ಮಹಮ್ಮದ್ ಯೂನಸ್ ಗೆ ಛೀಮಾರಿ : ಸರಕಾರದ ಬಳಿ ಸಾಕಷ್ಟು ಹಣವಿಲ್ಲವೇ? ಭಿಕ್ಷೆ ಏಕೆ ಬೇಡಬೇಕಾಗುತ್ತಿದೆ?- Bangladesh Plane Crash Protest

ಬಾಂಗ್ಲಾದೇಶದ ಪ್ರಮುಖ ಮಹಮ್ಮದ್ ಯೂನಸ್ ಅವರು ವಿಮಾನ ಅಪಘಾತದ ಸಂತ್ರಸ್ತರಿಗೆ ಸಹಾಯ ಮಾಡುವಂತೆ ಕರೆ ನೀಡಿದಾಗ ಜನರಿಂದ ತರಾಟೆ

ಢಾಕಾ (ಬಾಂಗ್ಲಾದೇಶ) – ಇಲ್ಲಿ ಸಂಭವಿಸಿದ ವಿಮಾನ ದುರಂತದ ನಂತರ, ಮಧ್ಯಂತರ ಸರಕಾರದ ಮುಖ್ಯ ಸಲಹೆಗಾರ ಮಹಮ್ಮದ್ ಯೂನಸ್ ಅವರು ಪರಿಹಾರ ನಿಧಿಗಾಗಿ ಕರೆ ನೀಡಿದಾಗ ಟೀಕೆಗೆ ಗುರಿಯಾದರು. ಇದರಿಂದ ಅವರು ತಮ್ಮ ಕರೆಯನ್ನು ಹಿಂಪಡೆದರು. ಪ್ರೊ. ಯೂನಸ್ ಅವರು ಫೇಸ್‌ ಬುಕ್‌ ನಲ್ಲಿ ಪೋಸ್ಟ್ ಒಂದನ್ನು ಪ್ರಸಾರ ಮಾಡಿ, ದೇಶವಾಸಿಗಳಿಗೆ ಹಣವನ್ನು ದಾನ ಮಾಡುವಂತೆ ಕರೆ ನೀಡಿದ್ದರು. ಈ ಹಣದಿಂದ ವಿಮಾನ ಅಪಘಾತದಲ್ಲಿ ಮೃತಪಟ್ಟ ಮತ್ತು ಗಾಯಗೊಂಡವರ ಕುಟುಂಬಗಳಿಗೆ ಸಹಾಯ ಮಾಡಲಾಗುವುದು ಎಂದು ಹೇಳಿದ್ದರು. ಇದಕ್ಕೆ ಅನೇಕ ಜನರು ಯೂನಸ್ ಸರಕಾರದ ವಿರುದ್ಧ ಟೀಕೆ ಮಾಡಿದರು. ಅಮೀನ್ ಸೋನಿ ಎಂಬ ವ್ಯಕ್ತಿಯೊಬ್ಬರು, “ಯೂನಸ್ ಸಾಹೇಬರು ಈಗ ದೇಶವನ್ನು ನಡೆಸಲು ಭಿಕ್ಷೆ ಬೇಡಬೇಕಾಗಿದೆ” ಎಂದು ಹೇಳಿದರು. “ಅಪಘಾತದ ಸಂತ್ರಸ್ತರಿಗೆ ಸಹಾಯ ಮಾಡಲು ಸರಕಾರದ ಬಳಿ ಸಾಕಷ್ಟು ಹಣವಿಲ್ಲವೇ?” ಎಂದೂ ಪ್ರಶ್ನಿಸಲಾಯಿತು. ನಂತರ ಯೂನಸ್ ಅವರು ಈ ಪೋಸ್ಟ್ ಅನ್ನು ತೆಗೆದುಹಾಕಿದರು.

ಈ ದುರಂತದಲ್ಲಿ ಇದುವರೆಗೆ 32 ಜನರು ಸಾವನ್ನಪ್ಪಿದ್ದು, 150 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಈ ವಿಮಾನ ಅಪಘಾತದ ನಂತರ, “ಸರಕಾರ ಹಳೆಯ ಚೀನೀ ವಿಮಾನಗಳನ್ನು ಏಕೆ ಬಳಸುತ್ತಿದೆ?” ಎಂಬ ಪ್ರಶ್ನೆಯನ್ನು ನಾಗರಿಕರಿಂದ ಕೇಳಲಾಗುತ್ತಿದೆ.

ಸಂಪಾದಕೀಯ ನಿಲುವು

ಬಾಂಗ್ಲಾದೇಶ ಸರಕಾರ ಮಾತ್ರವಲ್ಲ, ಅಲ್ಲಿನ ಜನರೂ ಪಾಕಿಸ್ತಾನದಂತೆ ಜಗತ್ತಿನ ಮುಂದೆ ಭಿಕ್ಷೆ ಬೇಡಬೇಕಾಗಬಹುದು ಎಂಬುದನ್ನು ಅವರು ನೆನಪಿನಲ್ಲಿಟ್ಟುಕೊಳ್ಳಬೇಕು!