|

ನವ ದೆಹಲಿ – ರಾಜ್ಯದ ಯುವತಿ ಎಸ್.ಬಿ. ಕೃಷ್ಣಾ ೨೦೨೦ ರಲ್ಲಿ ‘ಎಂ.ಎಸ್ಸಿ. (ಡೇಟಾ ಸೈನ್ಸ್)’ ಕೋರ್ಸ್ ಕಲಿಯಲು ಪಂಜಾಬ್ ವಿಶ್ವವಿದ್ಯಾಲಯಕ್ಕೆ ಹೋದಳು. ಅಲ್ಲಿ ಆಕೆ ಕಾಶ್ಮೀರಿ ಯುವಕರನ್ನು ಭೇಟಿಯಾದಳು. ಅವರು ಆಕೆಯ ಬುದ್ಧಿಯನ್ನು ಭ್ರಷ್ಟಗೊಳಿಸಿದರು. ನಮಾಜ್ ಮತ್ತು ಬುರ್ಖಾ ಧರಿಸುವುದರ ಪ್ರಯೋಜನಗಳನ್ನು ಆಕೆಗೆ ವಿವರಿಸಿದರು. ನಂತರ ಆಕೆಯನ್ನು ಕಾಶ್ಮೀರಕ್ಕೆ ಕರೆದೊಯ್ಯಲಾಯಿತು. ಅಲ್ಲಿ ಆಕೆ ಇಸ್ಲಾಂ ಧರ್ಮವನ್ನು ಸ್ವೀಕರಿಸಿ ಆಯೆಶಾ ಆದಳು. ಮತಾಂತರ ಮಾಡುವ ತಂಡದಲ್ಲಿ ಆಕೆ ಭಾಗಿಯಾದಳು. ವಿಶೇಷವೆಂದರೆ ಆಕೆಯ ಪೋಷಕರಿಗೆ ಇದರ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಕುಟುಂಬವು ತಮ್ಮ ಮಗಳು ಕಾಣೆಯಾಗಿರುವ ಬಗ್ಗೆ ದೆಹಲಿಯಲ್ಲಿ ದೂರು ನೀಡಿತು. ಕಾಲಾನಂತರದಲ್ಲಿ, ಕೃಷ್ಣಾ ಸ್ವಯಂಪ್ರೇರಿತವಾಗಿ ದೆಹಲಿಗೆ ಮರಳಿದಳು; ಏಕೆಂದರೆ ಆಕೆಗೆ ಕಾಶ್ಮೀರ ಇಷ್ಟವಿರಲಿಲ್ಲ ಎಂದು ವಿಚಾರಣೆಯಲ್ಲಿ ತಿಳಿದುಬಂದಿದೆ.
೧. ಆಕೆಯೊಂದಿಗೆ ಮತಾಂತರ ಮಾಡುವ ತಂಡದ ೫ ಜನರು ಹಿಂದೆ ಹಿಂದೂಗಳಾಗಿದ್ದರು ಎಂದು ತಿಳಿದುಬಂದಿದೆ. ಪೊಲೀಸರು ಅವರನ್ನು ವಿವಿಧ ರಾಜ್ಯಗಳಿಂದ ಬಂಧಿಸಿದ್ದಾರೆ.

೨. ಜೈಪುರದಿಂದ ಬಂಧಿತನಾದ ಮೊಹಮ್ಮದ್ ಅಲಿ ಹಿಂದೆ ಪಿಯೂಷ್ ಪವಾರ್ ಆಗಿದ್ದನು. ಒಬ್ಬ ಮುಸ್ಲಿಂ ಹುಡುಗಿಯ ಪ್ರೀತಿಗೆ ಬಿದ್ದು ಅವನು ಇಸ್ಲಾಂ ಧರ್ಮವನ್ನು ಸ್ವೀಕರಿಸಿದನು. ಸ್ವಲ್ಪ ಸಮಯದ ನಂತರ ಆ ಹುಡುಗಿ ಅವನನ್ನು ಬಿಟ್ಟು ಹೋದಳು. ಇದರ ನಂತರ, ಕಲೀಮ್ ಸಿದ್ದೀಕಿ ಸಹಾಯದಿಂದ ಅವನು ನಿಷೇಧಿತ ‘ಪಾಪುಲರ್ ಫ್ರಂಟ್ ಆಫ್ ಇಂಡಿಯಾ’ ಸಂಘಟನೆಯಲ್ಲಿ ಸೇರಿಕೊಂಡನು.
ಈ ಅವಧಿಯಲ್ಲಿ ಅವನು ಎಸ್.ಬಿ. ಕೃಷ್ಣಾ ಅಲಿಯಾಸ್ ಆಯೆಶಾಳನ್ನು ಭೇಟಿಯಾದನು. ಕೋಲಕಾತಾದಲ್ಲಿ ಇದ್ದಾಗ ಅವಳಿಂದ ಹಣ ಪಡೆದು ಮತಾಂತರದ ಕೆಲಸವನ್ನು ಪ್ರಾರಂಭಿಸಿದನು ಎಂದು ಪೊಲೀಸರಿಗೆ ಮಾಹಿತಿ ಲಭಿಸಿದೆ.
ಸಂಪಾದಕೀಯ ನಿಲುವು
|
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!