|

ಲಂಡನ್ (ಬ್ರಿಟನ್) – ‘ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್’ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತವು ಪಾಕಿಸ್ತಾನದ ವಿರುದ್ಧ ಆಡದಿರಲು ನಿರ್ಧರಿಸಿದ ನಂತರ, ಪಾಕಿಸ್ತಾನ ತಂಡದ ನಾಯಕ ಶಾಹಿದ್ ಅಫ್ರಿದಿ ಕೆರಳಿದ್ದಾರೆ. ಅವರು ಭಾರತೀಯ ಆಟಗಾರ ಶಿಖರ್ ಧವನ್ ಅವರನ್ನು ‘ಹಾಳಾದ ಮೊಟ್ಟೆ’ ಎಂದು ಕರೆದು ಆಕ್ಷೇಪಾರ್ಹವಾಗಿ ಟೀಕಿಸಿದ್ದಾರೆ. “ಭಾರತ ಪಾಕಿಸ್ತಾನದೊಂದಿಗೆ ಆಡಲು ಬಯಸದಿದ್ದರೆ, ತಂಡವು ಇಲ್ಲಿಗೆ ಬರಬಾರದಿತ್ತು. ನೀವು ಇಲ್ಲಿಗೆ ಬಂದು, ಅಭ್ಯಾಸ ಮಾಡಿ ಕೊನೆಯ ಕ್ಷಣದಲ್ಲಿ ಎಲ್ಲವನ್ನೂ ಬದಲಾಯಿಸಿದ್ದು ಸರಿಯಲ್ಲ” ಎಂದು ಅಫ್ರಿದಿ ಹೇಳಿದ್ದಾರೆ. ಯುವರಾಜ್ ಸಿಂಗ್, ಸುರೇಶ್ ರೈನಾ, ಇರ್ಫಾನ್ ಪಠಾಣ್, ಶಿಖರ್ ಧವನ್ ಸೇರಿದಂತೆ ಅನೇಕ ಮಾಜಿ ಭಾರತೀಯ ಆಟಗಾರರು ಪಾಕಿಸ್ತಾನ ವಿರುದ್ಧದ ಪಂದ್ಯವನ್ನು ಆಡಲು ನಿರಾಕರಿಸಿದ ನಂತರ ಈ ಪಂದ್ಯ ರದ್ದುಗೊಂಡಿತು.
‘ಕ್ರಿಕೆಟ್ ಅನ್ನು ರಾಜಕೀಯದಿಂದ ದೂರವಿಡಬೇಕಂತೆ’! – ಅಫ್ರಿದಿ

ಅಫ್ರಿದಿ, ನಾವು ಇಲ್ಲಿಗೆ ಕ್ರಿಕೆಟ್ ಆಡಲು ಬಂದಿದ್ದೆವು ಮತ್ತು ನಾನು ಯಾವಾಗಲೂ ಹೇಳುತ್ತೇನೆ, ‘ಕ್ರಿಕೆಟ್ ಅನ್ನು ರಾಜಕೀಯದಿಂದ ದೂರವಿಡಬೇಕು ಎಂದು.’ (ಇದಕ್ಕೆ ‘ಕಳ್ಳನಿಗೆ ಪಿಳ್ಳೆ ನೆವ’ ಎನ್ನುತ್ತಾರೆ! ಭಾರತದ ವಿರುದ್ಧ ಪ್ರತಿದಿನ ಭಯೋತ್ಪಾದಕ ಕೃತ್ಯಗಳನ್ನು ನಡೆಸುವುದು ಇನ್ನೊಂದೆಡೆ ಆಟದಲ್ಲಿ ರಾಜಕೀಯ ತರಬಾರದು ಎನ್ನುವುದು ಅಫ್ರಿದಿ ಮತ್ತು ಪಾಕಿಸ್ತಾನದ ಮನಸ್ಥಿತಿಯನ್ನು ತೋರಿಸುತ್ತದೆ! – ಸಂಪಾದಕರು) ಆಟಗಾರ ಉತ್ತಮ ರಾಯಭಾರಿಯಾಗಿರಬೇಕು, ತನ್ನ ದೇಶಕ್ಕೆ ಅವಮಾನವಾಗಬಾರದು. (ಅಫ್ರಿದಿಯ ಬಗ್ಗೆ ಯಾರಾದರೂ ಹೀಗೆ ಹೇಳಬಹುದೇ? – ಸಂಪಾದಕರು) ಕ್ರೀಡೆ ಜನರನ್ನು ಒಗ್ಗೂಡಿಸುತ್ತದೆ; ಆದರೆ ಪ್ರತಿಯೊಂದರಲ್ಲೂ ರಾಜಕೀಯ ಬಂದರೆ, ನಾವು ಹೇಗೆ ಮುಂದುವರಿಯುವುದು? (‘ಪ್ರತಿಯೊಂದರಲ್ಲೂ ಕಾಶ್ಮೀರ ವಿಷಯವನ್ನು ಎತ್ತಿದಾಗ ನಾವು ಹೇಗೆ ಮುಂದುವರಿಯುವುದು?’ ಎಂದು ಅಫ್ರಿದಿ ಏಕೆ ಯೋಚಿಸುವುದಿಲ್ಲ? – ಸಂಪಾದಕರು) ಸಂವಾದವಿಲ್ಲದೆ ಏನೂ ಬಗೆಹರಿಯುವುದಿಲ್ಲ. ಕೆಲವೊಮ್ಮೆ ಒಂದು ಹಾಳಾದ ಮೊಟ್ಟೆ ಎಲ್ಲವನ್ನೂ ಹಾಳುಮಾಡುತ್ತದೆ. ನನ್ನಿಂದಾಗಿ ಪಂದ್ಯ ನಿಂತಿದೆ ಎಂದು ನನಗೆ ತಿಳಿದಿದ್ದರೆ, ನಾನು ಮೈದಾನಕ್ಕೆ ಬರುತ್ತಿರಲಿಲ್ಲ; ಆದರೆ ಕ್ರಿಕೆಟ್ ಮುಂದುವರಿಯಬೇಕು. ಕ್ರಿಕೆಟ್ ನನ್ನಕ್ಕಿಂತ ದೊಡ್ಡದು. ಯಾವುದೇ ಭಾರತೀಯ ಆಟಗಾರ ‘ನಾನು ಪಾಕಿಸ್ತಾನದ ವಿರುದ್ಧ ಆಡುವುದಿಲ್ಲ’ ಎಂದು ಹೇಳಿದರೆ, ಸರಿ ಆಡಬೇಡ, ಪಕ್ಕಕ್ಕೆ ಕುಳಿತುಕೋ; ಆದರೆ ಆಟ ಮುಖ್ಯ, ಎಂದು ಹೇಳಿದ್ದಾನೆ.
ಸಂಪಾದಕೀಯ ನಿಲುವು
|
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation