ಪ.ಪೂ. ಸರಸಂಘಚಾಲಕ ಡಾ. ಮೋಹನಜಿ ಭಾಗವತ್ ಅವರಿಂದ ದೆಹಲಿಯಲ್ಲಿ ಮುಸಲ್ಮಾನ ಧರ್ಮಗುರುಗಳೊಂದಿಗೆ ಸಭೆ

ನವ ದೆಹಲಿ – ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ.ಪೂ. ಸರಸಂಘಚಾಲಕ ಡಾ. ಮೋಹನಜಿ ಭಾಗವತ್ ಅವರು ಇಲ್ಲಿನ ಹರಿಯಾಣ ಭವನದಲ್ಲಿ ಮುಸಲ್ಮಾನರ ಧಾರ್ಮಿಕ ಮುಖಂಡರೊಂದಿಗೆ ಸಭೆ ನಡೆಸಿದರು. ಈ ಸಭೆಯಲ್ಲಿ ‘ಆಲ್ ಇಂಡಿಯಾ ಇಮಾಮ್ ಸಂಘಟನೆ’ಯ ಪ್ರಮುಖ ಉಮರ್ ಅಹಮದ್ ಇಲಿಯಾಸಿ ಸೇರಿದಂತೆ ಅನೇಕ ಮುಸಲ್ಮಾನ ಧರ್ಮಗುರುಗಳು ಭಾಗವಹಿಸಿದ್ದರು. ಈ ಸಭೆಯಲ್ಲಿ ಸಹಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಕೃಷ್ಣ ಗೋಪಾಲ, ರಾಮಲಾಲ್ ಮತ್ತು ಇಂದ್ರೇಶ್ ಕುಮಾರ್ ಉಪಸ್ಥಿತರಿದ್ದರು ಎಂದು ಸಂಘದ ಕಡೆಯಿಂದ ತಿಳಿಸಲಾಯಿತು. ಈ ಸಭೆಯು ಮುಸಲ್ಮಾನ ಸಮುದಾಯದೊಂದಿಗೆ ಸಂಘದ ಸಂವಾದವನ್ನು ಹೆಚ್ಚಿಸುವ ಪ್ರಯತ್ನದ ಒಂದು ಭಾಗ ಎಂದು ಹೇಳಲಾಗುತ್ತಿದೆ.