ವಿದ್ಯಾರ್ಥಿನಿ ಮೇಲಿನ ಬಲಾತ್ಕಾರದ ಪ್ರಕರಣದಲ್ಲಿ ಕಾಂಗ್ರೆಸ್ ವಿದ್ಯಾರ್ಥಿ ಸಂಘಟನೆಯ ಒಡಿಶಾದ ಪ್ರದೇಶಾಧ್ಯಕ್ಷನ ಬಂಧನ !

ಈ ಪ್ರಕರಣದ ಬಗ್ಗೆ ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ವಾದ್ರಾರವರು ಉತ್ತರಿಸಬೇಕು!

ಭುವನೇಶ್ವರ (ಒಡಿಶಾ) – ಕಾಂಗ್ರೆಸ್ಸಿನ ವಿದ್ಯಾರ್ಥಿ ಸಂಘಟನೆ ‘ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ’ (‘ಎನ್‌ಎಸ್‌ಯುಐ’)ದ ಪ್ರದೇಶಾಧ್ಯಕ್ಷನಾದ ಉದಿತ ಪ್ರಧಾನನನ್ನು 19 ವರ್ಷದ ವಿದ್ಯಾರ್ಥಿನಿ ಮೇಲೆ ಬಲಾತ್ಕಾರ ಮಾಡಿರುವ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ.

ಮಂಚೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವಾಗ ವಿದ್ಯಾರ್ಥಿನಿಯು, ಮಾರ್ಚ್ 18 ರಂದು ಉದಿತ ಪ್ರಧಾನ ತನ್ನನ್ನು ಊಟಕ್ಕಾಗಿ ಒಂದು ಹೋಟೆಲ್‌ಗೆ ಕರೆದಿದ್ದನು. ಅಲ್ಲಿ ತಂಪು ಪಾನೀಯ ನೀಡಿದ್ದು, ಅದರಲ್ಲಿ ಕೆಲವು ಮಾದಕ ವಸ್ತುಗಳನ್ನು ಬೆರೆಸಲಾಗಿತ್ತು. ನಂತರ ಆರೋಪಿ ತನ್ನನ್ನು ಹೋಟೆಲಿನ ಕೊಠಡಿಗೆ ಕರೆದೊಯ್ದು ಬಲಾತ್ಕಾರ ಮಾಡಿದ್ದಾನೆ ಎಂದು ತಿಳಿಸಿದ್ದಾಳೆ.

ಕಾಂಗ್ರೆಸ್ಸಿನ ಮೌನವು ಅಪರಾಧಕ್ಕೆ ಬೆಂಬಲ ನೀಡಿದಂತಿದೆ ! – ಭಾಜಪ

ಭಾಜಪ ನಾಯಕ ಅಮಿತ್ ಮಾಲವೀಯರವರು ಕಾಂಗ್ರೆಸ್ಸನ್ನು ತೀವ್ರವಾಗಿ ಟೀಕಿಸುತ್ತ, `ಇದು ಅತ್ಯಂತ ನಾಚಿಕೆಗೇಡಿನ ವಿಷಯ; ಆದರೆ ಇದು ಈಗ ಆಶ್ಚರ್ಯಕರವಲ್ಲ. ಈ ಪಕ್ಷಗಳು ತಮ್ಮ ನಾಯಕರಿಗೆ ಎಷ್ಟು ದಿನಗಳವರೆಗೆ ರಕ್ಷಣೆ ನೀಡುತ್ತಲೇ ಇರುತ್ತವೆ ಎಂಬುದು ಪ್ರಶ್ನೆಯಾಗಿದೆ. ಯಾವುದೇ ಕಠಿಣ ಕ್ರಮ ಕೈಗೊಳ್ಳುವ ಮೊದಲು ಇನ್ನೆಷ್ಟು ಹುಡುಗಿಯರು ನೋವು ಅನುಭವಿಸಬೇಕು ? ಕಾಂಗ್ರೆಸ್ಸಿನ ಮೌನವು ಅಪರಾಧಗಳಿಗೆ ಒಂದು ರೀತಿಯ ಬೆಂಬಲವೇ ಆಗಿದೆ. ಈಗ ಸಮಯ ಬಂದಿದೆ. ಇಂತಹ ಪ್ರಕರಣಗಳಲ್ಲಿನ ಸತ್ಯವನ್ನು ಹೊರಗೆತರಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು’ ಎಂದು ಹೇಳಿದ್ದಾರೆ.