|

ಡಬ್ಲಿನ್ (ಐರ್ಲೆಂಡ್) – ಟಾಲ್ಟ ಪ್ರದೇಶದಲ್ಲಿ 40 ವರ್ಷದ ಭಾರತೀಯ ವ್ಯಕ್ತಿಯ ಮೇಲೆ ಮಹಿಳೆ ಸೇರಿದಂತೆ 14 ಜನಾಂಗೀಯವಾದಿಗಳು ದಾಳಿ ಮಾಡಿದ್ದಾರೆ. ಈ ದಾಳಿಯಿಂದ ವ್ಯಕ್ತಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರು ಘಟನೆಯ ತನಿಖೆ ಆರಂಭಿಸಿದ್ದಾರೆ. ಭಾರತದ ಐರ್ಲೆಂಡ್ ರಾಯಭಾರಿ ಅಖಿಲೇಶ್ ಮಿಶ್ರಾ ಅವರು ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿ, “ಒಂದು ‘ತಥಾಕಥಿತ’ ದಾಳಿಯಿಂದ ಇಷ್ಟು ಭೀಕರ ಗಾಯಗಳು ಮತ್ತು ರಕ್ತಸ್ರಾವ ಹೇಗೆ ಸಂಭವಿಸುತ್ತದೆ? ಐರಿಶ್ ರಾಷ್ಟ್ರೀಯ ಮಾಧ್ಯಮಗಳ ಅಸಂವೇದನಾಶೀಲತೆ ಮತ್ತು ಅಸ್ಪಷ್ಟತೆಯನ್ನು ನೋಡಿ ನಾನು ದಂಗಾಗಿದ್ದೇನೆ” ಎಂದು ಪ್ರತಿಕ್ರಿಯಿಸಿದ್ದಾರೆ. ಮಿಶ್ರಾ ಅವರು ಐರಿಶ್ ಸುದ್ದಿವಾಹಿನಿ ‘ಆರ್ಟಿ ನ್ಯೂಸ್’ ಅನ್ನು ಸಹ ಟೀಕಿಸಿದ್ದಾರೆ, ಏಕೆಂದರೆ ಈ ವಾಹಿನಿಯು ಇಷ್ಟು ದೊಡ್ಡ ದಾಳಿಯನ್ನು ಕೇವಲ ‘ಸಣ್ಣ ಹೊಡೆತ’ ಎಂದು ಲಘುವಾಗಿ ವರ್ಣಿಸಿದೆ.

ಪ್ರತ್ಯಕ್ಷದರ್ಶಿ ಮಹಿಳೆಯೊಬ್ಬರು ನೀಡಿದ ಮಾಹಿತಿ ಪ್ರಕಾರ, 13 ಮಕ್ಕಳು ಮತ್ತು ಒಬ್ಬ ಮಹಿಳೆ ಆ ವ್ಯಕ್ತಿಯನ್ನು ಸುತ್ತುವರಿದು ಅವರ ಬಟ್ಟೆಗಳನ್ನು ಹರಿದು ಹಾಕಿದರು ಹಾಗೂ ಅವರನ್ನು ಥಳಿಸಿದರು. ಅವರ ಬ್ಯಾಂಕ್ ಕಾರ್ಡ್, ಮೊಬೈಲ್ ಫೋನ್ ಇತ್ಯಾದಿಗಳನ್ನು ಸಹ ದೋಚಲಾಗಿದೆ. ಕಳೆದ 4 ದಿನಗಳಲ್ಲಿ 4 ಭಾರತೀಯರ ಮೇಲೆ ಚಾಕುವಿನಿಂದ ದಾಳಿ ನಡೆದಿದೆ ಎಂದು ಎಷ್ಟು ಜನರಿಗೆ ತಿಳಿದಿದೆ?
