ಸುರಂಗದಿಂದ 11 ಕಿ.ಮೀ. ಅಂತರ ಕಡಿಮೆ

ನವದೆಹಲಿ – ಉತ್ತರಾಖಂಡದ ಧಾರ್ಮಿಕ ಸ್ಥಳವಾದ ಕೇದಾರನಾಥಕ್ಕೆ ಹೋಗಲು 7 ಕಿ.ಮೀ. ಉದ್ದದ ಸುರಂಗವನ್ನು ನಿರ್ಮಿಸಲು ಕೇಂದ್ರೀಯ ರಸ್ತೆ ಮತ್ತು ಸಾರಿಗೆ ಸಚಿವಾಲಯವು ಸಿದ್ಧತೆ ನಡೆಸುತ್ತಿದೆ. ಪ್ರಸ್ತುತ ಗೌರಿಕುಂಡದಿಂದ ರಾಂಬಾಡಾ-ಲಿಂಚೋಲಿ ಮಾರ್ಗವಾಗಿ ಕೇದಾರನಾಥ ಧಾಮದವರೆಗೆ ಕಾಲ್ನಡಿಗೆಯ ಮಾರ್ಗವು 16 ಕಿ.ಮೀ. ಉದ್ದವಿದೆ. ಸುರಂಗದ ನಿರ್ಮಾಣದ ನಂತರ, ಈ ಅಂತರವು 11 ಕಿ.ಮೀ. ಕಡಿಮೆಯಾಗಿ ಕೇವಲ 5 ಕಿ.ಮೀ. ಆಗಲಿದೆ. ಈ ಸುರಂಗ ಮಾರ್ಗವನ್ನು ಸಮುದ್ರ ಮಟ್ಟದಿಂದ 6,562 ಅಡಿ ಎತ್ತರದಲ್ಲಿ ನಿರ್ಮಿಸಲಾಗುವುದು. ಕಾಳಿಮಠ ಕಣಿವೆಯ ಕೊನೆಯ ಗ್ರಾಮವಾದ ಚೌಮಾಸಿಯಿಂದ ಲಿಂಚೋಲಿವರೆಗೆ ಈ ಸುರಂಗವನ್ನು ನಿರ್ಮಿಸಲಾಗುವುದು.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!