ನಿವೇ ದುಡಿದು ತಿನ್ನಿರಿ, ನೀವೂ ಸುಶಿಕ್ಷಿತರಿದ್ದೀರಿ! – ಜೀವನಾಂಶ ಕೇಳಿದ ಮಹಿಳೆಗೆ ಸುಪ್ರೀಂ ಕೋರ್ಟ್ ತರಾಟೆ

12 ಕೋಟಿ ರೂ., ಮುಂಬಯಿನಲ್ಲಿ ಫ್ಲಾಟ್ ಮತ್ತು ಐಷಾರಾಮಿ ಕಾರು !

ನವದೆಹಲಿ – “ನಿಮ್ಮ ಮದುವೆ ಆಗಿ ಕೇವಲ 18 ತಿಂಗಳು ಆಗಿದೆ ಮತ್ತು ನೀವು ಪ್ರತಿ ತಿಂಗಳಿಗೆ 1 ಕೋಟಿ ರೂಪಾಯಿ ಕೇಳುತ್ತಿದ್ದೀರಿ. ನೀವು ಅಷ್ಟು ಸುಶಿಕ್ಷಿತರಾಗಿದ್ದೀರಿ; ಆದರೆ ನೀವು ಕೆಲಸ ಏಕೆ ಮಾಡುವುದಿಲ್ಲ? ಉನ್ನತ ಶಿಕ್ಷಣ ಪಡೆದ ಮಹಿಳೆ ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವಿಲ್ಲ. ನೀವು ನಿಮಗಾಗಿ ಏನನ್ನೂ ಕೇಳಬಾರದು. ನೀವು ಸ್ವಂತಕ್ಕಾಗಿ ದುಡಿದು ತಿನ್ನಬೇಕು,” ಎಂದು ಸುಪ್ರೀಂ ಕೋರ್ಟ್ ಕಠೋರವಾಗಿ ಹೇಳಿತು. ವಿಚ್ಛೇದನ ಪ್ರಕರಣವೊಂದರ ವಿಚಾರಣೆ ನಡೆದಾಗ ಮಹಿಳೆಯು ಮುಂಬಯಿನಲ್ಲಿ ಫ್ಲಾಟ್, 12 ಕೋಟಿ ರೂಪಾಯಿ ಜೀವನಾಂಶ ಮತ್ತು ಬಿಎಂಡಬ್ಲ್ಯು ಕಾರನ್ನು ಪರಿಹಾರವಾಗಿ (ಜೀವನಾಂಶ ಎಂದು)ಕೇಳಿದ್ದಳು. ಆಗ ಕೋರ್ಟ್ ಆಕೆಯನ್ನು ಈ ರೀತಿ ತರಾಟೆಗೆ ತೆಗೆದುಕೊಂಡಿತು.

ಮುಖ್ಯ ನ್ಯಾಯಮೂರ್ತಿ ಗವಾಯಿ ಅವರು ಮಹಿಳೆಗೆ, “ನೀವು ಒಂದೋ ಫ್ಲಾಟ್‌ನಿಂದ ತೃಪ್ತರಾಗಿರಿ ಅಥವಾ 4 ಕೋಟಿ ರೂಪಾಯಿ ತೆಗೆದುಕೊಂಡು ಉತ್ತಮ ಕೆಲಸ ಹುಡುಕಿ,” ಎಂದು ಹೇಳಿದರು. ನ್ಯಾಯಾಲಯವು ಈ ಪ್ರಕರಣದ ದಾವೆಯನ್ನು ರದ್ದುಗೊಳಿಸುವಂತೆ ಆದೇಶ ನೀಡಿದೆ.