😡 Indian Racially Profiled & Attacked in Ireland! 🇮🇪
🇮🇳 Indian Ambassador strongly condemns the incident
👎 Irish media slammed for its insensitive silence
🛑 These recurring attacks expose the deep-rooted racist mindset still present in many European nations!#Racism… pic.twitter.com/Twtqolm2Yp
— Sanatan Prabhat (@SanatanPrabhat) July 23, 2025
ಇಲ್ಲಿಗೆ ಬಂದಿರುವ ಭಾರತೀಯರು ಅಕ್ರಮವಾಗಿ ಬಂದಿಲ್ಲ ! – ನಗರಸೇವಕ ಬೇಬಿ ಪೆರೆಪ್ಪಾಡನ್
ಟಲಾಟ ಸೌತ್ ನ ನಗರಸೇವಕ ಶ್ರೀ. ಬೇಬಿ ಪೆರೆಪ್ಪಾಡನ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಪೀಡಿತ ವ್ಯಕ್ತಿಯನ್ನು ಭೇಟಿಯಾದರು. ಅವರು ಮಾತನಾಡುತ್ತಾ, “ಪೀಡಿತ ವ್ಯಕ್ತಿ ಯಾರೊಂದಿಗೂ ಮಾತನಾಡುವ ಮಾನಸಿಕ ಸ್ಥಿತಿಯಲ್ಲಿಲ್ಲ. ಭಾರತೀಯರು ಇಲ್ಲಿ ‘ವರ್ಕ್ ಪರ್ಮಿಟ್’ ಮೇಲೆ (ಕೆಲಸ ಮಾಡಲು ಅನುಮತಿ ಪಡೆದು) ಬಂದಿದ್ದಾರೆ, ಅವರು ಅಕ್ರಮವಾಗಿ ಬಂದಿಲ್ಲ ಎಂಬುದನ್ನು ಜನರು ಅರ್ಥಮಾಡಿಕೊಳ್ಳಬೇಕು” ಎಂದು ಹೇಳಿದರು.
ಇದು ನಾಚಿಕೆಗೇಡಿನ ಘಟನೆ! – ನ್ಯಾಯ ಸಚಿವ ಜಿಮ್ ಓ’ಕ್ಯಾಲಘನ್
ಐರ್ಲೆಂಡ್ ನ ನ್ಯಾಯ ಸಚಿವ ಜಿಮ್ ಓ’ಕ್ಯಾಲಘನ್ ಅವರು ಈ ಘಟನೆಯನ್ನು ನಾಚಿಕೆಗೇಡಿನ ಸಂಗತಿ ಎಂದು ಕರೆದಿದ್ದಾರೆ. “ಅಪರಾಧಗಳಿಗೆ ವಲಸಿಗರು ಕಾರಣ” ಎಂಬುದು ಸುಳ್ಳು, ಏಕೆಂದರೆ ಜೈಲುಗಳಲ್ಲಿರುವ ವಲಸಿಗ ಅಪರಾಧಿಗಳ ಪ್ರಮಾಣ ತುಲನಾತ್ಮಕವಾಗಿ ಬಹಳ ಕಡಿಮೆ ಇದೆ ಎಂದು ಅವರು ಹೇಳಿದರು.
ದಾಳಿ ಜನಾಂಗೀಯ ಮತ್ತು ಹಿಂಸಾತ್ಮಕ!
ಸಿನ್ ಫೇನ್ ಪಕ್ಷದ ನಾಯಕರು ಈ ದಾಳಿಯನ್ನು ‘ಜನಾಂಗೀಯ ಮತ್ತು ಹಿಂಸಾತ್ಮಕ’ ಎಂದು ಘೋಷಿಸಿದ್ದು, ಇದು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ, ಇದರಿಂದ ವಲಸಿಗರು ಹಾಗೂ ಸ್ಥಳೀಯರ ನಡುವೆ ಭಯದ ವಾತಾವರಣ ನಿರ್ಮಾಣವಾಗುತ್ತಿದೆ ಎಂದು ಹೇಳಿದರು.
ಸಂಪಾದಕೀಯ ನಿಲುವುಯುರೋಪಿಯನ್ ರಾಷ್ಟ್ರಗಳಲ್ಲಿ ಜನರ ಜನಾಂಗೀಯ ಮನಃಸ್ಥಿತಿ ಇನ್ನೂ ಬದಲಾಗಿಲ್ಲ ಎಂಬುದನ್ನು ಇಂತಹ ಘಟನೆಗಳು ಯಾವಾಗಲೂ ತೋರಿಸುತ್ತವೆ. |
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara