London ISKCON Restaurant : ಲಂಡನ್: ಇಸ್ಕಾನ್‌ನ ಸಸ್ಯಾಹಾರಿ ರೆಸ್ಟೋರೆಂಟ್‌ನಲ್ಲಿ ಉದ್ದೇಶಪೂರ್ವಕವಾಗಿ ಮಾಂಸ ಸೇವಿಸಿದ ಯೂಟ್ಯೂಬರ್ ನಿಂದ ಕ್ಷಮೆಯಾಚನೆ !

(ಯೂಟ್ಯೂಬರ್: ತಮ್ಮದೇ ಆದ ಯೂಟ್ಯೂಬ್ ಚಾನೆಲ್ ಮೂಲಕ ವೀಡಿಯೊಗಳನ್ನು ಪ್ರಸಾರ ಮಾಡುವ ವ್ಯಕ್ತಿ)

ಬ್ರಿಟಿಷ್ ‘ಯೂ ಟ್ಯೂಬರ್’ ಸೆನ್ಜೊ

ಲಂಡನ್ (ಬ್ರಿಟನ್) – ಇಲ್ಲಿನ ‘ಇಸ್ಕಾನ್’ ನಿರ್ವಹಿಸುವ ‘ಗೋವಿಂದ’ ಹೆಸರಿನ ಶುದ್ಧ ಸಸ್ಯಾಹಾರಿ ರೆಸ್ಟೋರೆಂಟ್‌ನಲ್ಲಿ ಉದ್ದೇಶಪೂರ್ವಕವಾಗಿ ಮಾಂಸ ಸೇವಿಸಿದ್ದ ಬ್ರಿಟಿಷ್ ಯೂಟ್ಯೂಬರ್ ಸೆನ್ಜೋ ಕ್ಷಮೆಯಾಚಿಸಿದ್ದಾನೆ. “ನಾನು ಮಿತಿಯನ್ನು ಮೀರಿ ಹಿಂದೂ ಸಮುದಾಯಕ್ಕೆ ಸಂಬಂಧಿಸಿದ ರೆಸ್ಟೋರೆಂಟ್‌ನಲ್ಲಿ ಮಾಂಸ ಸೇವಿಸಿದೆ. ನನ್ನ ಈ ವರ್ತನೆ ಅಯೋಗ್ಯ ಮತ್ತು ಜವಾಬ್ದಾರಿರಹಿತವಾಗಿತ್ತು” ಎಂದು ಅವನು ತನ್ನ ವಿಡಿಯೋದಲ್ಲಿ ಹೇಳಿದ್ದಾನೆ.

‘ಇಸ್ಕಾನ್’ನ ಈ ರೆಸ್ಟೋರೆಂಟ್‌ಗೆ ನುಗ್ಗಿ ಉದ್ದೇಶಪೂರ್ವಕವಾಗಿ ಮಾಂಸ ಸೇವಿಸುವ ಸೆನ್ಜೋನ ವಿಡಿಯೋ ಇತ್ತೀಚೆಗೆ ಪ್ರಸಾರವಾಗಿತ್ತು. ನಂತರ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಅವನ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದರು. ಇದರಿಂದ ಅವನು ಕ್ಷಮೆಯಾಚನೆಯ ಮತ್ತೊಂದು ವಿಡಿಯೋವನ್ನು ಪ್ರಸಾರ ಮಾಡಿದ್ದಾನೆ. ಈ ವಿಡಿಯೋದಲ್ಲಿ ಅವನು, “ಈ ರೆಸ್ಟೋರೆಂಟ್ ದೇವಸ್ಥಾನಕ್ಕೆ ಸಂಬಂಧಿಸಿದ್ದು ಎಂದು ನನಗೆ ತಿಳಿದಿದ್ದರೆ, ನಾನು ಯಾವುದೇ ಪರಿಸ್ಥಿತಿಯಲ್ಲೂ ‘ಪ್ರಾಂಕ್ ವಿಡಿಯೋ’ (ಮೋಜಿನ ವಿಡಿಯೋ) ಚಿತ್ರೀಕರಿಸುತ್ತಿರಲಿಲ್ಲ ಮತ್ತು ಹೊರಟು ಹೋಗಿರುತ್ತಿದ್ದೆ. ನಾನು ಆ ಪ್ರದೇಶದಲ್ಲಿನ ‘ವೀಗನ್ ರೆಸ್ಟೋರೆಂಟ್‌ಗಳನ್ನು’ ಗುರಿಯಾಗಿಸಿಕೊಂಡಿದ್ದೆ ಮತ್ತು ಹಾಸ್ಯಕ್ಕಾಗಿ ಅಲ್ಲಿಗೆ ಹೋಗಿ ಮಾಂಸ ತಿನ್ನುತ್ತಿದ್ದೆ” ಎಂದು ಹೇಳಿದ್ದಾನೆ.

ಸಂಪಾದಕೀಯ ನಿಲುವು

  • ಅಂತಹ ಕೃತ್ಯ ಎಸಗುವವರಿಂದ ಕೇವಲ ಕ್ಷಮೆಯಾಚನೆ ಸಾಲದು, ಅವರನ್ನು ಜೈಲಿಗೆ ಹಾಕಬೇಕು. ಆಗ ಮಾತ್ರ ಯಾರೂ ಮತ್ತೆ ಇಂತಹ ಕೆಲಸ ಮಾಡಲು ಧೈರ್ಯ ಮಾಡುವುದಿಲ್ಲ!
  • ಈ ಯೂಟ್ಯೂಬರ್ ಇತರ ಧರ್ಮಗಳ ಶ್ರದ್ಧಾ ಸ್ಥನಗಳಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಈ ರೀತಿ ಮಾಡಲು ಧೈರ್ಯ ಮಾಡುತ್ತಿದ್ದನೇ?