ಪ.ಪೂ. ಸರಸಂಘಚಾಲಕ ಡಾ. ಮೋಹನ್ ಜೀ ಭಾಗವತ್ ರವರ ಹೇಳಿಕೆ

ನವ ದೆಹಲಿ – ಭಾರತವನ್ನು ಸರಿಯಾದ ರೀತಿಯಲ್ಲಿ ಅರ್ಥಮಾಡಿಕೊಳ್ಳುವ ಮತ್ತು ಪ್ರಸ್ತುತಪಡಿಸುವ ಅವಶ್ಯಕತೆಯಿದೆ. ಇಲ್ಲಿಯವರೆಗೆ ಕಲಿಸಲಾದ ಇತಿಹಾಸವನ್ನು ಪಾಶ್ಚಾತ್ಯ ದೃಷ್ಟಿಕೋನದಿಂದ ಬರೆಯಲಾಗಿತ್ತು. ಅವರ ಆಲೋಚನೆಗಳಲ್ಲಿ ಭಾರತದ ಅಸ್ತಿತ್ವವಿಲ್ಲ. ವಿಶ್ವ ಭೂಪಟದಲ್ಲಿ ಭಾರತವಿದ್ದರೂ, ಅದರ ಸಿದ್ಧಾಂತವನ್ನು ಎಲ್ಲಿಯೂ ಕಲಿಸಲಾಗಿಲ್ಲ. ಇಂದಿನ ಪುಸ್ತಕಗಳಲ್ಲಿ ಭಾರತವಿಲ್ಲ, ಬದಲಿಗೆ ಜಪಾನ್ ಮತ್ತು ಚೀನಾ ಕಂಡುಬರುತ್ತವೆ, ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಪ.ಪೂ. ಡಾ. ಮೋಹನ್ ಜೀ ಭಾಗವತ್ ಇಲ್ಲಿ ಒಂದು ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಹೇಳಿದರು. ಅವರು ಪ್ರಸ್ತುತ ನಡೆಯುತ್ತಿರುವ ಪಠ್ಯಕ್ರಮದ ಬದಲಾವಣೆಗಳನ್ನು ಸ್ವಾಗತಿಸಿ ಬೆಂಬಲಿಸಿದರು. ಕಳೆದ ಕೆಲವು ತಿಂಗಳುಗಳಿಂದ ಇತಿಹಾಸದ ಪಠ್ಯಪುಸ್ತಕಗಳಿಂದ ‘ಆರ್ಯ ಆಕ್ರಮಣ ಸಿದ್ಧಾಂತ’ದಂತಹ ಸುಳ್ಳು ಸಿದ್ಧಾಂತಗಳನ್ನು ತೆಗೆದುಹಾಕಲಾಗಿದ್ದು, ಭಾರತೀಯ ರಾಜರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಲಾಗಿದೆ. ಅಲ್ಲದೆ ಪುಸ್ತಕಗಳಲ್ಲಿ ಮೊಘಲರ ವೈಭವೀಕರಣವನ್ನು ತೆಗೆದುಹಾಕಿ ಅವರ ನಿಜವಾದ ನಿರ್ದಯಿ ಮುಖವನ್ನು ಹೊರತರಲಾಗಿದೆ.
ಪಾಶ್ಚಾತ್ಯ ವಿಚಾರಗಳು ವಿಫಲವಾದ್ದರಿಂದ ಭಾರತೀಯತ್ವವೇ ಜಗತ್ತಿಗೆ ಮಾರ್ಗದರ್ಶನ ನೀಡಲಿದೆ! – ಪ.ಪೂ. ಸರಸಂಘಚಾಲಕ

೧. ಜಗತ್ತಿಗೆ ಈಗ ಹೊಸ ದಿಕ್ಕಿನ ಅವಶ್ಯಕತೆಯಿದೆ. ಈ ದಿಕ್ಕು ಕೇವಲ ಭಾರತೀಯತ್ವದಿಂದ ಮಾತ್ರ ಲಭ್ಯವಾಗಲಿದೆ.
೨. ಭೌತವಾದದಿಂದಾಗಿ ಜಗತ್ತಿನಲ್ಲಿ ಎಲ್ಲೆಡೆ ಅಶಾಂತಿ ಮತ್ತು ಸಂಘರ್ಷ ಹೆಚ್ಚಾಗಿದೆ. ಕಳೆದ ೨ ಸಾವಿರ ವರ್ಷಗಳಲ್ಲಿ ಪಾಶ್ಚಾತ್ಯ ವಿಚಾರಗಳ ಆಧಾರದ ಮೇಲೆ ಮಾನವನನ್ನು ಸಂತುಷ್ಟಗೊಳಿಸುವ ಪ್ರಯತ್ನಗಳು ನಡೆದಿವೆ; ಆದರೆ ಅವೆಲ್ಲವೂ ಸಂಪೂರ್ಣವಾಗಿ ವಿಫಲವಾಗಿವೆ. ಅದಕ್ಕಾಗಿಯೇ ಜಗತ್ತು ಈಗ ಭಾರತದತ್ತ ಆಶಾಭಾವನೆಯಿಂದ ನೋಡುತ್ತಿದೆ.
೩. ವೈಜ್ಞಾನಿಕ ಪ್ರಗತಿಯಿಂದಾಗಿ ಜನರ ಜೀವನದಲ್ಲಿ ಭೌತಿಕ ಸೌಲಭ್ಯಗಳು ಹೆಚ್ಚಿದವು, ಆದರೆ ದುಃಖ ಕಡಿಮೆಯಾಗಲಿಲ್ಲ. ಬಡತನ ಮತ್ತು ಶೋಷಣೆ ಹೆಚ್ಚಾಯಿತು. ಮಾನಸಿಕ ಒತ್ತಡ ಹೆಚ್ಚುತ್ತಲೇ ಹೋಯಿತು.
೪. ಭಾರತ ಎಂದರೆ ಕೇವಲ ಭೌಗೋಳಿಕ ಗಡಿಗಳಲ್ಲ. ಭಾರತೀಯತ್ವವು ಸಂಪೂರ್ಣ ಜೀವನದ ಕಲ್ಯಾಣವನ್ನು ಪರಿಗಣಿಸುತ್ತದೆ. ಧರ್ಮಾಧಾರಿತವಾದ ಈ ದೃಷ್ಟಿ ನಾಲ್ಕು ಪುರುಷಾರ್ಥಗಳನ್ನು ಜೀವನದ ಭಾಗವೆಂದು ಪರಿಗಣಿಸುತ್ತದೆ.
೫. ಧರ್ಮಾಧಾರಿತ ಜೀವನವನ್ನು ನಡೆಸುತ್ತಿದ್ದರಿಂದಲೇ ಭಾರತ ಒಂದು ಕಾಲದಲ್ಲಿ ವಿಶ್ವದ ಅತ್ಯಂತ ಸಮೃದ್ಧ ರಾಷ್ಟ್ರವಾಗಿತ್ತು. ನಾವು ನಮ್ಮನ್ನು ಮತ್ತು ನಮ್ಮ ರಾಷ್ಟ್ರವನ್ನು ಹೊಸದಾಗಿ ಈ ದೃಷ್ಟಿಯಿಂದ ಸಿದ್ಧಪಡಿಸಬೇಕು.
೬. ಜನರು ತಮ್ಮ ದೈನಂದಿನ ಜೀವನದಲ್ಲಿ ಭಾರತೀಯ ದೃಷ್ಟಿಕೋನವನ್ನು ಅನುಸರಿಸುತ್ತಿದ್ದಾರೆಯೇ ಇಲ್ಲವೇ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!