ಚರಖಿ ದಾದ್ರಿ (ಹರಿಯಾಣ)ದಲ್ಲಿ ನಡೆದ ಘಟನೆ

ಚರಖಿ ದಾದ್ರಿ (ಹರಿಯಾಣ) – ಮಹಾರಾಣಾ ಗ್ರಾಮದಲ್ಲಿ ಮುಸಲ್ಮಾನ ಯುವಕ ಶಾಹಿದ್ ಮತ್ತು ಹಿಂದೂ ಯುವತಿ ಪ್ರೀತಿಯ ವಿವಾಹದಿಂದಾಗಿ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಇಲ್ಲಿನ ಪಾತುವಾಸ್ ಗ್ರಾಮದಲ್ಲಿ ಖೇಡಿ ಸನ್ವಾಲ್, ಮಹಾರಾಣಾ ಮತ್ತು ಪಾತುವಾಸ್ ಈ ಮೂರು ಗ್ರಾಮಗಳ ಜನರು ಜಂಟಿ ಪಂಚಾಯತ್ ಆಯೋಜಿಸಿದ್ದರು. ಈ ಪಂಚಾಯತ್ ಸುಮಾರು 4 ಗಂಟೆಗಳ ಕಾಲ ನಡೆಯಿತು ಮತ್ತು ಇದರಲ್ಲಿ ಮಾಧ್ಯಮಗಳು, ಪೊಲೀಸ್ ಮತ್ತು ಆಡಳಿತಾಧಿಕಾರಿಗಳಿಗೆ ಪ್ರವೇಶವಿರಲಿಲ್ಲ. “ಈ ಮೂರು ಗ್ರಾಮಗಳಲ್ಲಿ ಶಾಹಿದ್ ಕುಟುಂಬದೊಂದಿಗೆ ಯಾವುದೇ ಸಾಮಾಜಿಕ ಸಂಬಂಧವನ್ನು ಇಟ್ಟುಕೊಳ್ಳಲಾಗುವುದಿಲ್ಲ” ಎಂದು ಪಂಚಾಯತ್ನಲ್ಲಿ ನಿರ್ಧರಿಸಲಾಯಿತು. ಉದ್ವಿಗ್ನ ಪರಿಸ್ಥಿತಿಯಿಂದಾಗಿ ಗ್ರಾಮದಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು. ಇನ್ನೊಂದೆಡೆ ಶಾಹಿದ್ ಮತ್ತು ಪ್ರೀತಿ ಅವರ ವಿವಾಹ ಈಗ ಮುರಿದುಬಿದ್ದಿದೆ. ಅವರ ವಿಚ್ಛೇದನ ಪ್ರಕ್ರಿಯೆ ನಡೆಯುತ್ತಿದ್ದು, ಆ ಸಂಬಂಧ ಅಫಿಡವಿಟ್ ಕೂಡ ಸಲ್ಲಿಸಲಾಗಿದೆ.
ಜುಲೈ 3 ರಂದು ಮಹಾರಾಣಾ ಗ್ರಾಮದ ಸುಮಾರು 25 ವರ್ಷದ ಶಾಹಿದ್, ಅದೇ ಗ್ರಾಮದ ಹಿಂದೂ ಯುವತಿ ಪ್ರೀತಿಯನ್ನು ಮತಾಂತರಗೊಳಿಸಿ ವಿವಾಹವಾದನು. ಜುಲೈ 6 ರಂದು ಈ ಘಟನೆ ಗ್ರಾಮಸ್ಥರಿಗೆ ತಿಳಿದಾಗ, ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿ ಗ್ರಾಮದಲ್ಲಿ ಮುಸಲ್ಮಾನರ ಅಂಗಡಿಗಳನ್ನು ಮುಚ್ಚಿಸಿದರು. ಈ ಘಟನೆಯ ನಂತರ ಶಾಹಿದ್ ಮನೆಯ ಹೊರಗೆ ಪೊಲೀಸ್ ಬಂದೋಬಸ್ತ್ ಇರಿಸಲಾಯಿತು.
ಸಂಪಾದಕೀಯ ನಿಲುವು
|
‘ಎಸ್.ಐ.ಆರ್.’ ಪ್ರಕ್ರಿಯೆ ನಡೆಸುತ್ತಿದ್ದ ಶಿಕ್ಷಕನ ಮೇಲೆ ೩ ಜನ ಮತಾಂಧರಿಂದ ಹಲ್ಲೆ !
ನಟ ಅಮೀರ್ ಖಾನ್ ಅವರ ಮಲ ಸಹೋದರನ ಮೇಲೆ ಮಾಜಿ ಪತ್ನಿಯ ಗಂಭೀರ ಆರೋಪ!
ಉತ್ತರಾಖಂಡ: ೧೦೬ ಜನರಿಂದ ಹಿಂದೂ ಧರ್ಮಕ್ಕೆ ಘರವಾಪಸಿ
ಆಮೀರ್ ಖಾನ್ಗೆ ಜೀವ ಬೆದರಿಕೆ; ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೆಸರಿನಲ್ಲಿ ಸಂದೇಶ : Love Jihad
ವಿಠ್ಠಲ-ರುಕ್ಮಿಣಿ ಮೂರ್ತಿಗೆ ರಾಸಾಯನಿಕ ಲೇಪನಕ್ಕೆ ಗ್ರೀನ್ ಸಿಗ್ನಲ್ : Pandharpur Temple News
ಪ್ರೇಮದ ನೆಪದಲ್ಲಿ ಕಿರುಕುಳ ಆರೋಪ; ಸುಫಿಯಾನ್ ಖಾನ್ ವಿರುದ್ಧ ದೂರು : Sufiyan Khan Case