾಂಗ ಸಚಿವಾಲಯವು, ಥಾಯ್ಲೆಂಡ್‌ನ ಸೈನಿಕರು ಮೊದಲು ಗುಂಡು ಹಾರಿಸಿದ್ದಾರೆ ಎಂದು ಆರೋಪಿಸಿದೆ, ಆದರೆ ಥಾಯ್ಲೆಂಡ್‌ನ ಸೇನೆಯು, ಕಾಂಬೋಡಿಯಾ ಸೈನ್ಯವನ್ನು ಕಳುಹಿಸುವ ಮೊದಲು ಡ್ರೋನ್ ಅನ್ನು ನಿಯೋಜಿಸಿತ್ತು, ನಂತರ ಅವರು ಫಿರಂಗಿ ಮತ್ತು ದೀರ್ಘ-ಶ್ರೇಣಿಯ ‘ಬಿಎಂ-೨೧’ ರಾಕೆಟ್‌ಗಳಿಂದ ದಾಳಿ ಮಾಡಿದರು ಎಂದು ಹೇಳಿದೆ. ಮೇ ೨೮ ರಂದು ಗಡಿಯಲ್ಲಿ ಎರಡೂ ದೇಶಗಳ ಸೈನ್ಯಗಳ ನಡುವೆ ಘರ್ಷಣೆ ನಡೆದಿತ್ತು, ಇದರಲ್ಲಿ ಕಾಂಬೋಡಿಯಾದ ಒಬ್ಬ ಸೈನಿಕ ಕೊಲ್ಲಲ್ಪಟ್ಟಿದ್ದನು. ಅಂದಿನಿಂದ ಎರಡೂ ದೇಶಗಳ ನಡುವೆ ವಿವಾದ ಮುಂದುವರಿದಿದೆ.
೧೧೮ ವರ್ಷಗಳಿಂದ ದೇವಾಲಯದ ಸಮೀಪದ ಗಡಿ ವಿವಾದ!
೧೯೦೭ ರಲ್ಲಿ ಎರಡೂ ದೇಶಗಳ ನಡುವೆ ೮೧೭ ಕಿ.ಮೀ. ಉದ್ದದ ಗಡಿಯನ್ನು ಗುರುತಿಸಲಾಯಿತು. ಆಗ ಕಾಂಬೋಡಿಯಾ ಫ್ರಾನ್ಸ್‌ನ ನಿಯಂತ್ರಣದಲ್ಲಿತ್ತು. ನಕ್ಷೆಯಲ್ಲಿ ಪ್ರೇಹ್ ವಿಹಾರ್ ಎಂಬ ಐತಿಹಾಸಿಕ ದೇವಾಲಯವನ್ನು ಕಾಂಬೋಡಿಯಾದ ಭಾಗವೆಂದು ತೋರಿಸಲಾಗಿತ್ತು, ಇದರಿಂದ ಥಾಯ್ಲೆಂಡ್ ಯಾವಾಗಲೂ ಇದನ್ನು ವಿರೋಧಿಸಿತು. ಇದರ ಮೇಲೆ ಎರಡೂ ದೇಶಗಳ ನಡುವೆ ವಿವಾದ ಉಂಟಾಯಿತು. ೧೯೫೯ ರಲ್ಲಿ ಕಾಂಬೋಡಿಯಾ ಈ ಪ್ರಕರಣವನ್ನು ಅಂತರರಾಷ್ಟ್ರೀಯ ನ್ಯಾಯಾಲಯಕ್ಕೆ ಕೊಂಡೊಯ್ದಿತು ಮತ್ತು ೧೯೬೨ ರಲ್ಲಿ ನ್ಯಾಯಾಲಯವು ದೇವಾಲಯವು ಕಾಂಬೋಡಿಯಾಕ್ಕೆ ಸೇರಿದ್ದು ಎಂದು ತೀರ್ಪು ನೀಡಿತು. ಥಾಯ್ಲೆಂಡ್ ಇದನ್ನು ಒಪ್ಪಿಕೊಂಡಿತು; ಆದರೆ ಸುತ್ತಮುತ್ತಲಿನ ಭೂಮಿಯ ಮೇಲಿನ ವಿವಾದವನ್ನು ಮುಂದುವರಿಸಿತು. ೨೦೦೮ ರಲ್ಲಿ ಕಾಂಬೋಡಿಯಾ ಈ ದೇವಾಲಯವನ್ನು ‘ಯುನೆಸ್ಕೋ’ (ಯುನೈಟೆಡ್ ನೇಷನ್ಸ್ ಎಜುಕೇಷನಲ್, ಸೈಂಟಿಫಿಕ್ ಅಂಡ್ ಕಲ್ಚರಲ್ ಆರ್ಗನೈಸೇಷನ್ – ಸಂಯುಕ್ತ ರಾಷ್ಟ್ರ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ) ನ ವಿಶ್ವ ಪರಂಪರೆಯ ತಾಣದಲ್ಲಿ ಸೇರಿಸಲು ಪ್ರಯತ್ನಿಸಿದಾಗ, ಈ ವಿವಾದ ಮತ್ತಷ್ಟು ಹೆಚ್ಚಾಯಿತು. ದೇವಾಲಯಕ್ಕೆ ಮಾನ್ಯತೆ ನೀಡಿದ ನಂತರ ಎರಡೂ ದೇಶಗಳ ಸೈನ್ಯಗಳ ನಡುವೆ ಮತ್ತೆ ಸಂಘರ್ಷ ಪ್ರಾರಂಭವಾಯಿತು ಮತ್ತು ೨೦೧೧ ರಲ್ಲಿ ಪರಿಸ್ಥಿತಿ ಎಷ್ಟು ಬಿಗಡಾಯಿಸಿತು ಎಂದರೆ ಸಾವಿರಾರು ಜನರು ತಮ್ಮ ಮನೆಗಳನ್ನು ತೊರೆಯಬೇಕಾಯಿತು. ೨೦೧೧ ರಲ್ಲಿ ಅಂತರರಾಷ್ಟ್ರೀಯ ನ್ಯಾಯಾಲಯವು ಎರಡೂ ದೇಶಗಳಿಗೆ ವಿವಾದಿತ ಪ್ರದೇಶದಿಂದ ಸೈನ್ಯವನ್ನು ಹಿಂತೆಗೆದುಕೊಳ್ಳುವಂತೆ ಆದೇಶಿಸಿತು ಮತ್ತು ೨೦೧೩ ರಲ್ಲಿ ದೇವಾಲಯ ಮತ್ತು ಅದರ ಸುತ್ತಮುತ್ತಲಿನ ಪ್ರದೇಶವು ಕಾಂಬೋಡಿಯಾಕ್ಕೆ ಸೇರಿದ್ದು ಎಂದು ಮತ್ತೊಮ್ಮೆ ಒಪ್ಪಿಕೊಂಡಿತು; ಆದರೆ ಗಡಿ ಪ್ರಶ್ನೆ ಇನ್ನೂ ಸಂಪೂರ್ಣವಾಗಿ ಬಗೆಹರಿದಿಲ್ಲ ಮತ್ತು ಅದಕ್ಕಾಗಿಯೇ ಎರಡೂ ದೇಶಗಳ ನಡುವೆ ಉದ್ವಿಗ್ನತೆ ಇನ್ನೂ ಇದೆ.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation