Russia Ukraine War : ಉಕ್ರೇನ್ ಮೇಲೆ ರಷ್ಯಾದಿಂದ 300ಕ್ಕೂ ಹೆಚ್ಚು ಡ್ರೋನ್‌ಗಳು ಮತ್ತು 30 ಕ್ರೂಸ್ ಕ್ಷಿಪಣಿಗಳಿಂದ ದಾಳಿ

ಕೈವ್ (ಉಕ್ರೇನ್) – ರಷ್ಯಾವು ಮತ್ತೊಮ್ಮೆ ಉಕ್ರೇನ್ ಮೇಲೆ ಭೀಕರ ವೈಮಾನಿಕ ದಾಳಿ ನಡೆಸಿದೆ. ಜುಲೈ 19ರ ರಾತ್ರಿ ರಷ್ಯಾದ ಸೇನೆಯು ಉಕ್ರೇನ್‌ನ ಒಡೆಸಾ ನಗರದ ಮೇಲೆ ನೂರಾರು ಡ್ರೋನ್‌ಗಳು ಮತ್ತು ಕ್ಷಿಪಣಿಗಳನ್ನು ಹಾರಿಸಿದೆ. ಈ ದಾಳಿಯಲ್ಲಿ ಓರ್ವನ ಸಾವಾಗಿದೆ, ಹಾಗೂ ಹಲವರು ಗಾಯಗೊಂಡಿದ್ದಾರೆ. ಉಕ್ರೇನ್ ನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ‘ಎಕ್ಸ್’ ನಲ್ಲಿ ಪೋಸ್ಟ್ ಮಾಡುವ ಮೂಲಕ ಈ ದಾಳಿಯನ್ನು ದೃಢಪಡಿಸಿದ್ದಾರೆ.

ರಷ್ಯಾದ ರಕ್ಷಣಾ ಸಚಿವಾಲಯವು, ಉಕ್ರೇನ್‌ನಿಂದ ನಿರಂತರವಾಗಿ ಡ್ರೋನ್‌ಗಳ ಮೂಲಕ ರಷ್ಯಾದ ಗಡಿಗಳ ಮೇಲೆ ದಾಳಿಗಳು ನಡೆಯುತ್ತಿವೆ ಎಂದು ಹೇಳಿದೆ. ಜುಲೈ 19ರ ರಾತ್ರಿ 71 ಉಕ್ರೇನಿಯನ್ ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ ಎಂದು ಅದು ತಿಳಿಸಿದೆ. ಮಾಸ್ಕೋದ ಮೇಯರ್ ಸೆರ್ಗೆ ಸೊಬಿಯಾನಿನ್ ಅವರು, ಮಾಸ್ಕೋ ಬಳಿ ತಲುಪುತ್ತಿದ್ದ 13 ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ, ಎಂದು ಹೇಳಿದ್ದಾರೆ.