ಲಂಡನ್: ಇಸ್ಕಾನ್‌ನ ಸಸ್ಯಾಹಾರಿ ರೆಸ್ಟೋರೆಂಟ್‌ನಲ್ಲಿ ವ್ಯಕ್ತಿಯಿಂದ ಮಾಂಸಾಹಾರ ಸೇವಿಸಿ ದುರ್ವರ್ತನೆ!

ಲಂಡನ್ (ಬ್ರಿಟನ್) – ಇಲ್ಲಿನ ಇಸ್ಕಾನ್ ವತಿಯಿಂದ ನಡೆಸಲಾಗುತ್ತಿರುವ ‘ಗೋವಿಂದ’ ಎಂಬ ಶುದ್ಧ ಸಸ್ಯಾಹಾರಿ ರೆಸ್ಟೋರೆಂಟ್‌ನ ವಿಡಿಯೋ ಒಂದು ವೈರಲ್ ಆಗಿದೆ. ಅದರಲ್ಲಿ ಒಬ್ಬ ವ್ಯಕ್ತಿ ಈ ರೆಸ್ಟೋರೆಂಟ್‌ಗೆ ಪ್ರವೇಶಿಸುತ್ತಿರುವುದು ಕಾಣಿಸುತ್ತಿದೆ. ಅವನು ತನ್ನ ಬ್ಯಾಗ್‌ನಿಂದ ಮಾಂಸವನ್ನು ಹೊರತೆಗೆದು ತಿನ್ನಲು ಪ್ರಾರಂಭಿಸುತ್ತಾನೆ. ಅಲ್ಲಿನ ಮಹಿಳಾ ಸಿಬ್ಬಂದಿ “ಇದು ಶುದ್ಧ ಸಸ್ಯಾಹಾರಿ ರೆಸ್ಟೋರೆಂಟ್” ಎಂದು ಹೇಳಿ ಅವನಿಗೆ ಸೌಮ್ಯವಾಗಿ ಹೊರಗೆ ಹೋಗುವಂತೆ ಹೇಳುತ್ತಾರೆ; ಆದರೆ ಹೊರಗೆ ಹೋಗುವ ಬದಲು ಆ ವ್ಯಕ್ತಿ ರೆಸ್ಟೋರೆಂಟ್‌ನಲ್ಲಿ ಕುಳಿತು ಮಾಂಸ ತಿನ್ನುತ್ತಾನೆ ಮತ್ತು ಇತರ ಗ್ರಾಹಕರಿಗೂ ಮಾಂಸ ತಿನ್ನಿಸಲು ಪ್ರಯತ್ನಿಸುತ್ತಾನೆ. ರೆಸ್ಟೋರೆಂಟ್‌ನ ಮಹಿಳಾ ಸಿಬ್ಬಂದಿ ಅವರನ್ನು ತಡೆಯಲು ಪ್ರಯತ್ನಿಸಿದಾಗ ಅವನು ಅವರೊಂದಿಗೆ ಅಸಭ್ಯವಾಗಿ ವರ್ತಿಸುತ್ತಾನೆ.

ಸಂಪಾದಕೀಯ ನಿಲುವು

ಹಿಂದೂಗಳು ಅತಿಸಹಿಷ್ಣುಗಳಾಗಿರುವುದರಿಂದ ಯಾರಾದರೂ ಬಂದು ಅವರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತಾರೆ. ಆದರೆ, ಮುಸ್ಲಿಂ ಬಾಹುಳ್ಯದ ಪ್ರದೇಶದ ಹೋಟೆಲ್‌ನಲ್ಲಿ ಯಾರಾದರೂ ಹಂದಿ ಮಾಂಸ ತಿನ್ನಲು ಧೈರ್ಯ ಮಾಡುತ್ತಾರೆಯೇ? ಈ ಪರಿಸ್ಥಿತಿ ಹಿಂದೂಗಳಿಗೆ ನಾಚಿಕೆಗೇಡಿನ ಸಂಗತಿ!